‘ಕೋವ್ಯಾಕ್ಸಿನ್‌’ ನೇಸಲ್‌ ಲಸಿಕೆ ಪ್ರಯೋಗಕ್ಕೆ ಸರ್ಕಾರ ಅಸ್ತು!

Published : Jan 20, 2021, 08:39 AM ISTUpdated : Jan 20, 2021, 08:46 AM IST
‘ಕೋವ್ಯಾಕ್ಸಿನ್‌’ ನೇಸಲ್‌ ಲಸಿಕೆ ಪ್ರಯೋಗಕ್ಕೆ ಸರ್ಕಾರ ಅಸ್ತು!

ಸಾರಾಂಶ

ಈಗಾಗಲೇ ಕೋವಿಡ್‌ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್| ಮತ್ತೊಂದು ಮಹತ್ವದ ಪ್ರಗತಿ 

ನವದೆಹಲಿ(ಜ.20): ಈಗಾಗಲೇ ಕೋವಿಡ್‌ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌, ಈಗ ಮತ್ತೊಂದು ಮಹತ್ವದ ಪ್ರಗತಿ ಕಂಡಿದೆ.

ಕಂಪನಿಯ ‘ಕೋವ್ಯಾಕ್ಸಿನ್‌’ ನೇಸಲ್‌ ಲಸಿಕೆಯ ಪ್ರಯೋಗಕ್ಕೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಅನುಮೋದನೆ ನೀಡಿದೆ. ಮೂಗಿನಲ್ಲಿ 2 ಹನಿ ಹಾಕುವ ಸಿಂಗಲ್‌ ಡೋಸ್‌ ಲಸಿಕೆ ಇದಾಗಿದೆ. ಇದರ 1 ಹಾಗೂ 2ನೇ ಹಂತದ ಪ್ರಯೋಗ ಆರಂಭಕ್ಕೆ ಹಸಿರು ನಿಶಾನೆ ದೊರಕಿದೆ. ಶೀಘ್ರದಲ್ಲೇ ಪ್ರಯೋಗ ಆರಂಭವಾಗುವ ನಿರೀಕ್ಷೆಯಿದೆ.

‘ಚುಚ್ಚುಮದ್ದಿನ ಲಸಿಕೆಗೆ ಸಿರಿಂಜ್‌, ಸೂಜಿ ಬೇಕು. ಹೀಗಾಗಿ ಇದರ ವೆಚ್ಚ ಹೆಚ್ಚು. ಇವನ್ನು ಎಸೆದಾಗ ಮಾಲಿನ್ಯವೂ ಆಗುತ್ತದೆ. ಇದು 2 ಡೋಸ್‌ ಲಸಿಕೆ. ಆದರೆ ಮೂಗಿನಲ್ಲಿ ಪ್ರಯೋಗಿಸುವ ನೇಸಲ್‌ ಲಸಿಕೆಯಿಂದ ಮಾಲಿನ್ಯ ಇಲ್ಲ. ವೆಚ್ಚವೂ ಕಮ್ಮಿ. ಅಲ್ಲದೆ, ಒಂದು ಬಾರಿ ಇದನ್ನು ನೀಡಿದರೆ ಸಾಕು’ ಎಂದು ಇತ್ತೀಚೆಗೆ ಭಾರತ್‌ ಬಯೋಟೆಕ್‌ ಮುಖ್ಯಸ್ಥ ಡಾ| ಕೃಷ್ಣ ಎಲ್ಲಾ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

USA Vs China: ಪ್ರಾಬಲ್ಯಕ್ಕಾಗಿ ಗುದ್ದಾಡುವ ಬದಲು ವಿಶ್ವವನ್ನೇ 2 ತುಂಡಾಗಿಸಿ ಹಂಚಿಕೊಂಡು ಆಳುವ ಇಂಗಿತ ಟ್ರಂಪ್‌, ಕ್ಸಿಗೆ!
India News Live: IPL 2026 - ನಿನ್ನೆ ನಡೆದ ಸಿಎಸ್‌ಕೆ-ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?