
ದಂತೇವಾಡ (ಅ.05): ಛತ್ತೀಸ್‌ಗಢದಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ 28 ನಕ್ಸಲರು ಹತರಾಗಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಒಂದೇ ಪ್ರಕರಣದಲ್ಲಿ ನಕ್ಸಲರು ಸಾವನ್ನಪ್ಪಿದ ಅತಿದೊಡ್ಡ ಘಟನೆಯಾಗಿದೆ. ಇದರೊಂದಿಗೆ ಈ ವರ್ಷದಲ್ಲಿ ಛತ್ತೀಸ್‌ಗಢವೊಂದರಲ್ಲೇ ಬಲಿಯಾದ ನಕ್ಸಲರ ಸಂಖ್ಯೆ 185ಕ್ಕೆ ಏರಿದಂತಾಗಿದೆ. ಈ ಕಾರ್ಯಾಚರಣೆಗೆ ಭದ್ರತಾ ಪಡೆಗಳನ್ನು ಶ್ಲಾಘಿಸಿರುವ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್, 'ಇದು ನಕ್ಸಲ್ ಹಾವಳಿಯನ್ನು ಇನ್ನಿಲ್ಲವಾಗಿ ಸುವ ಡಬಲ್ ಎಂಜಿನ್ ಸರ್ಕಾರದ ಶಕ್ತಿಗೆ ಉದಾಹರಣೆ' ಎಂದಿದ್ದಾರೆ.
ಏನಾಯ್ತು?: ನಾರಾಯಣಪುರ- ದಂತೇವಾಡ ಅಂತ ಜಿಲ್ಲಾ ಗಡಿಯಲ್ಲಿರುವ ಅಬುಜಮದ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ಮುಖಾಮುಖಿಯಾಗಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಕೆಲ ಗಂಟೆಗಳ ಬಳಿಕ ನಕಲರ ಕಡೆಯಿಂದ ಗುಂಡಿನ ದಾಳಿ ನಿಂತಿದೆ. ಈ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ವೇಳೆ 28 ನಕ್ಸಲರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಿಂದ ಎಕೆ-47 ಬಂದೂಕು, ಎಸ್‌ಎಲ್‌ಆರ್ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ಯಾರಂಟಿ ಜಾರಿ ಬಳಿಕ ದಿವಾಳಿ: ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್‌ಗೆ ತೆರಿಗೆ!
ಯಶಸ್ಸು ಸಿಕ್ಕಿದ್ದೇಗೆ?: ನಕ್ಸಲರು ಹೆಚ್ಚಿರುವ ಬಸ್ತರ್‌ಸೇರಿದಂತೆ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ತಮ್ಮ ಕ್ಯಾಂಪ್‌ಗಳ ಪ್ರಮಾಣವನ್ನು ಈ ವರ್ಷ ಹೆಚ್ಚಿಸಿವೆ. ಹೀಗಾಗಿ ನಕಲರ ಓಡಾಟ, ಜನ ರೊಂದಿಗಿನ ನಂಟು ಕಡಿತವಾಗಿದೆ. ಜೊತೆಗೆ ಕಾಡಿನೊಳಗೆ ಮುಂಚೂಣಿ ಕ್ಯಾಂಪ್ ನಿರ್ಮಾಣದಿಂದ ಕಾರ್ಯಾಚರಣೆ ಸುಲಭವಾಗಿದೆ. ಹೀಗಾಗಿ ಈ ವರ್ಷವೊಂದರಲ್ಲೇ 185 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ