
ಬೆಂಗಳೂರು (ಅ.27) ಮಂಥಾ ಚಂಡಮಾರುತದಿಂದ ಹಲವು ರಾಜ್ಯಗಳು ತತ್ತರಿಸಿದೆ. ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಕರ್ನಾಟಕದಲ್ಲೂ ಮಂಥಾ ಚಂಡಮಾರುತದಿಂದ ಭಾರಿ ಮಳೆ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ. ಮೊಂಥ ಚಂಡಮಾರುತದಿಂದ ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.
ಪ್ರಬಲ 'ಮಾಂತಾ' (MONTHA) ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೇ ಇಲಾಕೆ ಪ್ರಕಟಣೆ ಹೊರಡಸಿದೆ. ನಾಳೆಯಿಂದ ಹಲವು ರೈಲು ಸೇವೆಗಳಲ್ಲಿ ಭಾರೀ ವ್ಯತ್ಯಯವಾಗಲಿದೆ. ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಿ ರೈಲುಳು ಹೊರಡಲಿದೆ.
1. ರೈಲು ಸಂಖ್ಯೆ 22501 SMVT ಬೆಂಗಳೂರು - ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
2. ರೈಲು ಸಂಖ್ಯೆ 12836 SMVT ಬೆಂಗಳೂರು - ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
3. ರೈಲು ಸಂಖ್ಯೆ 12503 SMVT ಬೆಂಗಳೂರು - ಅಗರ್ತಲಾ ಹಮ್ ಸಫರ್ ಎಕ್ಸ್‌ಪ್ರೆಸ್.
4. ರೈಲು ಸಂಖ್ಯೆ 12246 SMVT ಬೆಂಗಳೂರು - ಹೌರಾ ಜಂಕ್ಷನ್ ದುರಂತೋ ಎಕ್ಸ್‌ಪ್ರೆಸ್.
5. ರೈಲು ಸಂಖ್ಯೆ 12864 SMVT ಬೆಂಗಳೂರು - ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
6. ರೈಲು ಸಂಖ್ಯೆ 13433 SMVT ಬೆಂಗಳೂರು - ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್.
7. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ - ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್.
ಅಕ್ಟೋಬರ್ 28ಕ್ಕೆ ಭಾರಿ ಮಳೆ
ಮಂತಾ ಚಂಡಮಾರುತದಿಂದ ಅಕ್ಟೋಬರ್ 28 ರಂದು ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಈ ಪೈಕಿ ಆಂಧ್ರ ಪ್ರದೇಶ, ತಮಿಳುನಾಡು, ಹಾಗೂ ಒಡಿಶಾದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತೀವ್ರ ಮುನ್ನಚ್ಚೆರಿಕೆ ವಹಿಸುವಂತೆ ಸೂಚಿಸಿದೆ. ಕರ್ನಾಟದಲ್ಲೂ ಮಂತಾ ಚಂಡಮಾರುತದಿಂದ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ