
ಇಂದೋರ್ (ಮೇ. 28): ಮುಖ್ಯಮಂತ್ರಿ ವಿವಾಹ ಯೋಜನೆಯ (Chief Minister Kanyadan Yojana) ಲಾಭ ಪಡೆಯುವ ಸಲುವಾಗಿ ಈಗಾಗಲೇ ಮದುವೆಯಾಗಿರುವ ವ್ಯಕ್ತಿ ಮತ್ತೊಮ್ಮೆ ಮರು ಮದುವೆಯಾಗಲು ಯತ್ನಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿ ಬಿದ್ದಿರುವ ವ್ಯಕ್ತಿ, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸಂಯೋಜಕ ಹಾಗೂ ಯುವ ಕಾಂಗ್ರೆಸ್ ಮುಖಂಡ (NSUI and Youth Congress Leader) ಎನ್ನುವುದು ವಿಶೇಷವಾಗಿದೆ.
15 ದಿನಗಳ ಹಿಂದೆಯಷ್ಟೇ ವಿವಾಹವಾದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸಂಯೋಜಕ ನೈತಿಕ್ ಚೌಧರಿ (naitik choudhary) ಅವರು ಮತ್ತೆ ಮದುವೆಯಾಗಲು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಾಲಾಜಿ ದೇವಸ್ಥಾನದ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾವೇಶಕ್ಕೆ ಆಗಮಿಸಿದ್ದರು. ಯುವ ಕಾಂಗ್ರೆಸ್ ಮುಖಂಡ 'ಮುಖ್ಯಮಂತ್ರಿ ಕನ್ಯಾದಾನ ಯೋಜನೆ'ಯ ಲಾಭವನ್ನು ಪಡೆಯಲು ಬಯಸಿದ್ದರು ಮತ್ತು ಆದ್ದರಿಂದ ಅವರು ತಮ್ಮ ಪತ್ನಿಯನ್ನು ಮರುಮದುವೆ ಮಾಡಿಕೊಳ್ಳಲು ಸಾಗರದ ಧರ್ಮಶ್ರೀಯಲ್ಲಿರುವ ಬಾಲಾಜಿ ದೇವಾಲಯದ ಸಂಕೀರ್ಣದ ಮಂಟಪಕ್ಕೆ ಬಂದಿದ್ದರು ಎಂದು ಆರೋಪ ಮಾಡಲಾಗಿದೆ.
ವಿವಾಹಕ್ಕಾಗಿ ದೇವಸ್ಥಾನದ ಮುಂದೆ ಕುಳಿತಿದ್ದ ವೇಳೆ ಇದು ಸಂಘಟಕರ ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ನೈತಿಕ್‌ನನ್ನು ಬಂಧಿಸಿದರು ಆದರೆ ನಂತರ ಬಿಡುಗಡೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷವನ್ನು ಕೆಣಕಿದ ಬಿಜೆಪಿ: ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, , "ಈ ಸರ್ ಎನ್ಎಸ್ಯುಐನ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯ ಲಾಭ ಪಡೆಯಲು ಅವರು ಎರಡನೇ ಮದುವೆಯಾಗಲು ಹೋಗಿದ್ದಾರೆ. ಈ ಸಮಯದಲ್ಲಿ ಪೊಲೀಸರು ಅವನನ್ನು ಹಿಡಿದಿದ್ದಾರೆಂದು ವರದಿಯಾಗಿದೆ. ನೀವು ಏನು ಹೇಳುತ್ತೀರಿ, ಕಮಲ್ ನಾಥ್ ಜೀ!" ಎಂದು ಟ್ವೀಟ್ ಮಾಡಿದ್ದಾರೆ.
SAVE SOIL ಅಭಿಯಾನಕ್ಕೆ ಬೆಂಬಲ, ವಿದ್ಯುತ್ ದೀಪಗಳಲ್ಲಿ ಕಂಗೊಳಿಸಿದ ಮುಂಬೈ BMC!
ನೈತಿಕ್ ಚೌಧರಿ, ಮೇ 11ರಂದು ವಿವಾಹವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳು ಕನ್ಯಾದಾನ ಯೋಜನೆಯಲ್ಲಿ ಸಿಗುವ ಉಡುಗೊರೆ ವಸ್ತುವಿನ ದುರಾಸೆಯಲ್ಲಿ ಮತ್ತೆ ಮದುವೆಯಾಗಲು ಮದುವೆ ಮಂಟಪದಲ್ಲಿ ಕುಳಿತಿದ್ದರು. ಕಾಂಗ್ರೆಸ್ ಸಮಿತಿಯ ಐಟಿ ವಿಭಾಗದ ಸಾಗರ ಲೋಕಸಭೆಯ ಉಸ್ತುವಾರಿ ಮತ್ತು ಎನ್‌ಎಸ್‌ಯುಐ ರಾಷ್ಟ್ರೀಯ ಸಂಯೋಜಕ ನೈತಿಕ್ ಚೌಧರಿ ಅವರನ್ನು ಸಾಮೂಹಿಕ ವಿವಾಹ ಸಮಾವೇಶದಿಂದ ಪೊಲೀಸರು ಬಂಧಿಸಿದ್ದಾರೆ. ಸಮಾರಂಭದಲ್ಲಿ ಕೆಲವರು ನೈತಿಕ್ ಅವರಿಗೆ ಈಗಾಗಲೇ ವಿವಾಹವಾಗಿದೆ ಇದರ ಹಿಂದಿನ ಮಾಹಿತಿ ಲಬ್ಯವಾಗಿದ.ೆ ಇದಾದ ಬಳಿಕ ಶಾಸಕ ಶೈಲೇಂದ್ರ ಜೈನ್ ಅವರು ನಗರಸಭೆಯಲ್ಲಿ ಮದುವೆ ನೋಂದಣಿ ದಾಖಲೆಗಳನ್ನು ಪರಿಶೀಲನೆಯನ್ನೂ ಮಾಡಿದ್ದಾರೆ.
ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಕೇಸ್, ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿದ ಕೋರ್ಟ್
ಕೆಲವರು ನೈತಿಕ್ ಅವರ ಮದುವೆಯ ಆಹ್ವಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿಯುವ ಮುನ್ನವೇ ಪೊಲೀಸರು ನೈತಿಕ್ ಅವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಆರಂಭದಿಂದಲೂ ಇಂಥ ಕೆಲಸ ಮಾಡುವುದು ಬೇಡ ಎಂದು ಅವರಿಗೆ ಹೇಳುತ್ತಿದ್ದೆ ಎಂದು ಹೇಳಿರುವ ಪತ್ನಿ ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ