
ಭೋಪಾಲ್[ಡಿ.09]: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಗ್ರಾಮಸ್ಥರು ಓರ್ವ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಲ್ಲದೇ, ಅತ ಭೇಟಿಯಾಗಲು ಬಂದಿದ್ದ ಮಹಿಳೆಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲದ್ ಆಗಿವೆ.
ಬಯಲು ಮಲವಿಸರ್ಜನೆ ಮಾಡಿದ 2 ದಲಿತ ಮಕ್ಕಳ ಥಳಿಸಿ ಹತ್ಯೆ!
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು 'ಮಹಿಳೆಯ ಕುಟುಂಬ ಸದಸ್ಯರು ತಮ್ಮ ಮನೆಗೆ ನುಗ್ಗಿದ್ದ ಯುವಕನನ್ನು ರಾತ್ರಿ ಇಡೀ ಥಳಿಸಿದ್ದಾರೆ. ಬೆಳಗಾಗುತ್ತಿದ್ದಂತೆಯೇ ಮನೆ ಎದುರಿದ್ದ ಮರಕ್ಕೆ ಕಟ್ಟಿ ಹಾಕಿ ಮತ್ತೆ ಥಳಿಸಲಾರಂಭಿಸಿದ್ದಾರೆ. ನಮಗೆ ಮಾಹಿತಿ ಸಿಕ್ಕ ಕೂಡಲೇ ಅಲ್ಲಿಗೆ ತೆರಳಿದ್ದೇವೆ. ಈ ವೇಳೆ ಆತನನ್ನು ಗ್ರಾಮಸ್ಥರು ನಮಗೆ ಹಸ್ತಾಂತರಿಸಿದ್ದಾರೆ' ಎಂದಿದ್ದಾರೆ.
ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!
ಇಲ್ಲಿನ ಸ್ಥಳೀಯನೊಬ್ಬ ಯುವಕನಿಗೆ ಹೊಡೆಯುತ್ತಿರುವ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥಳಿತಕ್ಕೊಳಗಾದ ಯುವಕನ ಹೆಸರು ಜೀತೂ ಎಂದು ಹೇಳಲಾಗಿದೆ. ವಿವಾಹಿತೆಯ ಮನೆಯೊಳಗೆ ನುಗ್ಗಿ ಬೆದರಿಕೆಯೊಡ್ಡಿರುವ ದೂರು ಈತನ ವಿರುದ್ಧ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ