- ನನ್ನ ದನಿ ಅಡಗಿಸಲು ಸಾಧ್ಯವಿಲ್ಲ, ಅಡಗಿಸಿದಷ್ಟೂನನ್ನ ದನಿ ಪ್ರತಿಧ್ವನಿಸಲಿದೆ
- ಇದರ ನಡುವೆಯೇ ಮನೆ ಧ್ವಂಸಕ್ಕೆ ಪಾಲಿಕೆ ಸಮರ್ಥನೆ
- ಕಂಗನಾ ಮನೆ, ಕಚೇರಿಗೆ ಪೊಲೀಸ್ ಭದ್ರತೆ
ಮುಂಬೈ (ಸೆ.11): ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಹಾಗೂ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಶಿವಸೇನೆ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿರುವ ನಟಿ ಕಂಗನಾ ರಾಣಾವತ್ ಅವರು ಗುರುವಾರ ಕೂಡ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ‘ಉದ್ಧವ್ ಠಾಕ್ರೆ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅಡಗಿಸಿದಷ್ಟೂನನ್ನ ಧ್ವನಿ ಮತ್ತಷ್ಟುಪ್ರತಿಧ್ವನಿಗೊಳ್ಳುತ್ತದೆ’ ಎಂದು ಕಂಗನಾ ಗುಡುಗಿದ್ದಾರೆ.
ಶಿವಸೇನೆ ಹಾಗೂ ಉದ್ಧವ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಂಗನಾ, ‘ಬಾಳಾ ಠಾಕ್ರೆ ಅವರು ಯಾವ ಚಿಂತನೆ ಆಧರಿಸಿ ಶಿವಸೇನೆಯನ್ನು ಸ್ಥಾಪಿಸಿದರೋ ಇಂದು ಆ ಚಿಂತನೆಯನ್ನು ಅಧಿಕಾರಕ್ಕಾಗಿ ಮಾರಿಕೊಳ್ಳಲಾಗಿದೆ. ಶಿವಸೇನೆ ಇಂದು ಸೋನಿಯಾ ಸೇನೆ ಆಗಿ ಬದಲಾಗಿದೆ. ಇದೊಂದು ಕಲಬೆರಕೆ ಸರ್ಕಾರ. ನನ್ನ ಮನೆ ಕೆಡವಿದವರನ್ನು ಪಾಲಿಕೆ ಸಿಬ್ಬಂದಿ ಎನ್ನಬೇಡಿ. ಗೂಂಡಾ ಎನ್ನಿ. ಸಂವಿಧಾನಕ್ಕೆ ಅವಮಾನ ಮಾಡಬೇಡಿ’ ಎಂದಿದ್ದಾರೆ.
ಕಂಗನಾ ಮನೆ ವಿವಾದ ಬೆನ್ನಲ್ಲೇ ಪ್ರಿಯಾಂಕ್ ವಾದ್ರಾ ಮನೆ ಕೆಡವಲು ಒತ್ತಡ
‘ನಿಮ್ಮ ಅಪ್ಪನ (ಬಾಳಾ ಠಾಕ್ರೆ) ಅವರ ಉತ್ತಮ ಕೆಲಸಗಳು ನಿಮಗೆ ಸಂಪತ್ತು ತಂದುಕೊಟ್ಟವು. ನೀವು ನನ್ನ ಬಾಯಿ ಮುಚ್ಚಿಸಬಹುದು. ಆದರೆ ನನ್ನ ಧ್ವನಿ ಲಕ್ಷಾಂತರ ದನಿಗಳಾಗಿ ಪ್ರತಿಧ್ವನಿಸಲಿವೆ. ಎಷ್ಟುಬಾಯಿ ನೀವು ಮುಚ್ಚಿಸುತ್ತೀರಿ’ ಎಂದು ಉದ್ಧವ್‌ರನ್ನು ಪ್ರಶ್ನಿಸಿದ್ದಾರೆ.
ವಿಷಯ ತಿರುಚುತ್ತಿರುವ ಕಂಗನಾ:
ಕಂಗನಾ ರಾಣಾವತ್ ಅವರು ತಮ್ಮ ಬಂಗಲೆ ನಿರ್ಮಾಣದಲ್ಲಿ ಅಕ್ರಮ ಎಸಗಿದ್ದಾರೆ. ಆದರೆ ಮೂಲ ವಿಚಾರವನ್ನು ಅವರು ದುರುದ್ದೇಶದಿಂದ ಮರೆಮಾಚುತ್ತಿದ್ದಾರೆ. ಯೋಜನೆ ಪ್ರಕಾರ ಅವರು ಮನೆ ನಿರ್ಮಿಸಿಲ್ಲ. ನಕ್ಷೆಯನ್ನು ತಿರುಚಿ ಅಕ್ರಮ ಭಾಗಗಳ ನಿರ್ಮಾಣ ಮಾಡಿದ್ದಾರೆ. ಧ್ವಂಸದ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ಬಾಂಬೆ ಹೈಕೋರ್ಟ್‌ಗೆ ಮುಂಬೈ ಮಹಾನಗರ ಪಾಲಿಕೆ ಹೇಳಿದೆ.
ಕಾಂಗ್ರೆಸ್‌ಗೆ ತಾಯಿ ಗುಡ್‌ಬೈ:
ಈ ನಡುವೆ ಕಾಂಗ್ರೆಸ್ ಪಾಲುದಾರರಾಗಿರುವ ಮಹಾ ಸರ್ಕಾರ ತಮ್ಮ ಪುತ್ರಿಯ ಬಗ್ಗೆ ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಂಗನಾ ಅವರ ತಾಯಿ ಆಶಾ ರಾಣಾವತ್ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿ ಬಿಜೆಪಿ ಸೇರಿದ್ದಾರೆ.
ನಾನು ಡ್ರಗ್ ಆಡಿಕ್ಟೆ ಆಗಿದ್ದೆ ಎಂದ ಕಂಗನಾ
ಭಗತ್‌ಸಿಂಗ್‌ಗೆ ಹೋಲಿಸಿದ ವಿಶಾಲ್:
ಇಡೀ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸೆಟೆದು ನಿಂತ ಕಂಗನಾ ರಾಣಾವತ್ ಅವರನ್ನು ತಮಿಳು ನಟ ವಿಶಾಲ್, ಭಗತ್‌ಸಿಂಗ್‌ಗೆ ಹೋಲಿಸಿದ್ದಾರೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ಹೇಗೆ ಎದುರಿಸಬೇಕು ಎಂಬ ವಿಷಯದಲ್ಲಿ ‘ಕ್ವೀನ್’ ದಿಟ್ಟಉದಾಹರಣೆಯಾಗಿ ನಮ್ಮ ಮುಂದೆ ಬಂದಿದ್ದಾರೆ. ಇದು 1920ರಲ್ಲಿ ಅಂದಿನ ಸರ್ಕಾರದ ವಿರುದ್ಧ ಭಗತ್ ಸಿಂಗ್ ಹೋರಾಟದಂತಿದೆ ಎಂದು ವಿಶಾಲ್ ಪ್ರಶಂಸಿಸಿದ್ದಾರೆ.
ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಬಾಲಿವುಡ್ ಕ್ವೀನ್ ನಟಿ ಹಿಂದಿ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತ, ಹಾಗೂ ಮಾಫಿಯಾ ಬಗ್ಗೆ ಧ್ವನಿ ಎತ್ತಿದ್ದರು. ಯಾವಾಗ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಗ ಡ್ರಗ್ ಮಾಫಿಯಾದ ನಂಟು ಇರುವುದು ಗಮನಕ್ಕೆ ಬಂತೋ, ಆಗಿನಿಂದ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ. ರಕ್ಷಣೆ ನೀಡಿದಲ್ಲಿ ಮಾಹಿತಿ ಬಹಿರಂಗಗೊಳಿಸುವುದಾಗಿ ಘೋಷಿಸಿದರು. ಈ ಬೆನ್ನಲ್ಲೇ ಮಹಾರಾಷ್ಟ್ರ ಹಾಗೂ ಕಂಗನಾ ನಡುವಿನ ವಾಕ್ಸಮರ ಅಧಿಕವಾಗಿ, ಬೃಹನ್ಮುಂಬೈ ಪಾಲಿಕೆ ಕಾನೂನು ಬಾಹಿರವಾಗಿ ಕಟ್ಟಡ ರಿನೋವೇಟ್ ಮಾಡಿದ್ದಾರೆಂದು ಕಟ್ಟಡ ಒಡೆಯಲೂ ಮುಂದಾಗಿತ್ತು. ಇದೀಗ ಕೇಂದ್ರ ಸಕಾರ ನಟಿಗೆ ವೈ ಪ್ಲಸ್ ಭದ್ರತೆ ನೀಡಿದ್ದು, ಇವರು ಇನ್ನು ಯಾವ ಮಾಹಿತಿ ನೀಡುತ್ತಾರೋ ಕಾದು ನೋಡಬೇಕು.