
ನವದೆಹಲಿ (ಆ.19) ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಗಳು ನಿರಂತರವಾಗಿ ನಡೆಯುತ್ತಿದೆ. ಪ್ರಮುಖವಾಗಿ ಎಐ ಬಳಕೆಟಿಂದ ಹಲವು ಉದ್ಯೋಗ ನಷ್ಟವಾಗಿದೆ. ದಿಗ್ಗಜ ಹಾಗೂ ಮಲ್ಟಿ ನ್ಯಾಷನಲ್ ಕಂಪನಿಗಳು ಎಐ ಮೇಲೆ ಹೆಚ್ಚು ಬಂಡವಾಳ ಸುರಿಯುತ್ತಿದೆ. ಇದರ ಪರಿಣಾಮ ಮಾನವ ಸಂಪನ್ಮೂಲವನ್ನು ಕಡಿತಗೊಳಿಸುತ್ತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆಯುತ್ತಿದೆ. 10ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಕಡಿತ ನಡೆಸುತ್ತಿದೆ. ಹೀಗಾಗಿ ಹಲವರು ಜಾಬ್ ಕಳೆದುಕೊಳ್ಳಲಿದ್ದಾರೆ.
ಈಗಾಗಲೇ ಕಂಪನಿಗಳು ಎಐ ಅಳವಡಿಕೆ ಮಾಡುತ್ತಿದೆ. ಇದೀಗ ಬಹುತೇಕ ಕಂಪನಿಗಳು ಸೆಪ್ಟೆಂಬರ್ ತಿಂಗಳಿನಿಂದ ಸಕ್ರಿಯವಾಗಿ ಎಐ ಬಳಕೆ ಮಾಡಲಿದೆ. ಪ್ರಾಡಕ್ಟ್, ಕೋಡಿಂಗ್, ಮಾರ್ಕೆಟಿಂಗ್ ಹಾಗೂ ಬ್ಯೂಸಿನೆಸ್, ಗ್ರಾಹಕ ಸೇವೆ ವಿಭಾಗದಲ್ಲಿ ಸಕ್ರಿಯವಾಗಿ ಎಐ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಎಐ ಸಕ್ರಿಯವಾಗಿ ಬಳಕೆ ಮಾಡುತ್ತಿರವು ಈ ವಿಭಾಗದ ಕಂಪನಿಗಳಲ್ಲಿ ಉದ್ಯೋಗ ಕಡಿತ ನಡೆಯಲಿದೆ.
ಬ್ಯಾಕಿಂಗ್ ಹಾಗೂ ರಿಟೇಲ್: ಐಟಿ ಕ್ಷೇತ್ರಗ ಜೊತೆಗೆ ಬ್ಯಾಂಕಿಂಗ್ ಹಾಗೂ ರಿಟೇಲ್ ಕಂಪನಿಗಳಲ್ಲಿ ಲೇಫ್ ಆಪ್ ನಡೆಯುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿಟಿ ಗ್ರೂಪ್ , ವೀಸಾ, ನೈಕಿ ಸೇರಿದಂತೆ ಕೆಲ ಪ್ರಮುಖ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.
ಒರಾಕಲ್ ಈಗಾಗಲೇ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಿದೆ. ಇದೀಗ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಮಾಡುತ್ತಿದೆ. ಪಿನ್‌ಪರೆಸ್ಟ್ ರಂಪನಿ ಶೇಕಡಾ 15ರಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗ ಕಡಿತದ ತೀವ್ರತೆ ಹೆಚ್ಚಲಿದೆ. ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ ಅಮೆರಿಕದ ನ್ಯೂಜರ್ಸಿ, ಪ್ಲಾನೋ, ಟೆಕ್ಸಾಸ್ ಸೇರಿದಂತೆ ಕೆಲವೆಡೆ ಕಚೇರಿಗಳಲ್ಲಿ ಉದ್ಯೋಗ ಕಡಿತ ನಡೆಯಲಿದೆ ಎಂದು ವರದಿಯಾಗಿದೆ. ಇಬೇ, ಎಮರ್ಸನ್, ಗ್ರೆಶ್ಶಿಮರ್ ಸೇರಿದಂತೆ ಕೆಲ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಕಡಿತ ನಡೆಯಲಿದೆ ಎಂದು ವರದಿಯಾಗಿದೆ.
ಕಳೆದ ಕೆಲ ವರ್ಷಗಳಿಂದ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಭಾರತೀಯ ಟೆಕ್ ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ಉದ್ಯೋಗಿಗಳು ಮತ್ತೆ ಲೇಆಫ್ ಭೀತಿಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ