ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿ ನಮಿಸಿದ್ದಕ್ಕೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಾರೆ. ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಏನ್ ಹೇಳಿದ್ರು? ಇಲ್ಲಿದೆ ಓದಿ
ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿ ನಮಿಸಿದ್ದಕ್ಕೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಾರೆ. ಇದು ಸ್ಪೀಕರ್ ಪೀಠಕ್ಕೆ ಭೂಷಣವಲ್ಲ ಎಂದಿದ್ದಾರೆ. ಸೋಮವಾರ ಸದನದಲ್ಲಿ ಮಾತನಾಡಿದ ರಾಹುಲ್, ನೀವು ನನ್ನನ್ನು ಭೇಟಿಯಾಗಿ ಕೈಕುಲುಕಿದಾಗ ನಾನು ಗಮನಿಸಿದ್ದೇನೆ, ನೀವು ನೇರವಾಗಿ ನಿಂತಿದ್ದಿರಿ. ಆದರೆ ನೀವು ಪ್ರಧಾನಿಯನ್ನು ಭೇಟಿಯಾದಾಗ ತಲೆಬಾಗಿ ನಮಸ್ಕರಿಸಿದ್ದೀರಿ. ಇದು ಸ್ಪೀಕರ್ ಪೀಠದ ಗೌರವಕ್ಕೆ ತಕ್ಕುದಲ್ಲ ಎಂದರು. ಇದಕ್ಕೆ ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ಆಕ್ಷೇಪಕ್ಕೆ ಉತ್ತರಿಸಿದ ಸ್ಪೀಕರ್ ಓಂ ಬಿರ್ಲಾ, ನನ್ನ ಸಂಸ್ಕಾರವೂ ನನಗೆ ಹಿರಿಯರಿಗೆ ತಲೆಬಾಗಿ ನಮಸ್ಕರಿಸಿ ಗೌರವಿಸುವಂತೆ ಹೇಳುತ್ತದೆ. ಹಾಗೆಯೇ ನನಗಿಂತ ಕಿರಿಯರನ್ನು ಸಮಾನವಾಗಿ ಕಾಣುವಂತೆ ಹೇಳುತ್ತದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ನಾನು ನಿಮ್ಮ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಸದನದ ಸ್ಪೀಕರ್‌ಗಿಂತ ಯಾರು ದೊಡ್ಡವರಲ್ಲ ಎಂದು ನಾನು ನಂಬಿದ್ದೇನೆ. ನೀವು ಸದನದ ನಾಯಕ ಹಾಗೂ ಯಾರೊಬ್ಬರ ಮುಂದೆಯೂ ತಲೆಬಾಗಬೇಕಾದ ಅಗತ್ಯವಿಲ್ಲ ಎಂದರು.
ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿನಾ ಸೋಲಿಸುತ್ತೇವೆ: ರಾಹುಲ್ ಗಾಂಧಿ
ಜೂನ್ 26ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮಾಡಿದ ನಂತರ ಪ್ರಧಾನಿ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರೆಜಿಜು, ಅವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರು ಕುಳಿತಿದ್ದ ಚೇರ್ ಬಳಿ ಹೋಗಿ ಅವರನ್ನು ಸ್ವಾಗತಿಸಿ ಸ್ಪೀಕರ್ ಚೇರ್‌ನತ್ತ ಕರೆದೊಯ್ದಿದ್ದರು. ಈ ವೇಳೆಗೆ ಓಂ ಬಿರ್ಲಾ ನಡೆದುಕೊಂಡು ರೀತಿಯನ್ನು ರಾಹುಲ್ ಟೀಕಿಸಿದ್ದರು.
ದೇವರೊಂದಿಗೆ ಮೋದಿ ನೇರ ಸಂಪರ್ಕ: ರಾಹುಲ್ ವ್ಯಂಗ್ಯ
ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನನ್ನು ದೇವರೇ ಇಲ್ಲಿಗೆ ಕಳಿಸಿದ್ದಾನೆ ಎಂದು ಭಾಸ ಆಗುತ್ತಿದೆ ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.ಪರಮಾತ್ಮ ಮೋದಿ ಜಿ ಆತ್ಮದೊಂದಿಗೆ ನೇರವಾಗಿ ಮಾತನಾಡುತ್ತಾನೆ. ಮೋದಿಗೆ ದೇವರೊಂದಿಗೆ ನೇರ ಸಂಪರ್ಕವಿದೆ. ನಾವೆಲ್ಲ ಜೈವಿಕವಾಗಿ ಹುಟ್ಟಿದ್ದೇವೆ. ಆದರೆ ಮೋದಿ ಅದ್ವಿತೀಯ. ಹಲವಾರು ಸಂದೇಶಗಳು ಪ್ರಧಾನಿ ಮೋದಿಯವರಿಗೆ ದೇವರಿಂದ ರವಾನೆಯಾಗಿದೆ. ಮುಂಬೈ ವಿಮಾನ ನಿಲ್ದಾಣವನ್ನು ಅದಾನಿಗೆ ನೀಡುವಂತೆ ದೇವರು ಹೇಳುತ್ತಾನೆ. ಆಗ ಖಾಟಾ ಖಟ್, ಖಾಟಾ ಖಟ್, ಖಾಟಾ ಖಟ್ (ಬೇಗ ಬೇಗನೇ) ಆದೇಶವಾಗುತ್ತದೆ ಎಂದು ರಾಹುಲ್ ಕುಹಕವಾಡಿದರು.
ಕಾಂಗ್ರೆಸ್ಸಿಗರಿಗೆ ಸರಳ ಟೆಕ್ನಾಲಾಜಿಯ ಬಗ್ಗೆಯೂ ಗೊತ್ತಿಲ್ಲವೇ? ಸದನದ ಮೈಕ್ ಆಟೋಮೇಟಿಕ್: ರಾಜ್ಯಸಭಾಧ್ಯಕ್ಷ