ಪ್ಲೀಸ್ ಕಾಪಾಡಿ: ವಿಡಿಯೋ ಮಾಡ್ತಾನೆ ನಿಂತ ಜನ, ಪತ್ನಿ ಮಡಿಲಲ್ಲೇ ಕೊನೆಯುಸಿರೆಳೆದ ಪತಿ!

By Web DeskFirst Published Dec 9, 2019, 12:52 PM IST
Highlights

ರೈಲಿಗಾಗಿ ಕಾಯುತ್ತಿದ್ದ ನವ ದಂಪತಿ| ಪತಿ ಮೇಲೆ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿ| ಗುಂಡೇಟು ತಗುಲಿ ಕುಸಿದು ಬಿದ್ದ ಪತಿ| ದಯವಿಟ್ಟು ಯಾರಾದ್ರೂ ಸಹಾಯ ಮಾಡಿ ಎಂದು ಗೋಗರೆದ ಪತ್ನಿ| ವಿಡಿಯೋ ಮಾಡ್ತಾನೆ ನಿಂತ್ರು ಜನ, ಯಾರೂ ಸಹಾಯಕ್ಕೆ ಧಾವಿಸಲಿಲ್ಲ| ನರಳಾಡುತ್ತಾ ಕೊನೆಯುಸಿರೆಳೆದ ಪತಿ

ಪಾಟ್ನಾ[ಡಿ.09]: ಬಿಹಾರದ ಸೀವಾನ್ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಗಲು ಹೊತ್ತು ಆತನ ಪತ್ನಿ ಎದುರೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪತಿಯ ತಲೆಯನ್ನು ಮಡಿಲಲ್ಲಿಟ್ಟು ನವವಿವಾಹಿತ ಮಹಿಳೆ ಯಾರಾದ್ರೂ ನನ್ನ ಗಂಡನನ್ನು ಕಾಪಾಡಿ ಎಂದು ಕಣ್ಣೀರಿಡುತ್ತಿದ್ದರೆ, ಜನರೆಲ್ಲರೂ ಯಾವುದೋ ತಮಾಷೆ ನೋಡಿದಂತೆ ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಾ, ಸಹಾಯ ಮಾಡದೇ ಮಾನವೀಯತೆ ಮರೆದಿದ್ದಾರೆ. ಅಂತಿಮವಾಗಿ ಗಾಯಗೊಂಡಿದ್ದ ಪತಿ, ನರಳುತ್ತಲೇ ತನ್ನ ಪತ್ನಿಯ ಮಡಿಲಲ್ಲಿ ಇಕೊನೆಯುಸಿರೆಳೆದಿದ್ದಾನೆ. ಈ ಘಟನೆಯ ವಿಡಿಯೋ ಸೋಶಧಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬೆಂಗಳೂರಲ್ಲಿ 11 ತಿಂಗಳಲ್ಲಿ 133 ರೇಪ್‌ ಕೇಸ್‌!

ಮೃತ ವ್ಯಕ್ತಿ ಕೋಲ್ಕತ್ತಾದ ಓರ್ವ ಟಯರ್ ಉದ್ಯಮಿ ಎನ್ನಲಾಗಿದೆ. ಈ ಘಟನೆ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ನಡೆದಿದೆ. ಮೃತ ವ್ಯಕ್ತಿ ಮೊಹಮ್ಮದ್ ಫೈಸಲ್ ತನ್ನ ಅಂಜುಮ್ ಖಾತೂನ್ ಜೊತೆ ಕೋಲ್ಕತ್ತಾಗೆ ತೆರಳಲು ಬಿಹಾರದ ರೈಲ್ವೇ ನಿಲ್ದಾಣದಲ್ಲಿ ಭಾಗ್ ಎಕ್ಸ್‌ಪ್ರೆಸ್‌ಗಾಗಿ ಕಾಯುತ್ತಿದ್ದ. ಈ ವೇಳೆ ಪ್ಲಾಟ್ ಫಾರಂ ನಂ. 1ಕ್ಕೆ ಆಗಮಿಸಿದ ಅನಾಮಿಕ ವ್ಯಕ್ತಿ ಹಿಂಬದಿಯಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗಾಯಗೊಂಡ ಫೈಸಲ್ ಅಲ್ಲೇ ಕುಸಿದು ಬಿದ್ದಿದ್ದಾನೆ.

ಪಕ್ಕದಲ್ಲಿದ್ದ ಪತ್ನಿ ಕೂಡಲೇ ತನ್ನ ಪತಿಯ ತಲೆ ಹಿಡಿದು ಮಡಿಲಲ್ಲಿ ಮಲಗಿಸಿ, ಅಲ್ಲಿ ನಿಂತಿದ್ದ ಜನರಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವಂತೆ ಗೋಗರೆದಿದ್ದಾಳೆ. ಆದರೆ ಜನರೆಲ್ಲಾ ಮಾತ್ರ ಅಮಾನವೀಯತೆ ಮೆರೆದಿದ್ದಾರೆ. ಸಹಾಯಕ ಮಹಿಳೆಯೊಬ್ಬಳು ತನ್ನ ಪತಿಯನ್ನು ಬದುಕಿಸಲು ಪರಿ ಪರಿಯಾಗಿ ಬೇಡಿಕೊಂಡರೂ, ನಜರ ಮನಸ್ಸು ಮಾತ್ರ ಕರಗಲಿಲ್ಲ. ಕಲ್ಲು ಹೃದಯದಂತೆ ಈ ದೃಶ್ಯಗಳನ್ನು ರೆಕಾರ್ಡ್ ಮಾಡಲಾರಂಭಿಸಿದ್ದಾರೆ. ಕೆಲ ಸಮಯದ ಬಳಿಕ ಪೊಲೀಸ್ ಸಿಬ್ಬಂದಿ ಅಂಜುಮ್ ಬಳಿ ಏನಾಯ್ತೆಂದು ವಿಚಾರಿಸಿದ್ದಾನೆ. ಆದರೆ ಆತನೂ ಫೈಸಲ್‌ನನ್ನು ಆಸ್ಪತ್ರೆಗೆ ಕರೆದೊಯ್ದಿಲ್ಲ. ಅಂತಿಮವಾಗಿ ಫೈಸಲ್ ತನ್ನ ಪತ್ನಿಯ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾನೆ.

ಪುತ್ರಿಯನ್ನ ನೋಡುವ ಹಂಬಲದಿಂದ ಶಾಲೆಯತ್ತ ಹೊರಟ ತಾಯಿ ವಿಧಿಯಾಟಕ್ಕೆ ಬಲಿ..!

6 ತಿಂಗಳ ಹಿಂದಷ್ಟೇ ಮದುವೆ

ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಅಂಜುಮ್ ತಾನು ಸುಲ್ತಾನ್‌ಪುರ್‌ನಲ್ಲಿರುವ ನನ್ನ ತವರು ಮನೆಯಿಂದ ಕೋಲ್ಕತ್ತಾಗೆ ತೆರಳುವ ರೈಲಿಗೆ ಕಾಯುತ್ತಿದ್ದೆ ಎಂದಿದ್ದಾರೆ. ಈ ಜೋಡಿಯ ವಿವಾಹ ಕಳೆದ 6 ತಿಂಗಳ ಹಿಂದಷ್ಟೇ ನಡೆದಿತ್ತು. ಫೈಸಲ್ ತನ್ನ ಪತ್ನಿಯನ್ನು ಕರೆದೊಯ್ಯಲು ಕೋಲ್ಕತ್ತಾದಿಂದ ಸೀವಾನ್‌ಗೆ ಬಂದಿದ್ದ. ಇನ್ನು ಈ ಘಟನೆಗೆ ಕಾರಣವೇನು ಎಂಬುವುದು ಮಾತ್ರ ತಿಳಿದು ಬಂದಿಲ್ಲ.

ಪ್ಲಾಟ್‌ಫಾರಂನಲ್ಲಿ ಯಾವುದೇ ಸಿಸಿಟಿವಿ ಇಲ್ಲ

ಇಷ್ಟೆಲ್ಲಾ ನಡೆದರು ಆರೋಪಿಯ ಸುಳಿವು ಪಡೆಯಲು ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎಂಬ ವಿಚಾರ ಆಘಾತಕಾರಿ. ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸುವ ಕೆಲಸ ನಡೆಯುತ್ತಿದೆ. ಆರೋಪಿಯನ್ನು ಪತ್ತೆ ಹಚ್ಚಲು ಹತ್ತಿರದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

click me!