ಮಾಂಸಾಹಾರ ಸೇವಿಸಿದ್ದರಿಂದ ಗಣೇಶ ದೇಗುಲ ಪ್ರವೇಶಿಸದ ಪವಾರ್‌!

Published : May 29, 2022, 07:24 AM ISTUpdated : May 29, 2022, 08:57 AM IST
ಮಾಂಸಾಹಾರ ಸೇವಿಸಿದ್ದರಿಂದ ಗಣೇಶ ದೇಗುಲ ಪ್ರವೇಶಿಸದ ಪವಾರ್‌!

ಸಾರಾಂಶ

* ದಗಡುಶೇಠ್‌ ಗಣಪತಿಗೆ ಹೊರಗಿನಿಂದಲೇ ನಮಸ್ಕಾರ ಮಾಡಿದ ಪವಾರ್ * ಮಾಂಸಾಹಾರ ಸೇವಿಸಿದ್ದರಿಂದ ಗಣೇಶ ದೇಗುಲ ಪ್ರವೇಶಿಸದ ಪವಾರ್‌ * ಮಾಂಸಾಹಾರ ಸೇವಿಸಿದ್ದರಿಂದ ದೇವಾಲಯ ಪ್ರವೇಶಿಸಿಲ್ಲ: ಆಪ್ತರ ಸ್ಪಷ್ಟನೆ

ಪುಣೆ(ಮೇ.29(ಮೇ.29): ಪ್ರಸಿದ್ಧ ದಗಡುಶೇಠ್‌ ಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ದೇವಾಲಯ ಪ್ರವೇಶಿಸದೇ ಹೊರಗಿನಿಂದಲೇ ಕೈಮುಗಿದು ಹೋಗಿದ್ದು ಭಾರೀ ಚರ್ಚೆಗೆ ಕಾರಣಗಿದೆ. ಇದರ ಬೆನ್ನಲ್ಲೇ, ‘ಮುಂಜಾನೆ ಮಾಂಸಾಹಾರ ಸೇವಿಸಿದ್ದರಿಂದ ಅವರು ದೇವಾಲಯ ಪ್ರವೇಶಿಸಿರಲಿಲ್ಲ’ಎಂದು ಪವಾರ್‌ ಆಪ್ತರು ತಿಳಿಸಿದ್ದಾರೆ.

ದಗಡುಶೇಠ್‌ ದೇವಾಲಯದ ಆವರಣ ಪಕ್ಕದಲ್ಲಿರುವ ಜಮೀನನ್ನು ದೇವಾಲಯದ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂಬ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ಪವಾರ್‌ ಪರಿಶೀಲನೆಗಾಗಿ ಆಗಮಿಸಿದ್ದರು. ಈ ಜಮೀನು ಪ್ರಸ್ತುತ ರಾಜ್ಯ ಗೃಹ ಸಚಿವಾಲಯಕ್ಕೆ ಸೇರಿದ್ದು, ಎನ್‌ಸಿಪಿ ನಾಯಕ ದಿಲೀಪ್‌ ವಾಲ್ಸೆ ಪಾಟೀಲ್‌ ಗೃಹ ಸಚಿವರಾಗಿದ್ದಾರೆ. ಆದರೆ, ದೇವಾಲಯ ಪ್ರವೇಶಿಸದೇ ಹೊರಗಿನಿಂದಲೇ ದರ್ಶನ ಪಡೆದ ಶರದ್‌ ಪವಾರ್‌ ನಡೆಯ ಬಗ್ಗೆ ಭಾರೀ ಟೀಕೆಗೆ ಕಾರಣವಾಗಿತ್ತು.

Sugar War: ಸಾಲು ಸಾಲು ಆರೋಪ ಇದ್ದರೂ ರಮೇಶ್ ಜಾರಕಿಹೊಳಿ ಮೌನವೇಕೆ?

ಈ ಹಿನ್ನೆಲೆಯಲ್ಲಿ ಪುಣೆಯ ಎನ್‌ಸಿಪಿ ಅಧ್ಯಕ್ಷ ಪ್ರಶಾಂತ್‌ ಜಗತಾಪ್‌, ‘ಬೆಳಿಗ್ಗೆ ಮಾಂಸಾಹಾರ ಸೇವಿಸಿದ್ದೇನೆ. ಹೀಗಾಗಿ ದೇವಾಲಯವನ್ನು ಪ್ರವೇಶಿಸುವುದು ಸರಿಯಲ್ಲ’ ಎಂದು ಪವಾರ್‌ ನಮ್ಮೆದುರು ಹೇಳಿದರು. ಹೀಗಾಗಿ ಹೊರಗಿನಿಂದಲೇ ದರ್ಶನ ಪಡೆದರು ಎಂದಿದ್ದಾರೆ.

ಪವಾರ್‌ಗೆ ತಿವಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನಟಿ, ಕೇತಕಿ ಈಗ ನ್ಯಾಯಾಂಗ ಬಂಧನದಲ್ಲಿ!

ಮರಾಠಿ ನಟಿ ಕೇತಕಿ ಚಿತಾಳೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ವಿರುದ್ಧ ಕಾಮೆಂಟ್ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅವರು ನೋಡ ನೋಡುತ್ತಿದ್ದಂತೆಯೇ ಪೊಲೀಸ್‌ ಕೇಸ್‌ನಲ್ಲಿ ಸಿಕ್ಕಾಕೊಂಡಿದ್ದಾರೆ.  ಹೆಚ್ಚುತ್ತಿದೆ. ಒಂದೆಡೆ, ಬುಧವಾರದಂದು ಅವರ ಪೊಲೀಸ್ ಕಸ್ಟಡಿ ಕೊನೆಗೊಂಡಿದ್ದು, ಅವರಿಗೆ ಕೊಂಚ ರಿಲೀಫ್‌ ಸಿಗಬಹುದೆಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಥಾಣೆ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇದೀಗ ಅವರು ಮೇ 31ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಶರದ್ ಪವಾರ್ ವಿರುದ್ಧ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದಕ್ಕಾಗಿ ಮೇ 15 ರಂದು ಅವರನ್ನು ಬಂಧಿಸಲಾಗಿತ್ತು. ಮೇ 18ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದರೂ ಇಂದು ಬಿಡುಗಡೆ ಸಿಕ್ಕಿಲ್ಲ.

ಮಹಾ ಡಿಸಿಎಂ ಪವಾರ್‌ ಗಡಿ ಕ್ಯಾತೆ ಕನ್ನಡಿಗರ ಆಕ್ರೋಶ!

ಏನಿದು ಪ್ರಕರಣ?

ಕೇತಕಿ ಬೇರೊಬ್ಬರ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಶರದ್ ಪವಾರ್ ಅವರ ಪೂರ್ಣ ಹೆಸರನ್ನು ಬರೆದಿರಲಿಲ್ಲ, ಅವರ ಸರ್‌ನೇಮ್ ಮತ್ತು ವಯಸ್ಸನ್ನು ಮಾತ್ರ ನಮೂದಿಸಲಾಗಿದೆ. ಪೋಸ್ಟ್‌ನಲ್ಲಿ ಶರದ್ ಪವಾರ್ ಅವರ ವಯಸ್ಸು 80 ವರ್ಷ ಎಂದು ನಮೂದಿಸಲಾಗಿದೆ, ಅವರಿಗೆ ಪ್ರಸ್ತುತ 81 ವರ್ಷ. ಈ ಪೋಸ್ಟ್‌ನಲ್ಲಿ 'ನರಕ ನಿನಗಾಗಿ ಕಾಯುತ್ತಿದೆ ಮತ್ತು ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ' ಎಂದು ಬರೆಯಲಾಗಿದೆ. ಇನ್ನು ಈ ಪೋಸ್ಟ್‌ ಭಾರೀ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಎನ್‌ಸಿಪಿ ಕಾರ್ಯಕರ್ತ ಸ್ವಪ್ನಿಲ್ ನೆಟ್ಕೆ ಅವರ ವಿರುದ್ಧ ಥಾಣೆಯ ಕಲ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಮೇ 14ರಂದು ಈತನ ವಿರುದ್ಧ ಪ್ರಕರಣ ದಾಖಲಿಸಿ ಕೇತಕಿಯನ್ನು ಬಂಧಿಸಲಾಗಿತ್ತು. ಉತ್ತರ ಮಹಾರಾಷ್ಟ್ರದ ಧುಲೆಯಲ್ಲಿ ನಟಿ ವಿರುದ್ಧ ಎರಡನೇ ದೂರು ದಾಖಲಾಗಿದೆ. ಇದರಲ್ಲಿ ನಿಖಿಲ್ ಭಾಮ್ರೆ ಎಂಬ ಯುವಕ ಟ್ವೀಟ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಬಾರಾಮತಿಯ ಗಾಂಧಿಯನ್ನು ಬಾರಾಮತಿಯ ನಾಥೂರಾಂ ಗೋಡ್ಸೆ ಮಾಡುವ ಕಾಲ ಬಂದಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ ಎಂದು ಆರೋಪಿಸಲಾಗಿದೆ. ಬಾರಾಮತಿ ಶರದ್ ಪವಾರ್ ಅವರ ತವರು ಕ್ಷೇತ್ರ ಎಂಬುವುದು ಉಲ್ಲೇಖನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು