
ಬೆಂಗಳೂರು (ನ.9): ಇತಿಹಾಸ ಪ್ರಸಿದ್ಧ ಅಯೋಧ್ಯೆಯಲ್ಲಿ ಆಕರ್ಷಕ ಬಾಲರಾಮನ ಮೂರ್ತಿ ಕೆತ್ತುವ ಮೂಲಕ ದೇಶದ ಮನೆಮಾತಾಗಿದ್ದ ಮೈಸೂರಿನ ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್ ಮತ್ತೊಂದು ದೊಡ್ಡ ಆಫರ್ ಪಡೆದುಕೊಂಡಿದ್ದಾರೆ. ಬಾಲರಾಮನ ಮೂರ್ತಿ ಕೆತ್ತಿ ವಿಶ್ವಪ್ರಸಿದ್ಧರಾದ ಅರುಣ್ ಯೋಗಿರಾಜ್ ಈಗ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಲ್ಲಿನ ಮೂರ್ತಿಯನ್ನು ಕೆತ್ತುವ ಆಫರ್ ಪಡೆದುಕೊಂಡಿದ್ದಾರೆ. ಬಗ್ಗೆ ಸ್ವತಃ ಅವರೇ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಶಿವಾಜಿ ಮಹಾರಾಜರ ಅದ್ಭುತ ದೇವಸ್ಥಾನ ನಿರ್ಮಾಣವಾಗುತ್ತಿದೆ. ಇದರಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ಶಿವಾಜಿ ಮಹಾರಾಜನ ಕಲ್ಲಿನ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಲಿದ್ದಾರೆ.
'ಮಹಾರಾಷ್ಟ್ರದ ಥಾಣೆಯಲ್ಲಿ ಸುಂದರವಾದ ದೇವಾಲಯಕ್ಕಾಗಿ ಶಿವಾಜಿ ಮಹಾರಾಜರ ಶಿಲಾವಿಗ್ರಹವನ್ನು ಕೆತ್ತಿಸುವ ಅವಕಾಶ ಸಿಕ್ಕಿದೆ' ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ಶಿವಾಜಿ ಮಹಾರಾಜರ ತಾವು ಕೆತ್ತಿದ ಮೂರ್ತಿಯ ಜೊತೆಗಿನ ಫೋಟೋವೊಂದನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ಥಾಣೆಯ ದೇವಾಲಯದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನ ವಾಡಾ ರಸ್ತೆಯಲ್ಲಿರುವ ನಯನ ಮನೋಹರವಾದ ಮರಡೆ ಪದ ಎಂಬಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಂದಿರ ನಿರ್ಮಾಣವಾಗುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನವನ್ನು ಶಿವಕ್ರಾಂತಿ ಫೌಂಡೇಶನ್ ನಿರ್ಮಾಣ ಮಾಡುತ್ತಿದೆ.. ನಂತರ 2018 ರಲ್ಲಿ, ಈ ದೇವಾಲಯದ ಭೂಮಿಪೂಜೆಯ ನಂತರ ಈ ಕೆಲಸವನ್ನು ಪ್ರಾರಂಭಿಸಲಾಯಿತು.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿತ್ತು. ಈ ದೇವಾಲಯದ ರಚನೆಯು ಕೋಟೆಯನ್ನು ಹೋಲುತ್ತದೆ, ಇದರಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಮತ್ತು ಕೋಟೆಯೊಳಗೆ 40 ವಿಭಾಗಗಳಿವೆ.
PM Internship Scheme 2024: ಪ್ರತಿ ತಿಂಗಳು 5 ಸಾವಿರ ಸಿಗುವ ಪಿಎಂ ಇಂಟರ್ನ್‌ಶಿಪ್, ಕೂಡಲೇ ನೋಂದಣಿ ಮಾಡಿಕೊಳ್ಳಿ..
ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಐತಿಹಾಸಿಕ ಶಿಲ್ಪಕಲೆ ಮೂಲಕ ಸಾಕಾರಗೊಳಿಸಲಾಗುತ್ತದೆ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಗೆ ಮಾತ್ರ ಸೀಮಿತವಾಗದೆ ಬೇರೆಯದೇನಾದರೂ ಮಾಡಬೇಕೆಂದು ಸಂಘಟನೆಯ ಮನಸ್ಸು ಮಾಡಿ ನಂತರ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮಂದಿರ ನಿರ್ಮಿಸಲು ನಿರ್ಧರಿಸಿದೆವು. ಇದಕ್ಕಾಗಿ ಶಿವಪ್ರತಿಷ್ಠಾನದ ಮೂಲಕ ಜಮೀನು ಖರೀದಿಸಲಾಗಿದ್ದು, ಸ್ಥಳೀಯರಿಂದಲೂ ಸಾಕಷ್ಟು ನೆರವು ನೀಡಲಾಗಿದೆ.
400 ಚಕ್ರಗಳ ಭಾರತದ ಅತೀ ಉದ್ದದ ಟ್ರಕ್, ಪ್ರಯಾಣ ಆರಂಭಿಸಿ ವರ್ಷವಾದರೂ ಈವರೆಗೂ ಗಮ್ಯ ತಲುಪಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ