ಬಿಜೆಪಿಗೆ ಜೈ ಎಂದಿದ್ದ ಎನ್‌ಸಿಪಿ ನಾಯಕ ಮರಳಿ ಗುಡಿಗೆ!

By Web DeskFirst Published Nov 23, 2019, 5:50 PM IST
Highlights

ಕ್ಷಣ ಕ್ಷಣಕ್ಕೆ ತಿರುವು ಪಡೆಯುತ್ತಿರುವ ಮಹಾರಾಷ್ಟ್ರದ ರಾಜಕೀಯ| ಬಿಜೆಪಿಗೆ ಜೈ ಎಂದಿದ್ದ ಎನ್’ಸಿಪಿ ನಾಯಕ ಮರಳಿ ಗುಡಿಗೆ| ಮರಳಿ ಶರದ್ ಪವಾರ್ ಮಡಿಲು ಸೇರಿದ ಧನಂಜಯ್ ಮುಂಡೆ| ಅಜಿತ್ ಪವಾರ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಧನಂಜಯ್ ಮುಂಡೆ| ಬಿಜೆಪಿ ಜೊತೆಗೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ಧನಂಜಯ್ ಮುಂಡೆ|

ಮುಂಬೈ(ನ.23): ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅಜಿತ್ ಪವಾರ್ ಅವರೊಂದಿಗೆ ಕೈ ಜೋಡಿಸಿದ್ದ ಎನ್’ಸಿಪಿ ಶಾಸಕ ಧನಂಜಯ್ ಮುಂಡೆ ಮರಳಿ ಶರದ್ ಪವಾರ್ ನೇತೃತ್ವದ ಎನ್’ಸಿಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ.

ನಿನ್ನೆ(ನ.23): ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಧನಂಜಯ್ ಮುಂಡೆ, ಸರ್ಕಾರಕ್ಕೆ ತಮ್ಮ ಬೆಂಬಲ ಇದೆ ಎಂದು ಘೋಷಿಸಿದ್ದರು.

ಆದರೆ ಇಂದು ಏಕಾಏಕಿ ಎನ್’ಸಿಪಿ ಕಚೇರಿಗೆ ಧಾವಿಸಿದ ಧನಂಜಯ್, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Mumbai: Nationalist Congress Party (NCP) leader Dhananjay Munde arrives at YV Chavan Centre for NCP meeting. pic.twitter.com/7LIDLNJLf7

— ANI (@ANI)

ಶರದ್ ಪವಾರ್ ನೇತೃತ್ವದ ಎನ್’ಸಿಪಿ ಗೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿರುವ ಮುಂಡೆ, ಅಜಿತ್ ಪವಾರ್ ನಡೆ ಒಪ್ಪಲು ಸಾಧ್ಯವಿಲ್ಲ ಎಂದಯ ಹೇಳಿದ್ದಾರೆ.

ಇನ್ನು ಅಜಿತ್ ಪವಾರ್ ಅವರಿಗೆ ಬೆಂಬಲ ಸೂಚಿಸಿದ್ದ ಇನ್ನೂ ಊವರು ಎನ್’ಸಿಪಿ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಎನ್’ಸಿಪಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

click me!