4 ವರ್ಷದಲ್ಲಿ 4800 ಚಿರತೆ ಜನನ: ಒಟ್ಟಾರೆ ಸಂಖ್ಯೆಯಲ್ಲಿ ಕರ್ನಾಟಕ ನಂ. 2

By Suvarna NewsFirst Published Dec 22, 2020, 8:10 AM IST
Highlights

ಒಟ್ಟಾರೆ ಸಂಖ್ಯೆಯಲ್ಲಿ ಕರ್ನಾಟಕ ನಂ.2| ದೇಶದಲ್ಲಿ ಚಿರತೆ ಸಂಖ್ಯೆ 12852ಕ್ಕೆ ಏರಿಕೆ

ನವದೆಹಲಿ(ಡಿ.22): ದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಚಿರತೆ ಸಂತತಿಯಲ್ಲಿ ಗಣನೀಯ ಏರಿಕೆಯಾಗಿರುವ ಶುಭ ಸುದ್ದಿ ಹೊರಬಿದ್ದಿದೆ. ಭಾರತದಲ್ಲಿನ 2018ರ ಚಿರತೆಗಳ ಸ್ಥಿತಿಗತಿ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ಅದರನ್ವಯ ದೇಶದಲ್ಲಿ 12,852 ಚಿರತೆಗಳಿರುವುದು ಕಂಡುಬಂದಿದೆ. ವಿಶೇಷವೆಂದರೆ ಅತಿಹೆಚ್ಚು ಚಿರತೆ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ನಂ.2 ಸ್ಥಾನದಲ್ಲಿದೆ. ವರದಿಯ ಪ್ರಕಾರ, 2014ರಲ್ಲಿ ದೇಶದಲ್ಲಿ 8,000 ಚಿರತೆಗಳಿದ್ದರೆ, 2018ರಲ್ಲಿ ಅದು 12,852ಕ್ಕೆ ಹೆಚ್ಚಳವಾಗಿದೆ.

ಟಾಪ್‌ 3 ರಾಜ್ಯಗಳು

ಮಧ್ಯಪ್ರದೇಶ 3421

ಕರ್ನಾಟಕ 1783

ಮಹಾರಾಷ್ಟ್ರ 1690

ಎಲ್ಲೆಲ್ಲಿ ಎಷ್ಟೆಷ್ಟು?:

ಮಧ್ಯಭಾರತ ಮತ್ತು ಪೂರ್ವ ಘಟ್ಟಗಳ ಶ್ರೇಣಿಯಲ್ಲಿ 8,071, ಪಶ್ಚಿಮ ಘಟ್ಟಪ್ರದೇಶದಲ್ಲಿ 3,387, ಶಿವಾಲಿಕ್‌ ಹಾಗೂ ಗಂಗಾ ಬಯಲು ಪ್ರದೇಶದಲ್ಲಿ 1,253 ಚಿರತೆಗಳು ಕಂಡುಬಂದಿವೆ ಎಂದು ವರದಿ ತಿಳಿಸಿದೆ.

click me!