ವಲಸೆ ಕಾರ್ಮಿಕರನ್ನು ಹೊತ್ತೊಯ್ದಿದ್ದ ಶ್ರಮಿಕ್ ರೈಲು| ಗುಜರಾತ್‌ನಿಂದ ಬಿಹಾರಕ್ಕೆ ಹೋಗಬೇಕಿದ್ದ ಶ್ರಮಿಕ್ ರೈಲು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದೆ| ರೈಲು ಪತ್ತೆ ಹಚ್ಚಿ ಮೇ 25ರಂದು ಬಿಹಾರಕ್ಕೆ ರವಾನೆ
ನವದೆಹಲಿ(ಮೇ.27): ಇತ್ತೀಚೆಗಷ್ಟೇ ವಲಸೆ ಕಾರ್ಮಿಕರನ್ನು ಹೊತ್ತೊಯ್ದಿದ್ದ ಶ್ರಮಿಕ್ ರೈಲೊಂದು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳದೆ ಒಡಿಶಾಕ್ಕೆ ತೆರಳಿದ್ದ ಘಟನೆ ಬೆನ್ನಲ್ಲೇ, ಗುಜರಾತ್‌ನಿಂದ ಬಿಹಾರಕ್ಕೆ ಹೋಗಬೇಕಿದ್ದ ಶ್ರಮಿಕ್ ರೈಲು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 16ರಂದು ಗುಜರಾತ್‌ನ ಸೂರತ್‌ನಿಂದ ಹೊರಟಿದ್ದ ರೈಲು ಮೇ 18ಕ್ಕೆ ಬಿಹಾರದ ಚಾಪ್ರ ರೈಲು ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ, ಈ ರೈಲ್ವೆ ಇಲಾಖೆ ಸಿಬ್ಬಂದಿ ಯಡವಟ್ಟಿನಿಂದಾಗಿ ಈ ರೈಲು ಬೆಂಗಳೂರಿಗೆ ಬಂದು ನಿಂತಿತ್ತು.
ಯುಪಿಗೆ ಹೊರಟಿದ್ದ ಶ್ರಮಿಕ್ ರೈಲು ತಲುಪಿದ್ದು ಒಡಿಶಾಗೆ: ವಲಸೆ ಕಾರ್ಮಿಕರು ಕಂಗಾಲು!
ಕೊನೆಗೆ, ಈ ರೈಲನ್ನು ಪತ್ತೆ ಹಚ್ಚಿ ಬಳಿಕ ಮೇ 25ರಂದು ಬಿಹಾರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ರೈಲ್ವೇ ಸಚಿವ ಪಿಯೂಷ್ ಗೋಯಲ್ ರಾಜೀನಾಮೆ ನೀಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.