ಆಪ್ ಶಾಸಕನ ಮೇಲೆ ಗುಂಡಿನ ದಾಳಿ, ಓರ್ವ ಸಾವು: ಆರೋಪಿಗಳು ಅರೆಸ್ಟ್!

By Suvarna NewsFirst Published Feb 12, 2020, 11:29 AM IST
Highlights

ಚುನಾವಣೆ ಗೆದ್ದ ಆಪ್, ಶೋಭಾ ಯಾತ್ರೆ ನಡೆಸುತ್ತಿದ್ದ ಶಾಸಕನ ಮೇಲೆ ಗುಂಡಿನ ದಾಳಿ| ದಾಳಿಯಲ್ಲಿ ಓರ್ವ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ| ಆರೋಪಿಗಳು ಅರೆಸ್ಟ್

ನವದೆಹಲಿ[ಫೆ.12]: ನೈರುತ್ಯ ದೆಹಲಿಯ ಕಿಶನ್ ಗಢ ಹಳ್ಳಿಯಲ್ಲಿ ಆಪ್ ಶಾಸಕ ನರೇಶ್ ಯಾದವ್ ಬೆಂಗಾವಲಿನ ಮೇಲೆ ಮಂಗಳವಾರ ತಡರಾತ್ರಿ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆಮ್ ಆದ್ಮಿ ಪಕ್ಷದ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಘಟನೆ ಸಂಬಂದ ಮೂವರ ವಿರುದ್ಧ ಹತ್ಯೆ ಹಾಗೂ ಹತ್ಯೆಗೆ ಯತ್ನಿಸಿರುವ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಕಾಳೂ, ಶಾಮೀ ಹಾಗೂ ದೇವ್ ಎಂದು ಗುರುತಿಸಲಾಗಿದೆ. ಇನ್ನು ಬಂಧಿತ ಆರೋಪಿಗಳಲ್ಲೊಬ್ಬನಾದ ಕಾಳೂ ತಾನು ಈ ದಾಳಿಯಲ್ಲಿ ಪಾಲ್ಗೊಂಡಿದ್ದೆ ಎಂದಿದ್ದಾನೆ. 

ಪ್ರಕರಣ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ 'ಆರೋಪಿಗಳು ತಾವು ಆಪ್ ಶಾಸಕನ ಮೇಲ;ಎ ದಾಳಿ ಮಾಡಲು ಬಂದಿರಲಿಲ್ಲ. ಅಶೋಕ್ ಮಾನ್ ಹಾಗೂ ಆತನ ತಮ್ಮನ ಮಗ ಹರೇಂದ್ರ್ ರನ್ನು ಹತ್ಯೆಗೈಯ್ಯಲು ಬಂದಿದ್ದೆವು ಎಂದಿದ್ದಾರೆ. ಅಲ್ಲದೇ ಅಶೋಕ್ ಮಾನ್ ಸಮೀಪಕ್ಕೆ ತಲುಪಿದ ಆರೋಪಿ 6 ಬಾರಿ ಗುಂಡು ಹಾರಿಸಿದ್ದು, ಎರಡು ಗುಂಡು ಹರೇಂದ್ರ್ ಗೆ ತಗುಲಿವೆ' ಎಂದಿದ್ದಾರೆ.

ದೆಹಲಿ ಚುನಾವಣೆ 2020: ಕೇಜ್ರಿಗೆ ಮತ್ತೆ ಗದ್ದುಗೆ

ಅಲ್ಲದೇ 'ಆರೋಪಿಗಳು ವಿಚಾರಣೆ ವೇಳೆ ಕಾಳೂ ತಮ್ಮನ ಮಗನ ಮೇಲೆ 2019ರಲ್ಲಿ ನಡೆದ ದಾಳಿಯಲ್ಲಿ, ಆತನ ಕಾಲಿಗೆ ಗುಂಡು ತಗುಲಿತ್ತು. ಆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಕಾಳೂಗೆ ಈ ದಾಳಿ ಅಶೋಕ್ ಮಾನ್ ಮಾಡಿಸಿದ್ದರೆಂಬ ಅನುಮಾನ ಕಾಡಿತ್ತು. ಆದರೆ ಪೊಲೀಸರು ದಾಖಲಿಸಿದ್ದ FIRನಲ್ಲಿ ಅಶೋಕ್ ಹೆಸರಿರಲಿಲ್ಲ' ಎಂದಿದ್ದಾರೆ.

ಗುಂಡಿನ ದಾಳಿ ಹೇಗಾಯ್ತು?

ಮಂಗಳವಾರ ತಡರಾತ್ರಿ ನೂತನ ಶಾಸಕ ಹಾಗೂ ಅವರ ಬೆಂಬಲಿಗರು ತಾವು ಗೆದ್ದ ಕ್ಷೇತ್ರ ಮಹಾರೌಲಿ ಶೋಭಾ ಯಾತ್ರೆ ಬಳಿಕ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿ ಮರಳುತ್ತಿದ್ದರು. ಹೀಗಿರುವಾಗ ಶಾಸಕನ ಬೆಂಬಲಿಗರ ಮೇಲೆ ಏಳು ಸುತ್ತು ಗುಂಡಿನ ದಾಳಿ ನಡೆದಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಆಪ್ ಶಾಸಕ ಸಂಜಯ್ ಸಿಂಗ್ 'ಮಹಾರೌಲಿ ಶಾಸಕ ನರೇಶ್ ಯಾದವ್ ಬೆಂಬಲಿಗರ ಮೇಲೆ ದಾಳಿ ನಡೆದಿದೆ. ಅಶೋಕ್ ಮಾನ್ ಹತ್ಯೆಗೈಯ್ಯಲಾಗಿದೆ' ಎಂದು ಬರೆದಿದ್ದಾರೆ

click me!