ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಸೈಫಿ ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್‌ನ ಕಟ್ಟಾ ಅನುಯಾಯಿ

By Kannadaprabha NewsFirst Published Apr 18, 2023, 11:44 AM IST
Highlights

ಇತ್ತೀಚಿಗೆ ಕಣ್ಣೂರ್‌ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿ ಶಾರುಖ್‌ ಸೈಫಿ ಮೂಲಭೂತವಾದಿಯಾಗಿದ್ದ. ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್‌ ನಾಯಕ್‌ನ ಕಟ್ಟಾ ಅನುಯಾಯಿಯಾಗಿದ್ದ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಮುಖ್ಯಸ್ಥರು ಹೇಳಿದ್ದಾರೆ.

ಕಲ್ಲಿಕೋಟೆ: ಇತ್ತೀಚಿಗೆ ಕಣ್ಣೂರ್‌ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿ ಶಾರುಖ್‌ ಸೈಫಿ ಮೂಲಭೂತವಾದಿಯಾಗಿದ್ದ. ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್‌ ನಾಯಕ್‌ನ ಕಟ್ಟಾ ಅನುಯಾಯಿಯಾಗಿದ್ದ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಮುಖ್ಯಸ್ಥರು ಹೇಳಿದ್ದಾರೆ.

ನಾವು ಈಗಾಗಲೇ ಹಲವು ಹಂತಗಳಲ್ಲಿ ವಿಚಾರಣೆ ನಡೆಸಿದ್ದು, ವೈಜ್ಞಾನಿಕವಾಗಿ, ದಾಖಲೆಗಳು ಹಾಗೂ ಮೌಖಿಕ ಪರಾವೆಗಳನ್ನು ಸಂಗ್ರಹಿಸಿದ್ದೇವೆ. ಬಂಧಿತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ರೈಲಿಗೆ ಬೆಂಕಿ (Train fire) ಹಚ್ಚಲು ಪ್ರಮುಖ ಕಾರಣವೇನು ಎಂಬುದರ ಕುರಿತಾಗಿ ವಿಸ್ತೃತವಾದ ತನಿಖೆ ನಡೆಸುತ್ತಿದ್ದೇವೆ. ಶಾರುಖ್‌ ಹೆಚ್ಚು ಮೂಲಭೂತವಾದಿಯಾಗಿದ್ದ. ನಿರಂತರವಾಗಿ ಝಾಕೀರ್‌ ನಾಯಕ್‌ನ ಕೋಮು ಪ್ರಚೋದಕ ವಿಡಿಯೋಗಳನ್ನು ನೋಡುತ್ತಿದ್ದ. ಬೆಂಕಿ ಹಚ್ಚಲು ಪೂರ್ವಭಾವಿಯಾಗಿ ಯೋಜನೆಗಳನ್ನು ರೂಪಿಸಿಕೊಂಡು ಆತ ಕೇರಳಕ್ಕೆ ಬಂದಿದ್ದ  ಎಂದು ಎಡಿಜಿಪಿ ಎಂ.ಆರ್‌.ಅಜಿತ್‌ ಕುಮಾರ್‌ (Ajit kumar) ಹೇಳಿದ್ದಾರೆ.

ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್‌ ಸೈಫಿ ಬಂಧನ

ಈ ಪ್ರಕರಣವನ್ನು ಉಗ್ರ ಕೃತ್ಯ ಎಂದು ಕರೆದಿರುವ ಪೊಲೀಸರು ಆರೋಪಿ ಶಾರುಖ್‌ ವಿರುದ್ಧ ಯುಎಪಿಎ (UAPA) ಅಡಿ ಪ್ರಕರಣ ದಾಖಲಿಸಿದ್ದು, ಬೆಂಕಿ ಹಚ್ಚಲು ನಿರ್ದಿಷ್ಟಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಏ.2ರಂದು ಸೈಫಿ ಪೆಟ್ರೋಲ್‌ ಸುರಿದು ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ್ದ, ಈ ಕೃತ್ಯದಲ್ಲಿ ಮೂವರು ಅಸುನೀಗಿದ್ದರು.

ಏಪ್ರಿಲ್ 2 ರಂದು ಘಟನೆ ನಡೆದಿತ್ತು.  ಮಹಾರಾಷ್ಟ್ರದ ಎಟಿಎಸ್ ತಂಡ ಏಪ್ರಿಲ್ 7 ರಂದು ಆತನನ್ನು ಬಂಧಿಸಿತ್ತು. ಕೇರಳದ ರೈಲಿನೊಳಗೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಈ ಘಟನೆಯ ಹಿಂದೆ ಆತ ಸುಲಿಗೆ ಉದ್ದೇಶ ಹೊಂದಿರಲಿಲ್ಲ. ಬದಲಾಗಿ ಇಡೀ ರೈಲಿಗೆ ಬೆಂಕಿ ಹಚ್ಚುವ ಭಾರೀ ಸಂಚೊಂದು ಅಡಗಿತ್ತು ಎಂಬ ಸ್ಫೋಟಕ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಐಬಿ (ಇಂಟೆಲಿಜೆನ್ಸ್‌ ಬ್ಯೂರೋ)ಗೆ ಇಂಥದ್ದೊದು ಸ್ಫೋಟಕ ಸುಳಿವು ಸಿಕ್ಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೇರಳದ ಹಲವು ಮಾಧ್ಯಮಗಳು ವರದಿ ಮಾಡಿದ್ದವು. 

ಕೇರಳ ರೈಲಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಶಾರುಖ್‌ ಯುಪಿಗೆ ಪರಾರಿ

ಏಪ್ರಿಲ್ 2  ರಂದು  ರಾತ್ರಿ 10 ಗಂಟೆ ಸುಮಾರಿಗೆ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿತ್ತು.   ಆಲಪ್ಪುಳ- ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರಯಾಣಿಕರ ಮೇಲೆ ಪೆಟ್ರೋಲ್‌ ವಸ್ತು ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯಲ್ಲಿ ಹಲವರಿಗೆ ಸುಟ್ಟಗಾಯಗಳಾಗಿದ್ದವು. ಘಟನೆಯ ಬಳಿಕ ಮೂವರು ರೈಲಿನಿಂದ ಹಾರಿದ ಪರಿಣಾಮ ಸಾವನ್ನಪ್ಪಿದ್ದರು. ಮೊದಲಿಗೆ ಇದೊಂದು ಸುಲಿಗೆ ದಾಳಿ ಇರಬಹುದು ಎಂದು ಶಂಕಿಸಲಾಗಿತ್ತು. ಅಲಫುಜ-ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಅನಾಹುತ ನಡೆದಿತ್ತು. ಘಟನೆಯ ಬಳಿಕ  ಒಂದು ವರ್ಷದ ಮಗು, ಮಹಿಳೆ ಹಾಗೂ ವ್ಯಕ್ತಿಯೊಬ್ಬರು  ಆ ರೈಲಿನಿಂದ ನಾಪತ್ತೆಯಾಗಿದ್ದರು.

ಭಾರೀ ದುಷ್ಕೃತ್ಯ:
ಆದರೆ ಇದೀಗ ತನಿಖಾ ಸಂಸ್ಥೆಗಳು ಬೆಂಕಿ ಹಚ್ಚಿದ ಘಟನೆ ಹಿಂದೆ ದೊಡ್ಡ ಸಂಚು ಅಡಗಿದೆ. ಇದು ಕೇವಲ ಒಬ್ಬನ ಕೃತ್ಯವಲ್ಲ. ಇದರ ಹಿಂದೆ ದೊಡ್ಡ ತಂಡ ಕೆಲಸ ಮಾಡಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದೆ. ದೇಶ ವಿರೋಧಿ ಮನಸ್ಥಿತಿ ಹೊಂದಿರುವ ಪ್ರಭಾವಿಗಳ ಗುಂಪೊಂದು ಸೈಫಿ ಮೇಲೆ ಭಯೋತ್ಪಾದನಾ ಸಿದ್ಧಾಂತವನ್ನು ತುಂಬಿ ಆತನನ್ನು ದುಷ್ಕೃತ್ಯಕ್ಕೆ ಪ್ರೇರೇಪಿಸಿತ್ತು. ಜೊತೆಗೆ ಆತನಿಗೆ ದುಷ್ಕೃತ್ಯಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿತ್ತು. ಆತನ ಜೊತೆಗೆ ಇನ್ನೂ ಕೆಲವರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಘಟನೆ ಬಳಿಕ ಪರಾರಿಯಾಗಲೂ ಸಂಚುಕೋರರು ಸೈಫಿಗೆ ನೆರವು ನೀಡಿದ್ದಾರೆ. ಎಂಬ ವಿಷಯ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.

click me!