ಮಹಾರಾಷ್ಟ್ರ ವಿಧಾನಸೌಧದ 3ನೇ ಮಹಡಿಯಿಂದ ಜಿಗಿದು ಉಪಸ್ಪೀಕರ್, ಸಂಸದನಿಂದ ಹೈಡ್ರಾಮಾ!

By Kannadaprabha News  |  First Published Oct 5, 2024, 5:35 AM IST

ಧನಗರ್ (ಕುರುಬ) ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ವಿರೋಧಿಸಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸೀಕರ್‌ನರಹರಿ ಜಿರ್ವಾಲ್, ಬಿಜೆಪಿ ಸಂಸದ ಹೇಮಂತ್ ಸವರ ಸೇರಿದಂತೆ ಹಲವು ಆದಿವಾಸಿ ಸಮುದಾಯದ ನಾಯಕರು ವಿಧಾನಸೌಧ ಕಟ್ಟಡ (ಮಂತ್ರಾಲಯ)ದ 3ನೇ ಮಹಡಿಯಿಂದ ಕೆಳಗೆ ಹಾರಿದ ನಾಟಕೀಯ ಘಟನೆ ಶುಕ್ರವಾರ ನಡೆದಿದೆ. 


ಮುಂಬೈ (ಅ.05): ಧನಗರ್ (ಕುರುಬ) ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ವಿರೋಧಿಸಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸೀಕರ್‌ನರಹರಿ ಜಿರ್ವಾಲ್, ಬಿಜೆಪಿ ಸಂಸದ ಹೇಮಂತ್ ಸವರ ಸೇರಿದಂತೆ ಹಲವು ಆದಿವಾಸಿ ಸಮುದಾಯದ ನಾಯಕರು ವಿಧಾನಸೌಧ ಕಟ್ಟಡ (ಮಂತ್ರಾಲಯ)ದ 3ನೇ ಮಹಡಿಯಿಂದ ಕೆಳಗೆ ಹಾರಿದ ನಾಟಕೀಯ ಘಟನೆ ಶುಕ್ರವಾರ ನಡೆದಿದೆ. 

ಆದರೆ ಸುರಕ್ಷತಾ ಕ್ರಮವಾಗಿ ಕೆಳಗೆ ಬಲೆ ಹಾಕಿದ್ದ ಕಾರಣ ಅವರು ಅದರಲ್ಲಿ ಸಿಕ್ಕಿಬಿದ್ದು ಪಾರಾಗಿದ್ದಾರೆ. 1996ರ ಪಂಚಾಯತ್ ಕಾಯ್ದೆ ಅನ್ವಯ ಸರ್ಕಾರಿ ಹುದ್ದೆಗಳಿಗೆ ಆದಿವಾಸಿಗಳ ನೇಮಕ ಮಾಡಬೇಕು, ಧನಗರ್ ಸಮುದಾಯವನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸಬಾರದು ಎಂದು ಒತ್ತಾಯಿಸುತ್ತಿರುವ ಎನ್‌ಸಿಪಿ (ಶಿಂಧೆ ಬಣ) ನಾಯಕ, ವಿಧಾನಸಭೆಯ ಉಪಸ್ಪೀಕರ್‌ ನರಹರಿ ಜಿರ್ವಾಲ್ ಕೆಳಗೆ ಹಾರಿದ್ದಾರೆ.

Latest Videos

undefined

ಅವರ ಜತೆಗೆ, ಶಾಸಕ ಹಿರಾಮನ್ ಖೋಸ್ಕರ್, ಬಿಜೆಪಿ ಸಂಸದ ಹೇಮಂತ್ ಸವರ, ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಕಿರಣ್ ಲಹಾಮಟೆ, ಬಹುಜನ್ ವಿಕಾಸ್ ಅಘಾಡಿ ಪಕ್ಷದ ರಾಜೇಶ್ ಪಾಟೀಲ್, ಕೆಳಗೆ ಬಲೆ ಹಾಕಿದ್ದರ ಅರಿವಿದ್ದೇ ಸರ್ಕಾರದ ಗಮನ ಸೆಳೆದು, ಅದರ ಒತ್ತಡ ಹೇರುವ ಸಲುವಾಗಿ ಸಚಿವಾಲಯದ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. 6 ಮಹಡಿಯ ಕಟ್ಟಡದ 2ನೇ ಮಹಡಿ ಬಳಿ ಬಲೆ ಹಾಕಿದ್ದು, ಆದಿವಾಸಿ ನಾಯಕರು ಮೂರನೇ ಮಹಡಿಯಿಂದ ಕೆಳಗೆ ಹಾರಿ ಆತಂಕ ಸೃಷ್ಟಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ: ಸಾ.ರಾ.ಮಹೇಶ್

ಕೂಡಲೇ ಪೊಲೀಸರು ಎಲ್ಲರನ್ನೂ ಬಲೆಯಿಂದ ರಕ್ಷಿಸಿ ಕರೆತಂದಿದ್ದಾರೆ. ಘಟನೆಯಲ್ಲಿಯಾರಿಗೂ ಗಾಯಗಳಾಗಿಲ್ಲ. ಬಳಿಕ ಪ್ರತಿಭಟನಾಕಾರರು ಸಚಿವಾಲಯದ ಮುಂಬಾಗ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ 'ಕೋಟಾ ಸಮಸ್ಯೆಯ ಕುರಿತು ಚರ್ಚೆ ನಡೆಸಲು ಸಿಎಂ ಏಕನಾಥ ಶಿಂಧೆ ನಮ್ಮನ್ನು ಭೇಟಿಯಾಗಬೇಕು' ಎಂದು ಆಗ್ರಹಿಸಿದ್ದಾರೆ. ಸಚಿವಾಲಯದಲ್ಲಿ ಹಲವು ಆತ್ಮಹತ್ಯೆಯ ಪ್ರಯತ್ನಗಳು ನಡೆದ ಕಾರಣ 2018ರಲ್ಲಿ ಸುರಕ್ಷತೆಗಾಗಿ ನೆಟ್ ಅಳವಡಿಸಲಾಗಿತ್ತು.

click me!