ಪ್ರಧಾನಿ ನರೇಂದ್ರ ಮೋದಿ ಕೋಟೆಯೊಂದರಲ್ಲಿ ಉದ್ಘಾಟಿಸಿದ್ದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿತ

By Kannadaprabha News  |  First Published Aug 27, 2024, 5:11 AM IST

ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಿಂಧುದುರ್ಗ ಜಿಲ್ಲೆಯ ಕೋಟೆಯೊಂದರಲ್ಲಿ ಲೋಕಾರ್ಪಣೆಗೊಂಡಿದ್ದ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಸೋಮವಾರ ಕುಸಿದುಬಿದ್ದ ಘಟನೆ ನಡೆದಿದೆ.


ಮುಂಬೈ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಿಂಧುದುರ್ಗ ಜಿಲ್ಲೆಯ ಕೋಟೆಯೊಂದರಲ್ಲಿ ಲೋಕಾರ್ಪಣೆಗೊಂಡಿದ್ದ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಸೋಮವಾರ ಕುಸಿದುಬಿದ್ದ ಘಟನೆ ನಡೆದಿದೆ.

ಮಾಲ್ವಾನ್‌ನ ರಾಜ್‌ಕೋಟ್‌ ಕೋಟೆಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆಗೆ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ನೆಲಕ್ಕೆ ಉರುಳಿದೆ.

Tap to resize

Latest Videos

ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನದಿಂದ ಭಾರಿ ಮಳೆ, ಜೋರಾದ ಗಾಳಿ ಬೀಸುತ್ತಿದೆ. ಘಟನೆಗೆ ಇದು ಕಾರಣ ಎನ್ನಲಾಗಿದೆ. ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಘಟನೆಯ ಮಾಹಿತಿ ಪಡೆದಿದ್ದಾರೆ. ಈ ನಡುವೆ, ಪ್ರತಿಪಕ್ಷಗಳು ಕಳಪೆ ಕಾಮಗಾರಿ ಕಾರಣ ಕುಸಿದಿವೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಕಳೆದ ವರ್ಷ ಡಿ.4 ರಂದು ನೌಕಾಪಡೆಯ ದಿನದ ಪ್ರಯುಕ್ತ ಪ್ರತಿಮೆ ಅನಾವರಣಗೊಳಿಸಿದ್ದರು. 

ನಾವು ಒಗ್ಗಟ್ಟಾಗದಿದ್ದರೆ ನಮ್ಮನ್ನ ಕತ್ತರಿಸಲಾಗುತ್ತೆ: ದೇಶದ ಜನತೆಗೆ ಯೋಗಿ ಸಂದೇಶ

ಇತ್ತೀಚೆಗೆ ಬಿಹಾರದಲ್ಲಿ ಸರಣಿ ಸೇತುವೆ ಕುಸಿದುಬಿದ್ದಿದ್ದವು, ಆಯೋಧ್ಯೆ ರಾಮಮಂದಿರ, ಸಂಸತ್ ಭವನ ಸೋರುವಿಕೆಯಿಂದ ವಿರೋಧ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು. ಸೇತುವೆ ಕಟ್ಟಲಾಗದ ಪ್ರಧಾನಿ ದೇಶವನ್ನು ಏಣು ಕಟ್ಟುತ್ತಾನೆ ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಛತ್ರಪತಿ ಶಿವಾಜಿ ಅವರ 35 ಅಡಿ ಪ್ರತಿಮೆ ಕುಸಿದುಬಿದ್ದಿರುವುದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ

click me!