ಸ್ವ ಇಚ್ಛೆಯಿಂದ ಇಬ್ಬರು ಮಹಿಳೆಯರು ಒಟ್ಟಿಗೆ ಇರಲು ಬಯಸಿದರೆ ತಡೆಯಲಾಗಲ್ಲ: ಹೈಕೋರ್ಟ್

By BK AshwinFirst Published Nov 12, 2022, 12:34 PM IST
Highlights

18 ವರ್ಷದ ಯುವತಿಯ ತಂದೆ ಕಳೆದ ತಿಂಗಳು ತನ್ನ ಮಗಳನ್ನು ಕಸ್ಟಡಿಗೆ ಕೋರಿ ಮಧ್ಯ ಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಮಗಳನ್ನು ತನ್ನ ಮಹಿಳಾ ಸ್ನೇಹಿತೆಯ ಜೊತೆಯಲ್ಲಿ ಉಳಿಯುವ ಬದಲು ಕುಟುಂಬದೊಂದಿಗೆ ಇರುವಂತೆ ಮನವೊಲಿಸಲು ನಾನು ಪ್ರಯತ್ನಿಸಿದೆ. ಆದರೆ ಅವಳು ಒಪ್ಪಲಿಲ್ಲ ಎಂದು ತಂದೆ ಹೇಳಿದ್ದಾರೆ. 

ಇಬ್ಬರು ಮಹಿಳೆಯರು(Women) ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ, ನ್ಯಾಯಾಲಯವು (Court) ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಶುಕ್ರವಾರ ಹೇಳಿದೆ. 22ರ ಹರೆಯದ ಮಹಿಳೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ 18 ವರ್ಷದ ಯುವತಿಯ ತಂದೆ (Father) ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು (Plea) ನ್ಯಾಯಾಲಯ ವಿಚಾರಣೆ (Hearing) ನಡೆಸುತ್ತಿದ್ದು, ಈ ವೇಳೆ ಹೈಕೋರ್ಟ್‌ ನ್ಯಾಯಮೂರ್ತಿಗಳು (Judge) ಈ ಆದೇಶ ನೀಡಿದ್ದಾರೆ. 
 
ಮಧ್ಯ ಪ್ರದೇಶದ ಜಬಲ್‌ಪುರದ 18 ವರ್ಷದ ಯುವತಿ ಮತ್ತು ಆಕೆಯೊಂದಿಗೆ ಓಡಿಹೋದ ಮಹಿಳೆ ಇಬ್ಬರೂ ಬಾಲ್ಯದಿಂದಲೇ ಒಟ್ಟಿಗೆ ಬೆಳೆದರು. ಅವರು ಒಟ್ಟಿಗೆ ಅಧ್ಯಯನ ಮಾಡಿದರು ಮತ್ತು ನಂತರ ಭಾವನಾತಕ್ಮವಾಗಿ ಅಟ್ಯಾಚ್‌ ಆಗಿದ್ದು, ಅವರು ಈಗ ಪ್ರತ್ಯೇಕವಾಗಿ ಬದುಕಲು ಸಿದ್ಧರಿಲ್ಲ ಎಂದು ಹೇಳಲಾಗಿದೆ.

ಇದನ್ನು ಓದಿ: Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ
 
ಆದರೆ, ಮನೆಯವರಿಗೆ ಈ ವಿಷಯ ತಿಳಿದಾಗ ಇಬ್ಬರೂ ಅವಹಿವಾಹಿತೆಯರು ಓಡಿ ಹೋಗಿದ್ದಾರೆ. ಈ ಬಗ್ಗೆ 18 ವರ್ಷದ ಯುವತಿಯ ತಂದೆ ಕಳೆದ ತಿಂಗಳು ತನ್ನ ಮಗಳನ್ನು ಕಸ್ಟಡಿಗೆ ಕೋರಿ ಮಧ್ಯ ಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಮಗಳನ್ನು ತನ್ನ ಮಹಿಳಾ ಸ್ನೇಹಿತೆಯ ಜೊತೆಯಲ್ಲಿ ಉಳಿಯುವ ಬದಲು ಕುಟುಂಬದೊಂದಿಗೆ ಇರುವಂತೆ ಮನವೊಲಿಸಲು ನಾನು ಪ್ರಯತ್ನಿಸಿದೆ. ಆದರೆ ಅವಳು ಒಪ್ಪಲಿಲ್ಲ ಎಂದು ತಂದೆ ನ್ಯಾಯಾಲಯಕ್ಕೆ ಅವಲತ್ತುಕೊಂಡಿದ್ದರು.
 
ಈ ಅರ್ಜಿಯನ್ನು ಸ್ವೀಕರಿಸಿದ ಮಧ್ಯ ಪ್ರದೇಶ ಹೈಕೋರ್ಟ್ ಬಾಲಕಿಗೆ ನೋಟಿಸ್ ಜಾರಿ ಮಾಡಿ, ಹಾಜರಾಗುವಂತೆ ಸೂಚಿಸಿದೆ. 18 ವರ್ಷದ ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಆಕೆಗೆ ನಿರ್ಧರಿಸಲು ಒಂದು ಗಂಟೆ ಸಮಯ ನೀಡಲಾಯಿತು. ಆದರೆ,  ಆಕೆ ತನ್ನ ಸ್ನೇಹಿತೆಯೊಂದಿಗೆ ವಾಸ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: Indian Law : ಸಲಿಂಗ ದಂಪತಿ ಮಕ್ಕಳನ್ನು ದತ್ತು ಪಡೀಬಹುದಾ?

ಈ ಹಿನ್ನೆಲೆ, ಯುವತಿ ವಯಸ್ಕಳಾಗಿರುವುದರಿಂದ ಅವರ ಜೀವನದ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಬಹುದು ಎಂದು ಮಧ್ಯ ಪ್ರದೇಶ ಹೈಕೋರ್ಟ್‌ ಹೇಳಿದ್ದು, ಅವರಿಬ್ಬರಿಗೂ ಒಟ್ಟಿಗೆ ಇರಲು ಅನುಮತಿ ನೀಡಿದೆ. 

ಇದನ್ನೂ ಓದಿ: ಸಲಿಂಗಿ ವಿವಾಹಕ್ಕೆ ಅಮೆರಿಕಾ ಸಂಸತ್ ಸಮ್ಮತಿ

ಇಬ್ಬರು ಪುರುಷರು ಅಥವಾ ಇಬ್ಬರು ಮಹಿಳೆಯರು ಒಟ್ಟಿಗೆ ಇರಲು ಸದ್ಯ ಅವಕಾಶವಿದ್ದರೂ, ಅವರಿಬ್ಬರೂ ಮದುವೆಯಾಗಲು ಸದ್ಯ ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲ. ಕೆಲ ತಿಂಗಳ ಹಿಂದೆ ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗಿ ದಂಪತಿ ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಮಹಿಳೆಯೊಬ್ಬಳು ಬಲವಂತವಾಗಿ ಮತ್ತು ಅಕ್ರಮವಾಗಿ ತನ್ನ ಮಗಳನ್ನು ಬಂಧನದಲ್ಲಿಟ್ಟಿದ್ದಾಳೆ. ಆಕೆಯನ್ನು ನಮಗೆ ಒಪ್ಪಿಸಬೇಕು ಎಂದು ಹೇಳಿ ವಯಸ್ಕ ಮಹಿಳೆಯ ತಾಯಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ಮಾಡುವ ವೇಳೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ಅಭಿಪ್ರಾಯ ಪಟ್ಟಿದ್ದರು. 

ಇದನ್ನೂ ಓದಿ: ಪರಸ್ಪರ ರಿಂಗ್‌ ಬದಲಾಯಿಸಿಕೊಂಡ ಇಬ್ಬರು ಮಹಿಳಾ ವೈದ್ಯರು, ಗೋವಾದಲ್ಲಿ ಮದುವೆ

ಇದೇ ಈತಿ, ಮಹಾರಾಷ್ಟ್ರದ ನಾಗಪುರದಲ್ಲಿ ಮಹಿಳಾ ವೈದ್ಯರಿಬ್ಬರು ಈ ವರ್ಷ ಜನವರಿಯಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದು ಸುದ್ದಿಯಾಗಿದ್ದರು.  ಗೋವಾದಲ್ಲಿ ಇವರು ವಿವಾಹವಾಗುವುದಾಗಿಯೂ ಹೇಳಿಕೊಂಡಿದ್ದರು. ಬದ್ಧತೆಯ ಉಂಗುರ ಬದಲಾವಣೆ ಕಾರ್ಯಕ್ರಮ ಎಂದು ಅವರಿದನ್ನು ಕರೆದಿದ್ದು ಇಬ್ಬರು ಕೊನೆಯವರೆಗೆ ಜೊತೆಯಾಗಿ ಜೀವಿಸುವ ಶಪಥ ಮಾಡಿದ್ದಾರೆ.  

click me!