ಮಹಾರಾಷ್ಟ್ರದ ರಾಜಕೀಯ ಅಸ್ಥಿರತೆ ಕೊನೆ, ಸಿಎಂ ಪಟ್ಟಕ್ಕೆ ಹೊಸ ಹೆಸರು

By Web DeskFirst Published Nov 22, 2019, 10:48 PM IST
Highlights

ಮಹಾರಾಷ್ಟ್ರದ ರಾಜಕೀಯ ಅಸ್ಥಿರತೆಗೆ ತೆರೆ/ ಸಿಎಂ ಆಗಲು ಒಪ್ಪಿಕೊಂಡ ಉದ್ಧವ್ ಠಾಕ್ರೆ/ 5 ವರ್ಷವೂ ಶಿವಸೇನೆಗೆ ಸಿಎಂ ಪಟ್ಟ/ ಬೆಂಬಲ ಘೋಷಿಸಿದ ಕಾಂಗ್ರೆಸ್ ಮತ್ತು ಎನ್ ಸಿಪಿ/ ಅಧಿಕಾರ ಹಂಚಿಕೆ ಬಗ್ಗೆ    ಮತ್ತೊಂದು ಸುತ್ತಿನ ಮಾತುಕತೆ

ಮುಂಬೈ[ನ. 22]  ಸಿಎಂ ಆಗಲು ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ ಎಂದು ಶಿವಸೇನಾ ನಾಐಕ ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಹಂಚಿಕೆ ಸೂತ್ರವೂ ಸಿದ್ಧವಾಗುತ್ತಿದೆ ಎಂದು ತಿಳಿಸಿದ್ದಾರೆ. ಶಿವಸೇನೆ ಸಂಪೂರ್ಣ 5 ವರ್ಷ ಕಾಲ ಸಿಎಂ ಹುದ್ದೆಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ನೂತನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನಾ ನಾಯಕರು ಮ್ಯಾರಥಾನ್ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಠಾಕ್ರೆ ನೇತೃತ್ವಕ್ಕೆ ಎಲ್ಲರ ಒಪ್ಪಿಗೆ ಇದೆ ಎಂದು ತಿಳಿಸಿದರು.

ಮೂರು ಪಕ್ಷಗಳ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಪಾಲರನ್ನು ಯಾವಾಗ ಭೇಟಿ ಮಾಡಬೇಕು ಎಂಬುದರ ಬಗ್ಗೆಯೂ ನಾಳೆ ನಿರ್ಧರಿಸಲಾಗುವುದು ಎಂದು ಪವಾರ್ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಹ ಶಿವಸೇನೆಗೆ ಬೆಂಬಲ ನೀಡುವ ಸಂವಂಧ ತೀರ್ಮಾನ ತೆಗೆದುಕೊಂಡಿದೆ.

ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವದಲ್ಲಿಯೇ ಮೈತ್ರಿ ಮಾಡಿಕೊಂಡು ಜನರ ಬಳಿ ಹೋಗಿತ್ತು,. ಫಲಿತಾಂಶ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಒಕ್ಕೂಟಕ್ಕೆ ಬಹುಮತ ನೀಡಿತ್ತು. ಆದರೆ ಬದಲಾದ ರಾಜಕಾರಣದ ವಾತಾವರಣದಲ್ಲಿ ಶಿವಸೇನೆ-ಎಲ್ ಸಿಪಿ ಮತ್ತು ಕಾಂಗ್ರೆಸ್ ಸೇರೆ ಸರ್ಕಾರ ರಚನೆ ಮಾಡುತ್ತಿವೆ.

click me!