ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ವೆಂಕಟರಮಣಿ ನೇಮಕ

By Anusha KbFirst Published Sep 28, 2022, 10:06 PM IST
Highlights

ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ವೆಂಕಟರಮಣಿ ಅವರು ನೇಮಕಗೊಂಡಿದ್ದಾರೆ. ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ ಕೆ ಕೆ ವೇಣುಗೋಪಾಲ್ ಅವರ ಉತ್ತರಾಧಿಕಾರಿಯಾಗಿ ವೆಂಕಟರಮಣಿ ನೇಮಕಗೊಂಡಿದ್ದಾರೆ. ಕೆ ಕೆ ವೇಣುಗೋಪಾಲ್ ಅವರ ಅಧಿಕಾರವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. 

ನವದೆಹಲಿ: ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ವೆಂಕಟರಮಣಿ ಅವರು ನೇಮಕಗೊಂಡಿದ್ದಾರೆ. ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ ಕೆ ಕೆ ವೇಣುಗೋಪಾಲ್ ಅವರ ಉತ್ತರಾಧಿಕಾರಿಯಾಗಿ ವೆಂಕಟರಮಣಿ ನೇಮಕಗೊಂಡಿದ್ದಾರೆ. ಕೆ ಕೆ ವೇಣುಗೋಪಾಲ್ ಅವರ ಅಧಿಕಾರವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. 

ವೆಂಕಟರಮಣಿ (R Venkataramani) ಅವರು ಮುಂದಿನ ಮೂರು ವರ್ಷಗಳ ಕಾಲ ಭಾರತದ ಅಟಾರ್ನಿ ಜನರಲ್ (Attorney General for India) ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಕಾನೂನು ಹಾಗೂ ನ್ಯಾಯ ಇಲಾಖೆಯ ಸಚಿವ ಕಿರೆನ್ ರಿಜಿಜು (Kiren Rijiju) ಅವರ ಕಚೇರಿ ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳು, ಹಿರಿಯ ವಕೀಲರಾದ  ಶ್ರೀ. ಆರ್ ವೆಂಕಟರಮಣಿ ಅವರನ್ನು ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಿಸಲು ಬಯಸುತ್ತಾರೆ. ಆಕ್ಟೋಬರ್ ಒಂದರಿಂದ ಅವರು ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಿರೆನ್ ರಿಜಿಜು ಅವರ ಕಚೇರಿಯ ಟ್ವಿಟ್ ತಿಳಿಸಿದೆ. 

माननीय राष्ट्रपति, श्री आर. वेंकटरमणी, वरिष्ठ अधिवक्ता को दिनांक 1 अक्टूबर, 2022 से भारत के महान्यायवादी के पद पर नियुक्त करती हैं।

Honorable President is pleased to appoint Shri R. Venkataramani, Senior Advocate as Attorney General for India w.e.f. 1st October 2022. pic.twitter.com/MnChp8TRGv

— Office of Kiren Rijiju (@RijijuOffice)

ಪ್ರಸ್ತುತ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ (K K Venugopal) ಅವರ ಅಧಿಕಾರವಧಿ ಸೆಪ್ಟಂಬರ್ 30ಕ್ಕೆ ಅಂತ್ಯಗೊಳಲಿದೆ. 91 ವರ್ಷದ ಹಿರಿಯ ಮುತ್ಸದಿಯಾಗಿರುವ ವೇಣುಗೋಪಾಲ್ ಅವರ ಅಧಿಕಾರವನ್ನು ಮೂರು ಭಾರಿ ವಿಸ್ತರಣೆ ಮಾಡಲಾಗಿತ್ತು. 

ಮತ್ತೆ ಅಟಾರ್ನಿ ಜನರಲ್‌ ಆಗಲು Mukul Rohatgi ನಕಾರ

ಮ್ಮ ವಯೋಸಹಜ ಸ್ಥಿತಿಯ ಹಿನ್ನೆಲೆಯಲ್ಲಿ ತಮಗೆ ಈ ಹುದ್ದೆಯಲ್ಲಿ ಮುಂದುವರೆಯುವುದು ಕಷ್ಟವಾಗುವುದು, ಹೀಗಾಗಿ ತಮ್ಮ ಅಧಿಕಾರವಧಿಯನ್ನು ವಿಸ್ತರಿಸುವುದು ಬೇಡ  ಎಂದು ಕೆ.ಕೆ ವೇಣುಗೋಪಾಲ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಅಟಾರ್ನಿ ಜನರಲ್ ಹುದ್ದೆಯಲ್ಲಿರುವವರು  ಭಾರತ ಸರ್ಕಾರದ ಮೊದಲ ಕಾನೂನು ಅಧಿಕಾರಿಯಾಗಿದ್ದು, ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಹಕ್ಕನ್ನು ಹೊಂದಿರುತ್ತಾರೆ.

ಅಯೋಧ್ಯೆ ತೀರ್ಪು: 93ರ ಇಳಿ ವಯಸ್ಸಿನಲ್ಲೂ ಹಿಂದು ಪರ ವಾದಿಸಿದ್ದ ಪರಾಶರನ್

ಇವರಿಗೂ ಮೊದಲು 2014ರಿಂದ 2017ರವರೆಗೆ ಮುಕುಲ್ ರೋಹ್ಟಿಗಿ ಅವರು ಭಾರತದ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ವೇಣುಗೋಪಾಲ್ ನಿವೃತ್ತಿ ಹಿನ್ನೆಲೆಯಲ್ಲಿ ಮುಕುಲ್ ರೋಹ್ಟಿಗಿ ಅವರಿಗೆ ಕೇಂದ್ರ ಸರ್ಕಾರ ಮತ್ತೆ ಅಟಾರ್ನಿ ಜನರಲ್ ಆಗುವಂತೆ ಮನವಿ ಮಾಡಿತ್ತು. ಆದರೆ ಅವರು ಈ ಮನವಿಯನ್ನು ತಿರಸ್ಕರಿಸಿದ್ದರು. 

click me!