Poisonous liquor UP ಚುನಾವಣೆ ನಡುವೆ ಎಣ್ಣೆ ಅವಘಡ, SP ಅಭ್ಯರ್ಥಿ ಸಂಬಂಧಿ ಶಾಪ್‌ನ ಮದ್ಯ ಸೇವಿಸಿ 9 ಮಂದಿ ಸಾವು!

Published : Feb 21, 2022, 09:20 PM ISTUpdated : Feb 21, 2022, 09:24 PM IST
Poisonous liquor UP ಚುನಾವಣೆ ನಡುವೆ ಎಣ್ಣೆ ಅವಘಡ, SP ಅಭ್ಯರ್ಥಿ ಸಂಬಂಧಿ ಶಾಪ್‌ನ ಮದ್ಯ ಸೇವಿಸಿ 9 ಮಂದಿ ಸಾವು!

ಸಾರಾಂಶ

ಸಮಾಜವಾದಿ ಪಕ್ಷದ ಅಭ್ಯರ್ಥಿ ಸಂಬಂಧಿ ಶಾಪ್‌ನಲ್ಲಿ ವಿಷಪೂರಿತ ಮದ್ಯ ಉತ್ತರ ಪ್ರದೇಶ ಚುನಾವಣೆ ನಡುವೆ ಮದ್ಯ ಪೂರೈಕೆ ಮಾಡಿದ ಆರೋಪ ಹಲವರು ಅಸ್ವಸ್ಥ, 12 ಮಂದಿ ಸ್ಥಿತಿ ಚಿಂತಾಜನಕ  

ಅಜಮ್‌ಘಡ(ಫೆ.21): ಉತ್ತರ ಪ್ರದೇಶ ಚುನಾವಣೆ(Uttar pradesh Election 2022) ನಡುವೆ ಮದ್ಯ ಅವಾಂತರವೊಂದು ನಡೆದು ಹೋಗಿದೆ. ಸಮಾಜವಾದಿ ಪಾರ್ಟಿ(Samajwadi party) ಅಭ್ಯರ್ಥಿ ರಮಾಕಾಂತ್ ಯಾದವ್ ಸೋದರಳಿಯನ ವೈನ್ ಶಾಪ್‌(Wine Shop) ನೀಡಿದ ಮದ್ಯ ಸೇವಿಸಿ 9 ಮಂದಿ ಸಾವನ್ನಪ್ಪಿದ ಘಟನೆ ಅಜಮ್‌ಘಡದಲ್ಲಿ ನಡೆದಿದೆ. 12ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದರೆ, ಒಟ್ಟು 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆ(Hospital) ದಾಖಲಾಗಿದ್ದಾರೆ.

ಮೆಹುಲ್ ಪಟ್ಟಣದಲ್ಲಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ, ಮಾಜಿ ಸಂಸದ ರಮಾಕಾಂತ್ ಯಾದವ್ ಸೋದರಳಿಯ ವೈನ್ ಶಾಪ್ ನೀಡಿದ ಮದ್ಯ ಸೇವಿಸಿ ಈ ಅವಘಡ ಸಂಬಂಧಿಸಿದೆ.ಭಾನುವಾರ ರಾತ್ರಿ ಈ ಅವಘಡ ಸಂಭವಿಸಿದೆ. ರಾಜ್ಯದಿಂದ ಮಾನ್ಯತೆ ಪಡೆದ ಲಿಕ್ಕರ್ ಶಾಪ್ ಇದಾಗಿದ್ದು, ಇದೇ ಶಾಪ್‌ನಲ್ಲಿ ನೀಡಿದ ವಿಷಪೂರಿತ ಮದ್ಯದಿಂದ ಈ ಅವಘಡ ಸಂಭವಿಸಿದೆ. 

Deep Sidhu Death :  ಮೃತ ದೀಪ್‌ ಸಿಧು ಕಾರಲ್ಲಿ ಮದ್ಯದ ಬಾಟಲಿ, ನಶೆಯೇ ಕುತ್ತು ತಂತಾ?

ಮದ್ಯ ಸೇವಿಸಿದ ಗ್ರಾಮಸ್ಥರು ಅಸ್ವಸ್ಛರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಫಲಕಾರಿಯಾಗಿಲ್ಲ. ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ತಿಳಿದು ಮೆಹುಲ್ ಪಟ್ಟಣ ಹಾಗೂ ಆಸ್ಪತ್ರೆಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಸ್ವಸ್ಥರಾಗಿದ್ದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮದ್ಯ ಅಂಗಡಿಯ ಮಾರಾಟಗಾನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಮೆಹುಲ್ ಪಟ್ಟಣ, ಗ್ರಾಮದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇತರ ಯಾರಾದರೂ ವಿಷಪೂರಿತ ಮದ್ಯ ಸೇವಿಸಿ ಅಸ್ವಸ್ಥರಾಗಿದ್ದಾರೆ ಅನ್ನೋದನ್ನು ಖಚಿತಪಡಿಸಿಕೊಳ್ಳಲು ಪೊಲೀಸಲು ಮುಂದಾಗಿದ್ದಾರೆ. ಆರಂಭಿಕ ಹಂತದಲ್ಲಿ ವಿಷಕಾರಕ ಮದ್ಯ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಅನ್ನೋ ಮಾಹಿತಿ ಗ್ರಾಮಸ್ಥರಿಗೆ ಇರಲಿಲ್ಲ. ಹೀಗಾಗಿ ನಿನ್ನೆ ರಾತ್ರಿ ಮೃತರಾದ ನಾಲ್ವರನ್ನು ಇಂದು ಬೆಳಗ್ಗೆ ಅಂತ್ಯಕ್ರಿಯೆ ನಡಸಲಾಗಿದೆ. ಆದರೆ ವಿಷಕಾರ ಮದ್ಯದ ಮಾಹಿತಿ ತಿಳಿಯುತ್ತಿದ್ದಂತೆ ಸಾವನ್ನಪ್ಪಿದ ಉಳಿದ ಐವರ ಮೃತದೇಶಗಳನ್ನು ಪರೀಕ್ಷೆ ಒಳಪಡಿಸಲಾಗಿದೆ.

"

ವಿಷಪೂರಿತ ಮದ್ಯ ಸೇವನೆಯಿಂದ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದಾರೆ. ಹಲವು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇದರು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹಣ ಮಾಡಲು, ರಾಜಕೀಯ ಉದ್ದೇಶಗಳಿಗಾಗಿ ವಿಷಪೂರಿತ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಮಾಯಕ ಜನರು ಈ ಮದ್ಯ ಕುಡಿದು ಈ ಪರಿಸ್ಥಿತಿ ಎದುರಿಸಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

Murder In Bengaluru: 1500 ರೂ. ಗಾಗಿ ಕೊಲೆಯೇ ನಡೆದು ಹೋಯ್ತು!

ಲಿಕ್ಕರ್ ಶಾಪ್ ಸಮಾಜವಾದಿ ಪಾರ್ಟಿ ಅಭ್ಯರ್ಥಿ ರಮಾಕಾಂತ್ ಯಾದವ್ ಹತ್ತಿರದ ಸಂಬಂಧಿ ರಂಗೇಶ್ ಕುಮಾರ್ ಯಾದವ್ ಅವರಿಗೆ ಸೇರಿದ್ದಾಗಿದೆ. ರಮಾಕಾಂತ್ ಯಾದವ್ ಮಾಜಿ ಸಂಸದರಾಗಿದ್ದರೆ, ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಪೂಲ್‌ಪುರ್ ಪವಾಯಿ ಕ್ಷೇತ್ರದ ಸಮಾಜವಾದಿ ಅಭ್ಯರ್ಥಿಯಾಗಿದ್ದಾರೆ.

ಕಳೆದ ವರ್ಷ 30 ಮಂದಿ ಸಾವು
2019ರ ಮೇ ತಿಂಗಳಲ್ಲಿ ಇದೇ ರೀತಿ ವಿಷಕಾರಕ ಮದ್ಯ ಸೇವಿಸಿ 30 ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ಮಿತ್ತಪುರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಇದಾದ ಬಳಿಕ ಜಿಲ್ಲಾಧಿಕಾರಿಗಳು ಅಕ್ರಮ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು