ಮೀರತ್‌ನಲ್ಲಿ ವೈದ್ಯರ ಮೇಲೆ ಭೀಕರ ಹಲ್ಲೆ! ದುಷ್ಕರ್ಮಿಗಳಿಂದ ಖಾಸಗಿ ಭಾಗ ಕತ್ತರಿಸಿ ಪರಾರಿ. ಪೊಲೀಸರಿಂದ ತನಿಖೆ, ಅಕ್ರಮ ಸಂಬಂಧದ ಶಂಕೆ.
ಮೀರತ್ (ಮಾ.15): ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಇಂತಹ ಕ್ರೌರ್ಯಕ್ಕೆ ಬಲಿಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ. ಮೂವರು ದಾಳಿಕೋರರು ಕ್ಲಿನಿಕ್ ಒಳಗೆ ನುಗ್ಗಿ ವೈದ್ಯರನ್ನು ಥಳಿಸಿದ್ದಲ್ಲದೆ, ಅವರ ಮೇಲೆ ಎಂತಹ ಕ್ರೌರ್ಯ ಮೆರೆದರು ಎಂದರೆ ಅವರ ಆತ್ಮವೇ ನಡುಗುತ್ತದೆ.
ಮೀರತ್‌ನ ಪರೀಕ್ಷಿತ್‌ಗಢ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಖಾಸಗಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ವೈದ್ಯರು ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ತಪಾಸಣೆ ನಡೆಸುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಕ್ಲಿನಿಕ್ ನುಗ್ಗಿ ವೈದ್ಯರಿಗೆ ಅವಾಚ್ಯವಾಗಿ ನಿಂದಿಸಲು ಪ್ರಾರಂಭಿಸಿದರು. ವೈದ್ಯರು ಪ್ರತಿಭಟಿಸಿದಾಗ, ದಾಳಿಕೋರರು ಮೊದಲು ಅವರನ್ನು ಕ್ರೂರವಾಗಿ ಹಲ್ಲೆ ನಡೆಸಿ ಬಳಿಕ ವೈದ್ಯರ ಕ್ಲಿನಿಕ್ ಧ್ವಂಸಗೊಳಿಸಿದ ಪಾಪಿಗಳು.
ಕ್ರೌರ್ಯದ ಪರಮಾವಧಿ, ವೈದ್ಯರ ಖಾಸಗಿ ಭಾಗವನ್ನೇ ಕತ್ತರಿಸಿದರು!
ಹಲ್ಲೆಯ ನಂತರ, ಇಬ್ಬರು ದಾಳಿಕೋರರು ವೈದ್ಯರನ್ನು ಹಿಡಿದುಕೊಂಡರೆ ಮತ್ತೊಬ್ಬ ಆರೋಪಿ ಹರಿತವಾದ ಚಾಕುವಿನಿಂದ ಅವರ ಖಾಸಗಿ ಭಾಗಗಳನ್ನು ಕತ್ತರಿಸಿದನು. ಈ ಹೃದಯ ವಿದ್ರಾವಕ ಘಟನೆಯ ನಂತರ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯ ನಂತರ ವೈದ್ಯರು ಗಂಭೀರವಾಗಿ ಗಾಯಗೊಂಡರು. ಅತಿಯಾದ ರಕ್ತಸ್ರಾವದಿಂದಾಗಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಸ್ಥಳೀಯರು ಗಾಯಾಳು ವೈದ್ಯರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ವೈದ್ಯರನ್ನು ದೆಹಲಿಯ ದೊಡ್ಡ ಆಸ್ಪತ್ರೆಗೆ ರವಾನಿಸಲಾಯಿತು.
ಅಕ್ರಮ ಸಂಬಂಧವೇ ಕಾರಣ? ಪೊಲೀಸರಿಂದ ತನಿಖೆ
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಸದರ್ ಗ್ರಾಮೀಣ ಸಿಒ ಶಿವ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಪೊಲೀಸರು ಈ ಘಟನೆಯನ್ನು ಹಲವು ಆಯಾಮಗಳಿಂದ ನೋಡುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಇದು ಅಕ್ರಮ ಸಂಬಂಧಗಳ ಹಿನ್ನೆಲೆ ಕೃತ್ಯ ನಡೆದಿರುವ ಸಾಧ್ಯತೆಯೂ ಇದೆ. ಆದಾಗ್ಯೂ, ಇಲ್ಲಿಯವರೆಗೆ ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಲು ನಿರಾಕರಿಸಿದ್ದಾರೆ ಮತ್ತು ತನಿಖೆ ಮುಂದುವರೆದಿದೆ.