
ನವದೆಹಲಿ (ಅ.27) ಉತ್ತರ ಭಾರತದ ಪ್ರಮುಖ ಹಬ್ಬಗಳ ಪೈಕಿ ಛಟ್ ಪೂಜಾ ಅತ್ಯಂತ ವಿಶೇಷ ಹಾಗೂ ಮಹತ್ವದ್ದಾಗಿದೆ. ಪ್ರಮುಖವಾಗಿ ಬಿಹಾರದಲ್ಲಿ ಛಟ್ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ದೇಶಾದ್ಯಂದ ನಾಯಕರು, ಸೆಲೆಬ್ರೆಟಿಗಳು ಛಟ್ ಪೂಜಗೆ ಶುಭ ಕೋರಿ ಸಂದೇಶ ಪೋಸ್ಟ್ ಮಾಡುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಛಟ್ ಪೂಜೆ ಆಚರಿಸುತ್ತಿರುವ ಜನತೆಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿ ಮಾಡಿದ ಟ್ವೀಟ್‌ನಲ್ಲಿ ಹುಳುಕನ್ನು ಬಿಜೆಪಿ ಪತ್ತೆ ಹಚ್ಚಿದೆ. ಇಷ್ಟೇ ಅಲ್ಲ ಬಿಹಾರ ಜನತೆಯ ಹಬ್ಬವನ್ನು ಈ ರೀತಿ ಭಾವನೆ ಇಲ್ಲದೆ ಶುಭಕೋರಿ ಅಪಮಾನಿಸುವುದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಛಟ್ ಪೂಜೆಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಅದ್ಧೂರಿ ಛಟ್ ಪೂಜೆ ಹಬ್ಬಕ್ಕೆ ನನ್ನ ಹೃದಯತುಂಬಿದ ಶುಭಾಶಯಗಳು. ಈ ವಿಶೇಷ ಹಾಗೂ ಪವಿತ್ರ ಹಬ್ಬ, ನಿಮ್ಮ ಬದುಕಿನಲ್ಲಿ ಸುಖ ಸಂಪತ್ತು, ಆರೋಗ್ಯ ಕರುಣಿಸಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಛಟ್ ಪೂಜೆ ಶುಭಾಶಯದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಮಾಡಿದ ಟ್ವೀಟ್‌ನಲ್ಲಿ ತಾಂತ್ರಿಕ, ಅಕ್ಷರ, ಪದ ಅಥವಾ ಇನ್ಯಾವುದೇ ತಪ್ಪುಗಳಿಲ್ಲ. ಆದರೆ ಕಳೆದ ವರ್ಷ ಮಾಡಿದ ಅದೇ
ಟ್ವೀಟ್‌ನ್ನು ರಾಹುಲ್ ಗಾಂಧಿ ಕಾಪಿ ಪೇಸ್ಟ್ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ರಾಹುಲ್ ಗಾಂಧಿ ಕಳೆದ ವರ್ಷ ಛಟ್ ಪೂಜೆಗೆ ಮಾಡಿದ ಅದೇ ಫೋಟೋವನ್ನು ಈ ಬಾರಿ ಕಾಪಿ ಪೇಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಬಿಹಾರ ಜನತೆಯ ಅತ್ಯಂತ ಪವಿತ್ರ ಹಬ್ಬಕ್ಕೆ ಕಾಪಿ ಪೇಸ್ಟ್ ಮಾಡಿ ಶುಭಕೋರುತ್ತಿದ್ದೀರಿ. ರಾಹುಲ್ ಗಾಂಧಿ ಛಟ್ ಪೂಜೆಗೆ ಮಾಡಿದ ಶುಭಾಶಯ ಮನಸ್ಸಿನಿಂದ, ಹೃದಯದಿಂದ ಮಾಡಿಲ್ಲ, ಇದು ಚುನಾವಣೆ ಕಾರಣಕ್ಕೆ ಬೇಕಿತ್ತು. ಹಾಗಾಗಿ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯ ಟೀಕಿಸಿದ್ದಾರೆ.
ಕಾಪಿ ಪೇಸ್ಟ್ ಮಾಡುವ ನಾಯಕ, ತಾನು ಬಿಹಾರ ಜೊತೆಗೆ ನಿಕಟ ಸಂಪರ್ಕ, ಭಾವನಾತ್ಮಕ ಸಂಬಂಧ ಹೊಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಛಟ್ ಪೂಜೆ ಹಾಗೂ ಬಿಹಾರ ಜನತೆಗೆ ಭಾವನೆಗಳಿಗೆ ಬೆಲೆ ಕೊಡದೆ ಟ್ವೀಟ್ ಮಾಡಿದ್ದಾರೆ. ಚುನಾವಣೆಗೆ ಬೇಕಾಗಿದೆ. ಹೀಗಾಗಿ ಶುಭಕೋರಿದ್ದಾರೆ ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ. ಇದು ಬಿಹಾರ ಜನತಗೆ ಮಾಡಿದ ಅಪಮಾನ. ಹಳೇ ಪೋಸ್ಟ್ ಕಾಪಿ ಮಾಡಿ ಲೇಟಾಗಿ ಪೋಸ್ಟ್ ಮಾಡಿದ್ದಾರೆ. ಕಾರಣ ಚುನಾವಣೆ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ಕಳೆದ ವರ್ಷ ಮಾಡಿದ ಶುಭಾಶಯ ಟ್ವೀಟ್ ಹಾಗೂ ಈ ವರ್ಷದ ಟ್ವೀಟ್ ಎರಡನ್ನು ಅಮಿತ್ ಮಾಳವಿಯಾ ಸ್ಕ್ರೀನ ಶಾಟ್ ಹಾಕಿದ್ದಾರೆ. ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಒಂದೆಡೆ ರಾಹುಲ್ ಗಾಂಧಿಗೆ ಬಿಹಾರ ಜನತೆಯನ್ನು ಕೇವಲ ಚುನಾವಣೆ ದೃಷ್ಟಿಯಿಂದ ನೋಡುತ್ತಿದ್ದಾರೆ. ಹೀಗಾಗಿ ಈ ರೀತಿ ಮಾಡಿದ್ದಾರೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾದರೆ ಮತ್ತೊಂದೆಡೆ ಇದರಲ್ಲಿ ತಪ್ಪೇನಿದೆ. ಬಿಜೆಪಿ ನಾಯಕರು ಈ ರೀತಿ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ