
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ನಂಟಿರುವ ಮಾದಕವಸ್ತು ಜಾಲದಲ್ಲಿ ನೋರಾ ಫತೇಹಿ, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್‌ನ ಹಲವು ಖ್ಯಾತನಾಮರ ಹೆಸರು ತಳುಕು ಹಾಕಿಕೊಂಡಿದೆ. ಆಗಸ್ಟ್‌ನಲ್ಲಿ ದುಬೈನಿಂದ ಗಡೀಪಾರಾಗಿದ್ದ ತಾಹೆರ್ ಡೋಲಾ ಎಂಬಾತ ತನ್ನ ತಂದೆಯ ಕರಾಳ ದಂಧೆ ಹಾಗೂ ಅದರಲ್ಲಿ ತಾರೆಯರ ಪಾತ್ರದ ಬಗ್ಗೆ ಮುಂಬೈ ಪೊಲೀಸರ ಮಾದಕವಸ್ತು ವಿರೋಧಿ ಘಟಕದ ಮುಂದೆ ಬಾಯಿಬಿಟ್ಟಿದ್ದಾನೆ.
ದಾವೂದ್‌ನ ಸಹಚರನಾಗಿರುವ ಸಲೀಂ ಡೋಲಾ ದುಬೈನಿಂದ ಡ್ರಗ್ಸ್ ಜಾಲವನ್ನು ನಿಯಂತ್ರಿಸುತ್ತಿದ್ದು, ಭಾರತದ 7-8 ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಈತ ಮೆಫೆಡ್ರೋನ್ ಎಂಬ ಮಾದಕವಸ್ತು ಕಳಿಸುತ್ತಿದ್ದ. ಅದನ್ನು ಎಂ-ಕ್ಯಾಟ್, ಮಿಯಾವ್ ಮಿಯಾವ್, ಐಸ್ ಎಂದೂ ಕರೆಯಲಾಗುತ್ತದೆ.
ಆತ ಭಾರತ ಮತ್ತು ವಿದೇಶಗಳಲ್ಲಿ ಆಯೋಜಿಸಿದ್ದ ಡ್ರಗ್ ಪಾರ್ಟಿಗಳಲ್ಲಿ ಹಲವು ಬಾಲಿವುಡ್ ನಟರು, ಮಾಡೆಲ್, ರ‍್ಯಾಪರ್, ನಿರ್ಮಾಪಕರು ಭಾಗಿಯಾಗುತ್ತಿದ್ದರು ಎಂದು ಹೇಳಿದ್ದಾನೆ. ಜತೆಗೆ, ಅಲಿಶಾ ಪಾರ್ಕರ್, ನೋರಾ ಫತೇಹಿ, ಶ್ರದ್ಧಾ ಕಪೂರ್ ಮತ್ತು ಆಕೆಯ ಸಹೋದರ ಸಿದ್ಧಾರ್ಥ್, ಜಿಶಾನ್ ಸಿದ್ದಿಕಿ, ಓರಿ ಅಲಿಯಾಸ್ ಓರ್ಹಾನ್, ಅಬ್ಬಾಸ್ ಮಸ್ತಾನ್, ಲೋಕಾರ ಹೆಸರನ್ನೂ ಬಾಯ್ಬಿಟ್ಟಿದ್ದಾನೆ. ಇವರಿಗೆಲ್ಲಾ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.
ಈ ಪ್ರಕರಣವನ್ನು ಮುಂಬೈ ಪೊಲೀಸರು, ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಅಪರಾಧ ವಿಭಾಗ ಜಂಟಿಯಾಗಿ ತನಿಖೆ ನಡೆಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ