ಕೋವಿಡ್ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು| ಶವಾಗಾರಗಳಾಗಿ ಮಾರ್ಪಾಡಾಗುತ್ತಿವೆ ಮುಂಬೈ ಆಸ್ಪತ್ರೆಗಳು| ಬಿಜೆಪಿ ಶಾಸಕ ನಿತೀಶ್ ರಾಣೆ ಟ್ವೀಟ್ ವೈರಲ್
ಮುಂಬೈ(ಮೇ.27): ಕೋವಿಡ್ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು ಶವಾಗಾರಗಳಾಗಿ ಕಾಣುತ್ತಿದ್ದು, ಇಲ್ಲಿನ ಕಿಂಗ್ ಎಡ್ವರ್ಡ್ ಸ್ಮರಣಾರ್ಥ ಆಸ್ಪತ್ರೆಯ ಕಾರಿಡಾರ್‌ನಲ್ಲಿ ನೂರಾರು ಸ್ಟ್ರೆಚರ್‌ಗಳಲ್ಲಿ ಶವಗಳನ್ನು ಇರಿಸಲಾಗಿದೆ.
ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!
ಬಿಜೆಪಿ ಶಾಸಕ ನಿತೀಶ್ ರಾಣೆ ಈ ಬಗ್ಗೆ ಫೋಟೋ ಟ್ವೀಟ್ ಮಾಡಿದ್ದು, ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಆದರೆ ಇದು ಸಾರ್ವಜನಿಕ ಬಳಕೆಯ ಕಾರಿಡಾರ್ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
This is KEM hospital Mumbai ! pic.twitter.com/5KQQcCrYCH
— nitesh rane (@NiteshNRane)ಏತನ್ಮಧ್ಯೆ ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿದ್ದ ಶುಶ್ರೂಷಕ ಮೃತ ಪಟ್ಟಿದ್ದು, ಸೋಂಕಿನ ಲಕ್ಷಣ ಕಾಣಿಸಿಕೊಂಡರೂ ಅವರಿಗೆ ರಜೆ ನೀಡಲಿಲ್ಲ. ಪರೀಕ್ಷೆಯೂ ನಡೆಸಲಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದಾರೆ.