ಇದೆಂದೂ ಕಾಣದ ರಾಜಕೀಯ ಶಿವನೇ: ಮತ್ತಿಬ್ಬರು ಎನ್‌ಸಿಪಿ ಶಾಸಕರನ್ನು ಕರೆತಂದ ಶಿವಸೇನೆ!

By Web DeskFirst Published Nov 23, 2019, 7:35 PM IST
Highlights

ಕ್ಷಣ ಕ್ಷಣಕ್ಕೆ ರೋಚಕ ತಿರುವು ಪಡೆಯುತ್ತಿರುವ ಮಹಾರಾಷ್ಟ್ರ ರಾಜಕೀಯ| ಮತ್ತಿಬ್ಬರು ಎನ್’ಸಿಪಿ ಶಾಸಕರು ಶರದ್ ಪವಾರ್ ತೆಕ್ಕೆಗೆ| ಮರಳಿ ಶರದ್ ಪವಾರ್ ಬಣ ಸೇರಿದ ಸಂಜಯ್ ಬನ್ಸೋದ್ ಹಾಗೂ ಬಾಬಾಸಾಹೇಬ್ ಪಾಟೀಲ್| ಶಾಸಕರನ್ನು ಎನ್’ಸಿಪಿ ಕಚೇರಿಗೆ ಕರೆತಂದ ಶಿವಸೇನೆ ನಾಯಕರು| ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಿರುವ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ| 

ಮುಂಬೈ(ನ.23): ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಈಗಾಗಲೇ ಅಜಿತ್ ಪವಾರ್ ಹಿಡಿತದಿಂದ ಶರದ್ ಪವಾರ್ ತೆಕ್ಕೆಗೆ ಬಂದಾಗಿದೆ.ಇದೀಗ ಮತ್ತಿಬ್ಬರು ಎನ್’ಸಿಪಿ ಶಾಸಕ ಮರಳಿ ಗೂಡಿಗೆ ಸೇರಿದ್ದಾರೆ.

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!
ಎನ್’ಸಿಪಿಯ ಶಾಸಕರಾದ  ಸಂಜಯ್ ಬನ್ಸೋದ್ ಹಾಗೂ ಬಾಬಾಸಾಹೇಬ್ ಪಾಟೀಲ್ ಮರಳಿ ಶರದ್ ಪವಾರ್ ಬಣ ಸೇರಿದ್ದು, ವಿಚಿತ್ರ ಸನ್ನಿವೇಶದಲ್ಲಿ ಶಿವಸೇನೆ ನಾಯಕರು ಅವರನ್ನು ಎನ್’ಸಿಪಿ ಕಚೇರಿ ತಲುಪಿಸಿದ್ದಾರೆ.

Mumbai: Shiv Sena leaders Milind Narvekar and Eknath Shinde brought with them 2 NCP MLAs Sanjay Bansod and Babasaheb Patil at YB Chavan Center from the Mumbai airport. The two NCP MLAs are said to be with NCP leader Ajit Pawar. https://t.co/UAzUctBtBf

— ANI (@ANI)

ದಿಢೀರ್ ಬೆಳವಣಿಗೆಯಲ್ಲಿ ಅವರನ್ನು ಶಿವಸೇನೆ ನಾಯಕರಾದ ಏಕನಾಥ್ ಶಿಂಧೆ ಹಾಗೂ ಮಿಲಿಂದ್ ನರ್ವೇಕರ್ ಸೇರಿ ಸಂಜಯ್ ಬನ್ಸೋದ್ ಹಾಗೂ ಬಾಬಾಸಾಹೇಬ್ ಪಾಟೀಲ್ ಅವರನ್ನು ಎನ್’ಸಿಪಿ ಕಚೇರಿಗೆ ತಂದಿದ್ದಾರೆ.

Maharashtra: 42 NCP MLAs are present in the meeting with NCP Chief Sharad Pawar, at YB Chavan Centre in Mumbai; Visuals from outside YB Chavan Centre pic.twitter.com/hhRDKmTOY0

— ANI (@ANI)

ತಮ್ಮ ಬೆಂಬಲ ಕೇವಲ ಶರದ್ ಪವಾರ್ ಅವರಿಗೆ ಎಂದಿರುವ ಇಬ್ಬರೂ ನಾಯಕರು, ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶರದ್ ಪವಾರ್ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಒಟ್ಟು 42 ಶಾಸಕರು ಹಾಜರಾಗಿದ್ದಾರೆ.

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಂಡ ಅಜಿತ್ ಪವಾರ್!

Shiv Sena: Shiv Sena has filed a writ petition in the Supreme Court against Devendra Fadnavis and Ajit Pawar taking oath as CM and Deputy CM of Maharashtra respectively. pic.twitter.com/AoyIwrp48T

— ANI (@ANI)

ಈ ಮಧ್ಯೆ ದೇವೇಂದ್ರ ಫಡ್ನವೀಸ್ ಅವರಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟ ರಾಜ್ಯಪಾಲರ ಕ್ರಮವನ್ನು ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಸುಪ್ರೀಂಕೋರ್ಟ್’ನಲ್ಲಿ ಪ್ರಶ್ನೆ ಮಾಡಲಿದೆ.

ಬಿಜೆಪಿಗೆ ಜೈ ಎಂದಿದ್ದ ಎನ್‌ಸಿಪಿ ನಾಯಕ ಮರಳಿ ಗುಡಿಗೆ!

click me!