ಇನಿಯನ ಅರಸಿ ಪಾಕ್‌ನಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೆಣ್ಣು ಮಗು

Published : Mar 18, 2025, 03:08 PM ISTUpdated : Mar 18, 2025, 07:20 PM IST
ಇನಿಯನ ಅರಸಿ ಪಾಕ್‌ನಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೆಣ್ಣು ಮಗು

ಸಾರಾಂಶ

ಪಬ್ಜಿ ಪ್ರೇಮಿಗಳಾದ ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿಗಳಿಗೆ ಹೆಣ್ಣು ಮಗುವಾಗಿದೆ. ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಈಗ ಐದನೇ ಮಗುವಿಗೆ ತಾಯಿಯಾಗಿದ್ದಾರೆ.

ನೋಯ್ಡಾ: 2023 ರಲ್ಲಿ ಎಲ್ಲೆಡೆ ಸುದ್ದಿಯಾಗಿದ್ದ ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿಗಳು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಪ್ರೇಮ ಪಕ್ಷಿಗಳು ಇಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದು, ಸೀಮಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಸಚಿನ್ ಮೊದಲ ಬಾರಿ ಪೋಷಕರಾಗಿದ್ದಾರೆ. ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನ ಮೂಲದ ಸೀಮಾ 2023ರಲ್ಲಿ ದೇಶ ತೊರೆದು ಬಂದಿದ್ದರು. ಇವರ ಪ್ರೇಮ ಕತೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈಗ  ಸೀಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೀಮಾಗೆ ಇದು 5ನೇ ಮಗುವಾಗಿದ್ದು, ಸಚಿನ್‌ಗೆ ಮೊದಲ ಮಗುವಾಗಿದೆ. ನಾಲ್ಕು ಮಕ್ಕಳ ತಾಯಿಯಾಗಿದ್ದ ಸೀಮಾ ಹೈದರ್‌, ಸಚಿನ್ ಮೀನಾ ಮೇಲಿನ ಪ್ರೀತಿಗಾಗಿ ದೇಶ ಬಿಟ್ಟು ಓಡಿ ಬಂದಿದ್ದರು. 

ಪಬ್ಟಿ ಆಡುವ ವೇಳೆ ಆನ್‌ಲೈನ್‌ನಲ್ಲಿ ಶುರುವಾದ ಪ್ರೀತಿ

ಸಚಿನ್ ಸೀಮಾ ಇಬ್ಬರು ಪಬ್ಜಿ ಗೇಮ್ ಕ್ರೇಜ್ ಹೊಂದಿದ್ದು, ಪಬ್ಜಿ ಆಡುವ ವೇಳೆ ಇವರಿಬ್ಬರಿಗೂ ಆನ್‌ಲೈನ್‌ನಲ್ಲೇ ಪ್ರೀತಿಯಾಗಿತ್ತು. ಇದಾದ ನಂತರ ಸಚಿನ್ ಮೀನಾ ಜೊತೆ ಸೇರುವ ತವಕದಿಂದ ಸೀಮಾ ಹೈದರ್ 2023ರಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಳು. ವರದಿಯ ಪ್ರಕಾರ ನೇಪಾಳ ಮೂಲಕ ಭಾರತ ಪ್ರವೇಶಿಸಿದ್ದ ಈ ಪುಟ್ಟ ಕುಟುಂಬ ಬಳಿಕ ಸಿಕ್ಕಬಿದ್ದಿತ್ತು. ಈ ವೇಳೆ ಸೀಮಾ ಹೈದರ್ ಪ್ರಿಯಕರನಿಗಾಗಿ ದೇಶ ತೊರೆದು ಮಕ್ಕಳೊಂದಿಗೆ ಬಂದಿದ್ದಾಗಿ ಹೇಳಿಕೊಂಡಿದ್ದಳು.  ಹೀಗೆ ಬಂಧನಕ್ಕೊಳಗಾದ ಇವರಿಗೆ ಜಾಮೀನು ಸಿಕ್ಕ ನಂತರ ಪರಿಸ್ಥಿತಿ ಬದಲಾಗಿತ್ತು. ಇಬ್ಬರೂ ತಾವು ಈಗಾಗಲೇ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಪವಿತ್ರ ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು. 

ಸೀಮಾ ಹೈದರ್ ಮಹತ್ವದ ನಿರ್ಧಾರ, ಕುಂಭಮೇಳಕ್ಕೆ 51 ಲೀಟರ್ ಹಾಲು ಕೊಡೋದಾಗಿ ಘೋಷಣೆ!

ಪ್ರಸ್ತುತ ದಂಪತಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಕ್ಕಳೊಂದಿಗೆ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಸುದ್ದಿಸಂಸ್ಥೆ ಪಿಟಿಐನ ವೀಡಿಯೋದಲ್ಲಿ ಸೀಮಾ ಹಾಗೂ ಸಚಿನ್  ವಕೀಲ ಎಪಿ ಸಿಂಗ್ ಹೇಳಿದಂತೆ, ಈ ದಂಪತಿ ಮಾರ್ಚ್ 18 ಅಂದರೆ ಇಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ ಗ್ರೇಟರ್‌ ನೋಯ್ಡಾದ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. 2024ರಲ್ಲಿಯೇ ಸೀಮಾ 7 ತಿಂಗಳ ಗರ್ಭಿಣಿ ಎಂದು ಸುದ್ದಿಯಾಗಿತ್ತು. ಹೀಗಾಗಿ ಇದು ಅನಿರಿಕ್ಷಿತ ಅಲ್ಲ ಎಂದು ಮಾಹಿತಿ ನೀಡಿದ್ದರು. ಆದರೆ ವಕೀಲ ಎಪಿ ಸಿಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. 

4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ ಸೀಮಾ ಮತ್ತೆ ಗರ್ಭಿಣಿ, ಸಂತೋಷ ಹಂಚಿಕೊಂಡ ಸಚಿನ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!