
ಮುಂಬೈ(ಡಿ.22): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಉದ್ದೇಶದ ಹಿಂದೆ 2024ರ ಲೋಕಸಭಾ ಚುನಾವಣಾ ಪ್ರಚಾರಾಂದೋಲನ ಅಡಗಿದೆ ಎಂದು ಶಿವಸೇನೆ ದೂರಿದೆ.
ಗುಲವನ್ನು ಜನರ ದೇಣಿಗೆಯಿಂದ ನಿರ್ಮಿಸಬೇಕು ಎಂಬ ನಿರ್ಧಾರ ಕೈಗೊಂಡಿಲ್ಲ. ರಾಮನ ಹೆಸರಲ್ಲಿ ನಡೆದಿರುವ ರಾಜಕೀಯ ಪ್ರಚಾರ ತಡೆಯಲೇಬೇಕು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರತಿಪಾದಿಸಲಾಗಿದೆ. ಆದರೆ ನಮ್ಮ ಪಕ್ಷಕ್ಕೆ ರಾಮಮಂದಿರ ರಾಜಕೀಯ ವಿಚಾರವೇ ಅಲ್ಲ.
ಈ ಹಿಂದೆ ಮಂದಿರದ ಭೂಮಿ ಪೂಜೆಗೆ ಅಡ್ಡಿಪಡಿಸಿದ್ದ ಶಿವಸೇನೆ ಈಗ ಜನರೇ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡ ದೇಣಿಗೆ ಆಂದೋಲನದ ಬಗ್ಗೆ ಅಪಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸಂಕ್ರಮಣದಿಂದ ದೇಣಿಗೆ ಸಂಗ್ರಹ ಆರಂಭ
ಸರ್ಕಾರದಿಂದ ಅನುದಾನ ಪಡೆಯದೇ ಜನರಿಂದ ದೇಣಿಗೆ ಪಡೆದು ಸ್ವಂತ ಖರ್ಚಿನಿಂದ ರಾಮಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ದೇಣಿಗೆ ಸಂಗ್ರಹ ಕಾರ್ಯ ಸಂಕ್ರಮಣದಿಂದ ಶುರುವಾಗಲಿದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೋಮವಾರ ಈ ವಿಷಯ ತಿಳಿಸಿದರು. ‘ದೇಗುಲವು ಜನರು ನೀಡುವ ದೇಣಿಗೆಯ ಸಹಕಾರದಿಂದ ಮಾತ್ರ ನಿರ್ಮಾಣಗೊಳ್ಳಲಿದೆ’ ಎಂದಿದ್ದರು
ಟ್ರಸ್ಟ್‌ನಿಂದ ನಿಯೋಜಿತರಾಗಿರುವ ಲಕ್ಷಾಂತರ ಜನರು ದೇಶಾದ್ಯಂತ ಜನರನ್ನು ಸಂಪರ್ಕಿಸಲಿದ್ದಾರೆ. ಜನರಿಂದ ಯಾವುದೇ ದೇಣಿಗೆ ಬರಲಿ, ಅದನ್ನು ಸಂಗ್ರಹಿಸಿ ಟ್ರಸ್ಟ್‌ಗೆ ಒಪ್ಪಿಸಲಿದ್ದಾರೆ ಎಂದು ರಾಯ್ ಹೇಳಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ