
ವಾಷಿಂಗ್‌ಟನ (ಜೂ.12): ಬಡ ಹೆಣ್ಣುಮಕ್ಕಳ ಭವಿಷ್ಯಕ್ಕೆ ಆಸರೆ ಒದಗಿಸುವ ಉದ್ದೇಶದಿಂದ 2006ರಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದ ಭಾಗ್ಯಲಕ್ಷ್ಮೀ ಬಾಂಡ್‌ನಂಥದ್ದೇ ಯೋಜನೆಯೊಂದನ್ನು ಅಮೆರಿಕದಲ್ಲಿ ಜಾರಿಗೆ ತರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. 2025ರಿಂದ 2029ರವರೆಗಿನ ಅವಧಿಯಲ್ಲಿ ಅಮೆರಿಕದಲ್ಲಿ ಜನಿಸಿದ ಪ್ರತಿ ಮಗುವಿನ ಖಾತೆಗೆ 1,000 ಡಾಲರ್ (ಸುಮಾರು 85,500 ರು.) ಮೊತ್ತವನ್ನು ಹಾಕಿ ಮಗುವಿನ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಲು ಚಿಂತನೆ ನಡೆಸಿದ್ದಾರೆ.
ಏನಿದು ಯೋಜನೆ?:
2025ರಿಂದ 2029ರವರೆಗಿನ ಅವಧಿಯಲ್ಲಿ ಜನಿಸಿದ ಪ್ರತಿ ಮಗುವಿನ ಹೆಸರಿನಲ್ಲಿ ‘ಟ್ರಂಪ್ ಖಾತೆ’ಯನ್ನು ತೆರೆಯಲಾಗುತ್ತದೆ. ಸರ್ಕಾರ 1 ಬಾರಿ ಈ ಖಾತೆಗೆ 85,500 ರು. ಜಮೆ ಮಾಡುತ್ತದೆ. ಇದು ಮಗುವಿನ ಹತ್ತವರು ಅಥವಾ ಪೋಷಕರ ನಿಯಂತ್ರಣಲ್ಲಿದ್ದು, ಅವರೂ ವರ್ಷಕ್ಕೆ 5000 ಡಾಲರ್ (ಸುಮಾರು 4.2 ಲಕ್ಷ ರು.) ವರೆಗಿನ ಹಣವನ್ನು ಜಮೆ ಮಾಡಲು ಅವಕಾಶವಿರುತ್ತದೆ. ಈ ಹಣವನ್ನು ಷೇರುಪೇಟೆಯಲ್ಲಿ ಹೂಡಲಾಗುತ್ತದೆ. ಇದರಿಂದ ಲಭ್ಯವಾಗುವ ಆದಾಯಕ್ಕೆ ತೆರಿಗೆಯೂ ಇರದು. ಮಗು 21ನೇ ವರ್ಷಕ್ಕೆ ತಲುಪಿದಾಗ ಅವರಿಗೆ ಹಣ ನೀಡಲಾಗುವುದು.
ಆದರೆ ತಮ್ಮ ಬಹು ವಿವಾದಿತ ತೆರಿಗೆ ಮಸೂದೆಗೆ ಸಂಸತ್ ಅನುಮತಿ ನೀಡಿದರೆ ಮಾತ್ರವೇ ಟ್ರಂಪ್ ಖಾತೆ ಯೋಜನೆ ಜಾರಿ ಮಾಡುವುದಾಗಿ ಟ್ರಂಪ್ ಷರತ್ತು ವಿಧಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ