ನೈಋುತ್ಯ ಅರಬ್ಬಿ ಸಮುದ್ರದಲ್ಲಿ ‘ಗತಿ’ ಹೆಸರಿನ ಚಂಡಮಾರುತ ಎದ್ದಿದ್ದು, ನವೆಂಬರ್ 24 ಹಾಗೂ 25ಕ್ಕೆ ಪುದುಚೇರಿ ಹಾಗೂ ಕಾರೈಕಲ್ ಮಧ್ಯೆ ಅಪ್ಪಳಿಸುವ ಸಂಭವವಿದೆ.
ನವದೆಹಲಿ (ನ. 24): ದಕ್ಷಿಣ ಭಾರತದ ರಾಜ್ಯಗಳ ಮೇಲೆ ಮಂಗಳವಾರದಿಂದ ಆರಂಭವಾಗುವಂತೆ ಎರಡು ಚಂಡಮಾರುತಗಳು ಅಪ್ಪಳಿಸಲಿವೆ. ಹೀಗಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ನೈಋುತ್ಯ ಅರಬ್ಬಿ ಸಮುದ್ರದಲ್ಲಿ ‘ಗತಿ’ ಹೆಸರಿನ ಚಂಡಮಾರುತ ಎದ್ದಿದ್ದು, ನವೆಂಬರ್ 24 ಹಾಗೂ 25ಕ್ಕೆ ಪುದುಚೇರಿ ಹಾಗೂ ಕಾರೈಕಲ್ ಮಧ್ಯೆ ಅಪ್ಪಳಿಸುವ ಸಂಭವವಿದೆ. ಇದೇ ವೇಳೆ ನವೆಂಬರ್ 25ರ ವೇಳೆಗೆ ದಕ್ಷಿಣ ಆಂಧ್ರಪ್ರದೇಶ ಹಾಗೂ ಉತ್ತರ ತಮಿಳುನಾಡು ಕರಾವಳಿಗೆ ‘ನಿವಾರ್’ ಹೆಸರಿನ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.
undefined
ಯುಪಿ, ಎಂಪಿ ಹರ್ಯಾಣ ಬಳಿಕ ಕರ್ನಾಟಕದಲ್ಲೂ ಲವ್ ಜಿಹಾದ್ ನಿಯಂತ್ರಣಕ್ಕೆ ಸಿದ್ಧತೆ?
‘ಗತಿ ಚಂಡಮಾರುತ ನೈಋುತ್ಯ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದೆ. ಇದು ನ.24-25ರ ವೇಳೆಗೆ ಇದು ಭಾರತದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಂಭವವಿದೆ. ಆದರೆ ಇದು ಈಗ ಉತ್ತರ ಸೊಮಾಲಿಯಾ ಕರಾವಳಿ ಹಾಗೂ ಏಡನ್ ಕೊಲ್ಲಿಯತ್ತ ಮುಖ ಮಾಡಿರುವ ಕಾರಣ ಭಾರತದ ಮೇಲೆ ಪರಿಣಾಮ ಕಡಿಮೆ ಅಗಬಹುದು’ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹಾಗೂ ಭಾರತೀಯ ಹವಾಮಾನ ಇಲಾಖೆಗಳು ಹೇಳಿವೆ.
ಕೊರೊನಾ ಹಾವಳಿ : ಡಿಸಂಬರ್‌ನಲ್ಲಿ ಮತ್ತೆ ಲಾಕ್‌ಡೌನ್?
ಇನ್ನು ನಿವಾರ್ ಚಂಡಮಾರುತವು ಈಗ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದು, ಇದು ಗಂಟೆಗೆ 100 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಆಂಧ್ರ, ತಮಿಳುನಾಡು ಕರಾವಳಿಗೆ ನ.25ರಂದು ಅಪ್ಪಳಿಸಬಹುದು ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ.
ಚಂಡಮಾರುತ ಎದುರಿಸುವ ಸಿದ್ಧತೆಗಳ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾ ಸಮಿತಿ ಸೋಮವಾರ ಸಭೆ ನಡೆಸಿತು ಹಾಗೂ ಯಾವುದೇ ಪ್ರಾಣಹಾನಿ ಆಗದಂಥ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತು. ಇದೇ ವೇಳೆ ನಿವಾರ್‌ನಿಂದ ಎದುರಾಗಬಹುದಾದ ಸಮಸ್ಯೆ ನಿರ್ವಹಣೆಗೆ 30 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ತಿಳಿಸಿದೆ.