ಅಗ್ನಿವೀರ ನೇಮಕಕ್ಕೆ ಆನ್‌ಲೈನ್‌ ಪರೀಕ್ಷೆ ಶುರು: ಏ.27ರವರೆಗೆ ದೇಶಾದ್ಯಂತ ಪರೀಕ್ಷೆ

By Kannadaprabha NewsFirst Published Apr 18, 2023, 9:30 AM IST
Highlights

ಸೇನೆಯ ‘ಅಗ್ನಿವೀರ’ ಯೋಧರ ನೇಮಕ ಪರೀಕ್ಷಾ ಪದ್ಧತಿಯಲ್ಲಿ ಆದ ಮಹತ್ವದ ಬದಲಾವಣೆ ಸೋಮವಾರ ಕಾರ್ಯರೂಪಕ್ಕೆ ಬಂದಿದ್ದು, ಇದೇ ಮೊದಲ ಬಾರಿ ಆನ್‌ಲೈನ್‌ ಮೂಲಕ ನೇಮಕ ಪರೀಕ್ಷೆಗಳು ಆರಂಭವಾಗಿವೆ.

ನವದೆಹಲಿ: ಸೇನೆಯ ‘ಅಗ್ನಿವೀರ’ ಯೋಧರ ನೇಮಕ ಪರೀಕ್ಷಾ ಪದ್ಧತಿಯಲ್ಲಿ ಆದ ಮಹತ್ವದ ಬದಲಾವಣೆ ಸೋಮವಾರ ಕಾರ್ಯರೂಪಕ್ಕೆ ಬಂದಿದ್ದು, ಇದೇ ಮೊದಲ ಬಾರಿ ಆನ್‌ಲೈನ್‌ ಮೂಲಕ ನೇಮಕ ಪರೀಕ್ಷೆಗಳು ಆರಂಭವಾಗಿವೆ. ಏ.17ರ ಸೋಮವಾರದಿಂದ ದೇಶಾದ್ಯಂತ ಆನ್‌ಲೈನ್‌ ಪರೀಕ್ಷೆಗಳು ಆರಂಭವಾಗಿದ್ದು, ಏ.26ಕ್ಕೆ ಅಂತ್ಯಗೊಳ್ಳಲಿವೆ. ದೇಶದ 176 ಸ್ಥಳಗಳಲ್ಲಿನ 375 ಪರೀಕ್ಷಾ ಕೇಂದ್ರಗಳಲ್ಲಿ ಅಗ್ನವೀರ ಆನ್‌ಲೈನ್‌ ಸಾಮಾನ್ಯ ಪರೀಕ್ಷೆಗಳು ಏರ್ಪಾಡಾಗಿವೆ.

ಈ ಮುನ್ನ ಮೊದಲು ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಕೊನೆಯದಾಗಿ ಖುದ್ದು ಹಾಜರಾಗುವ ಲಿಖಿತ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ದೈಹಿಕ ಪರೀಕ್ಷೆ (physical Exam) ಮೊದಲು ಇರುತ್ತಿದ್ದ ಕಾರಣ ಭಾರಿ ಸಂಖ್ಯೆಯ ಆಕಾಂಕ್ಷಿಗಳು ಸೇರಿ ಗೊಂದಲ ಉಂಟಾಗುವ ಘಟನೆಗಳು ನಡೆದಿದ್ದವು.

Latest Videos

ಅಗ್ನಿವೀರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆದ ಬಿಹಾರ ಸಚಿವ

ಇದನ್ನು ತಪ್ಪಿಸಲು ಈಗ ಮೊದಲು ಆನ್‌ಲೈನ್‌ ಮೂಲಕ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ತಂತ್ರಜ್ಞಾನ ಮುಂದುವರಿದಿರುವ ಕಾರಣ ಲಿಖಿತ ಪರೀಕ್ಷೆ ಬದಲು ಆನ್‌ಲೈನ್‌ ಪರೀಕ್ಷೆ (Online exam) ನಡೆಸಲಾಗುತ್ತದೆ. ನಂತರ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ಆನ್‌ಲೈನ್‌ ಟೆಸ್ಟ್‌ನಲ್ಲಿ ನಪಾಸಾಗುವ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೂ ಅರ್ಹರಾಗುವುದಿಲ್ಲ. ಹೀಗಾಗಿ ದೈಹಿಕ ಪರೀಕ್ಷೆ ವೇಳೆ ಅನಗತ್ಯ ಜನಜಂಗುಳಿ ತಪ್ಪುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ. 'ಅಗ್ನಿವೀರ' (Agniveer) ಎಂಬುದು ಸರ್ಕಾರ ಇತ್ತೀಚೆಗೆ ತಂದ ಯೋಜನೆ ಆಗಿದ್ದು, 4 ವರ್ಷದ ಅವಧಿಗೆ ಯೋಧರ ನೇಮಕವಾಗುತ್ತದೆ.

ಅಗ್ನಿವೀರ ನೇಮಕ ನಿಯಮ ಬದಲು: ಮೊದಲು ಆನ್‌ಲೈನ್‌ ಟೆಸ್ಟ್‌ ಜಾರಿ

click me!