‘ಲವ್ ಮ್ಯಾರೇಜ್ ಒಪ್ಪಲಾಗಲ್ಲ: ಇಷ್ಟ ಪಟ್ಟವರ ಜೊತೆ ಮದ್ವೆ ಆಗಲು ಬಿಡಲ್ಲ’!

By Web DeskFirst Published Nov 22, 2019, 5:23 PM IST
Highlights

 ‘ಲವ್ ಮ್ಯಾ ರೇಜ್ ಮಾಡ್ಕೊಂಡ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ’| ಖಾಪ್ ಪಂಚಯತ್ ನಾಯಕ ನರೇಶ್ ತಿಕೈಟ್ ಎಚ್ವರಿಕೆ| ‘20-30 ಲಕ್ಷ ರೂ. ಖರ್ಚು ಮಾಡಿ ಹೆಣ್ಣು ಮಕ್ಕಳನ್ನು ಓದಿಸುವುದು ಪ್ರೇಮ ವಿವಾಹವಾಗುವುದಕ್ಕಲ್ಲ’|

ಲಕ್ನೋ(ನ.22): ಪ್ರೇಮ ಮತ್ತು ಅಂತರ್ಜಾತೀಯ ವಿವಾಹದ ಕಟ್ಟಾ ವಿರೋಧಿಗಳಾದ ಖಾಪ್ ಪಂಚಯತ್, ಯಾವುದೇ ಕಾರಣಕ್ಕೂ ಮಕ್ಕಳು ಪ್ರೇಮ ವಿವಾಹವಾಗುವುದನ್ನು ಬಿಡುವುದಿಲ್ಲ ಎಂದು ಘೋಷಿಸಿದೆ.

ಹೆಣ್ಣು ಮಗುವಿನ ಜನನವನ್ನೇ ತಡೆಯುವುದಾಗಿ ಸುಪ್ರೀಂಕೋರ್ಟ್‌ಗೇ ಬೆದರಿಕೆ

ಈ ಕುರಿತು ಮಾತನಾಡಿರುವ ಖಾಪ್ ನಾಯಕ ನರೇಶ್ ತಿಕೈಟ್, 20-30 ಲಕ್ಷ ರೂ. ಖರ್ಚು ಮಾಡಿ ಹೆಣ್ಣು ಮಕ್ಕಳನ್ನು ಓದಿಸುವುದು ಪ್ರೇಮ ವಿವಾಹವಾಗುವುದಕ್ಕಲ್ಲ ಎಂದು ಹೇಳಿದ್ದಾರೆ.

Naresh Tikait, Balian Khap Choudhary in Baghpat: Hum ladkiyon ko padhavein, unki padhai mein 20-30 lakh kharch karein aur shadi vo karlein apni marzi se, toh pariwar toh barbaad ho jaata hain. Prem vivah bahut galat hain, hum iski kabhi bhi manzoori nahi denge. pic.twitter.com/Au5mqXImH6

— ANI UP (@ANINewsUP)

ಹೆಣ್ಣು ಮಕ್ಕಳು ಪ್ರೇಮ ವಿವಾಹ ಅಥವಾ ಅಂತರ್ಜಾತೀಯ ವಿವಾಹವಾದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ನರೇಶ್ ತಿಕೈಟ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ವಯಸ್ಕರ ಮದುವೆ ನಿಲ್ಲಿಸಲು ನೀವು ಯಾರು: ಖಾಪ್ ಪಂಚಾಯಿತಿಗಳಿಗೆ ಸುಪ್ರೀಂ ಖಡಕ್ ಪ್ರಶ್ನೆ

click me!