ತ್ರಿವರ್ಣ ಧ್ವಜ ಹಾರಿಸಿ ಭಾರತ್ ಮಾತಾ ಕೀ ಜೈ ಘೋಷಣೆ ಸೀಮಾ ಹೈದರ್!

By Ravi Janekal  |  First Published Aug 15, 2023, 12:47 PM IST

ಪ್ರೀತಿಯನ್ನರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಇಂದು ಹರ್‌ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡು ಪತಿ ಸಚಿನ್ ಅವರೊಂದಿಗೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿ ಹಿಂದುಸ್ತಾನ್ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ ವಿರೋಧಿ ಘೋಷಣೆಯನ್ನು ಕೂಗಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.


ಉತ್ತರ ಪ್ರದೇಶ (ಆ.15): ಪ್ರೀತಿಯನ್ನರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಇಂದು ಹರ್‌ ಘರ್ ತಿರಂಗಾ ಅಭಿಯಾ(Har ghar tiranga campaigning)ನದಲ್ಲಿ ಪಾಲ್ಗೊಂಡು ಪತಿ ಸಚಿನ್ ಅವರೊಂದಿಗೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿ ಹಿಂದುಸ್ತಾನ್ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ ವಿರೋಧಿ ಘೋಷಣೆಯನ್ನು ಕೂಗಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ತ್ರಿವರ್ಣ ರಂಗಿನ ಸೀರೆ ಧರಿಸಿದ್ದ ಹೈದರ್(Seema Haider) ಆಕೆಯ ವಕೀಲ ಎಪಿ ಸಿಂಗ್ ಸಮ್ಮುಖದಲ್ಲಿ ಪತಿ ಸಚಿನ್‌ರೊಂದಿಗೆ ಮನೆಯ ಛಾವಣಿ ಹತ್ತಿ ಧ್ವಜಾರೋಹಣ ಮಾಡಿ ಘೋಷಣೆ ಕೂಗಿದ್ದಾಳೆ. ಈ ವೇಳೆ ಮನೆಯ ಸುತ್ತಲು ನೆರೆದಿದ್ದ ಜನರು ಕೂಡ ಘೋಷಣೆ ಕೂಗಿ ಈ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ.

Tap to resize

Latest Videos

undefined

ಪಾಕ್​ನ 'ನಿಗೂಢ ಲೇಡಿ' ಸೀಮಾ ಹೈದರ್​ಗೆ ಬಾಲಿವುಡ್​ಗೆ ಆಫರ್​? ಆರು ಲಕ್ಷ ರೂ. ಸಂಬಳ !

ಸೀಮಾ ಹೈದರ್  ಪಾಕಿಸ್ತಾನದ ಐಎಸ್‌ಐ ಏಜೆಂಟ್ ಎಂಬ ಆರೋಪವೂ ಕೇಳಿಬಂದಿತ್ತು. ಭಾರತದಲ್ಲಿ ಬೇಹುಗಾರಿಕೆ ನಡೆಸಲು ಪ್ರೀತಿಯ ನೆಪದಲ್ಲಿ ಭಾರತಕ್ಕೆ ಬಂದಿದ್ದಾಳೆಂದು ವರದಿಗಳು ಬಂದಿದ್ದವು. ಇಂದು ರಾಷ್ಟ್ರಧ್ವಜ ಹಾರಿಸಿ ಪಾಕಿಸ್ತಾನ ವಿರೋಧಿ ಹೇಳಿಕೆ ನೀಡಿರುವುದು ಹುಬ್ಬೇರಿಸುವಂತೆ ಮಾಡಿದೆ. ನಿನ್ನೆ ಭಾನುವಾರ ಕೂಡ ಪತಿಯೊಂದಿಗೆ ಸೀಮಾ ಹೈದರ್ ಭಾರತ್ ಮಾತಾ ಕೀ ಜೈ ಹೇಳಿದ್ದಳು ಇಂದು ಹರ್‌ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ.

ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

 

click me!