Winter Session: ಲೋಕಸಭೆ ಮನಮೋಹಕ ಜಾಗ; ಯಾಕಂತೆ? ಶಶಿ ತರೂರ್ ಕೇಳಿ, ತಿಳಿಯಿರಿ!

By Suvarna News  |  First Published Nov 29, 2021, 6:21 PM IST

* ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ

* ಮಹಿಳಾ ಸಂಸದರೊಂದಿಗೆ ತೆಗೆದ ಫೋಟೋ ಶೇರ್ ಮಾಡಿಕೊಂಡ ಸಂಸದ ತರೂರ್

* ತರೂರ್ ಫೋಟೋಗೆ ನೆಟ್ಟಿಗರು ಗರಂ


ನವದೆಹಲಿ(ನ.29): ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಆರು ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡು ಟೀಕೆಗೆ ಗುರಿಯಾಗಿದ್ದಾರೆ. ವಾಸ್ತವವಾಗಿ, ಅವರು ಸೆಲ್ಫಿಯೊಂದಿಗೆ ಬರೆದ ಶೀರ್ಷಿಕೆಗೆ ಜನರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು ಈ ಫೋಟೋ ಶೇರ್ ಮಾಡಿಕೊಂಡಿರುವ ತರೂರ್ ಲೋಕಸಭೆಯು ಕೆಲಸಕ್ಕೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ ಎಂಬ ಶೀರ್ಷಿಕೆ ನೀಡಿದ್ದಾರೆ.

ತರೂರ್ ಕೊಟ್ಟಿರುವ ಈ ಶೀರ್ಷಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕುಪಿತರಾದ ನೆಟ್ಟಿಗರು ಮಹಿಳೆಯರು ಲೋಕಸಭೆಯಲ್ಲಿ ಅಲಂಕಾರದ ವಸ್ತುಗಳಲ್ಲ ಎಂದಿದ್ದಾರೆ. ನೀವು ಅವರನ್ನು ಅವಮಾನಿಸುತ್ತಿದ್ದೀರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅವರ ಮನಸ್ಥಿತಿ ದೊಡ್ಡದಾಗಿದೆ ಎಂದು ಮತ್ತೊಬ್ಬ ಬಳಕರದಾರ ಹೆಳಿದ್ದಾರೆ. ಈ ನಡುವೆ ಮತ್ತೊಬ್ಬಾತ ಆಂಟೋನಿಯಾ ಮೈನಿಯೋ ಎಲ್ಲಿದ್ದಾರೆ? ಅವರೂ ಸಂಸದರು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

Who says the Lok Sabha isn’t an attractive place to work? With six of my fellow MPs this morning: ⁦⁩ ⁦⁩ ⁦⁩ ⁦⁩ ⁦⁩ ⁦⁦⁩ pic.twitter.com/JNFRC2QIq1

— Shashi Tharoor (@ShashiTharoor)

Latest Videos

undefined

ಈ ನಡುವೆ ಹಲವರು ತರೂರ್ ಬೆಂಬಲಕ್ಕೆ ನಿಂತಿದ್ದಾರೆ. ಒಬ್ಬ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ. ಒಬ್ಬ ಬಳಕೆದಾರನಂತೂ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸಹೋದ್ಯೋಗಿಗಳೊಂದಿಗೆ ಫೋಟೋ ತೆಗೆದರೆ ಪರವಾಗಿಲ್ಲ, ಆದರೆ ಶಶಿ ತರೂರ್ ಅದೇ ಕೆಲಸವನ್ನು ಮಾಡಿದರೆ ಅವನು ಟ್ರೋಲ್ಗೆ ಒಳಗಾಗುತ್ತಾರೆ ಎಂದಿದ್ದಾರೆ.

ಈ ಪೋಸ್ಟ್‌ನಲ್ಲಿ ಏನಿತ್ತು?

ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ತರೂರ್ ಅವರು ಈ ಟ್ವೀಟ್‌ನಲ್ಲಿ 6 ಮಹಿಳಾ ಸಂಸದರೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇಂದು ಬೆಳಿಗ್ಗೆ ನನ್ನ 6 ಸಹ ಸಂಸದರೊಂದಿಗೆ! ಚಿತ್ರದಲ್ಲಿ ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಜಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ಮತ್ತು ಜ್ಯೋತಿ ಮಣಿ ಅವರು ತರೂರ್ ಅವರೊಂದಿಗೆ ಮಧ್ಯದಲ್ಲಿದ್ದಾರೆ. ಈ ಸೆಲ್ಫಿಯನ್ನು ಸಂಸದರೊಂದಿಗೆ ಗೌರವದಿಂದ ಮತ್ತು ಹಾಸ್ಯದ ಮೂಡ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಇದನ್ನು ಮಹಿಳಾ ಸಂಸದರು ಪ್ರಾರಂಭಿಸಿದರು. ಅದನ್ನು ಟ್ವೀಟ್ ಮಾಡುವಂತೆ ಕೇಳಿದ್ದು ಅವರೇ ಎಂದಿದ್ದಾರೆ.

The whole selfie thing was done (at the women MPs' initiative) in great good humour & it was they who asked me to tweet it in the same spirit. I am sorry some people are offended but i was happy to be roped in to this show of workplace camaraderie. That's all this is. https://t.co/MfpcilPmSB

— Shashi Tharoor (@ShashiTharoor)

ಇದು ಕೆಲಸದಲ್ಲಿ ಸ್ನೇಹವನ್ನು ತೋರಿಸುತ್ತದೆ

ಭಾರತೀಯ ವಿದೇಶಾಂಗ ಸೇವೆಯಿಂದ (ಐಎಫ್‌ಎಸ್) ನಿವೃತ್ತಿಯ ನಂತರ ರಾಜಕೀಯಕ್ಕೆ ಸೇರಿದ ತರೂರ್ ಕೆಲವರು ವಿರೋಧಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ಕೆಲಸದಲ್ಲಿ ಸ್ನೇಹವನ್ನು ತೋರಿಸುವ ಈ ಉಪಕ್ರಮಕ್ಕೆ ನಾನು ಸಂತೋಷಪಡುತ್ತೇನೆ ಎಂದಿದ್ದಾರೆ.

click me!