
ನೋಯ್ಡಾ(ಆ.22) ಆಸ್ಪತ್ರೆಗೆ ಹೋಗಿ ಬಂದಂತೆ, ಆಸ್ಪತ್ರೆಯ ಶವಾಗಾರಕ್ಕೆ ಸಲೀಸಾಗಿ ಹೋಗಲು ಸಾಧ್ಯವಿಲ್ಲ. ಶಮಗಳ ಮಧ್ಯೆ ನಿಲ್ಲುವುದು ಸುಲಭದ ಮಾತಲ್ಲ. ಶವಗಳನ್ನು ಫ್ರೋಜನ್ ಮಾಡಿ ಇಡಲಾಗುತ್ತದೆ. ಮೊದಲ ಬಾರಿಗೆ ಆಸ್ಪತ್ರೆ ಶವಗಾರಕ್ಕೆ ಎಂಟ್ರಿಕೊಟ್ಟರೆ ಜೀವ ಝಲ್ ಎನ್ನದೇ ಇರದು. ಈ ಮೃತದೇಹ ತುಂಬಿಕೊಂಡಿರುವ ಈ ಶವಗಾರದಲ್ಲಿ ಇಬ್ಬರು ಎದ್ದು ಕುಳಿತಿದ್ದರು, ಹೊರಳಾಡುತ್ತಿದ್ದರು. ಇವೆಲ್ಲವೂ ಸದ್ದಿಲ್ಲದೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದು ಶವಗಾರದಲ್ಲಿ ಎದ್ದು ಕುಳಿತ ಮೃತದೇಹದ ಕತೆಯಲ್ಲ. ಈ ಆಸ್ಪತ್ರೆ ಸಿಬ್ಬಂದಿಗಳ ರೊಮ್ಯಾನ್ಸ್ ಘಟನೆ ಇದು.
ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋ ಪೋಸ್ಟ್ ಮಾಡಿ ಗಂಭೀರ ಆರೋಪ ಮಾಡಲಾಗಿದೆ. ಶವಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ರೊಮ್ಯಾನ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರಿಗೆ ಮನವಿ ಮಾಡಲಾಗಿದೆ. ಆಸ್ಪತ್ರೆ ಶವಗಾರದೊಳಗೆ ಬಹುತೇಕರಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ಇದೇ ತಾಣವನ್ನು ಸುರಕ್ಷಿತ ತಾಣವಾಗಿ ಮಾಡಿಕೊಂಡಿದ್ದಾರೆ.
ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!
ಎಲ್ಲೆಡೆ ಶವಗಳನ್ನು ಇಟ್ಟಿದ್ದಾರೆ. ಫ್ರೋಜನ್ ವ್ಯವಸ್ಥೆಯಲ್ಲಿ ಶವಗಳನ್ನು ಇಡಲಾಗಿದೆ. ಈ ಶವಗಳ ನಡುವೆ ಸಿಬ್ಬಂದಿಗಳ ರೊಮ್ಯಾನ್ಸ್ ನಡೆದಿದೆ. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಸಿಬ್ಬಂದಿ ಕೆಲಸದ ನಿಮಿತ್ತ ಶವಗಾರಕ್ಕೆ ತೆರಳಿದಾಗ ಈ ಘಟನೆ ಪತ್ತೆಯಾಗಿದೆ. ಸದ್ದಿಲ್ಲದ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕ್ರಮಕ್ಕೆ ಆಗ್ರಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ