ನಮಸ್ತೆ ಮೋದಿಜೀ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ; ಚಿಣ್ಣರ ಮಾತಿಗೆ ಮನಸೋತ ಪ್ರಧಾನಿ!

Published : Jul 29, 2023, 04:34 PM IST
ನಮಸ್ತೆ ಮೋದಿಜೀ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ; ಚಿಣ್ಣರ ಮಾತಿಗೆ ಮನಸೋತ ಪ್ರಧಾನಿ!

ಸಾರಾಂಶ

ನಮಸ್ತೇ ಮೋದಿಜಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಬಿಗಿದಪ್ಪಿ ಹಿಡಿದ ಪುಟಾಣಿಗಳು ಹೇಳಿದ್ದಾರೆ. ಚಿಣ್ಣರನ್ನು ಭೇಟಿಯಾಗಲು ಬಂದ ಮೋದಿಗೆ, ಮಕ್ಕಳ ಎನರ್ಜಿ ನೋಡಿ ಸಂತಸ ಇಮ್ಮಡಿಗೊಂಡಿದೆ. ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಜು.29) ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡುತ್ತಾರೆ. ಯಾವುದೇ ಪ್ರವಾಸದಲ್ಲಿ ಮಕ್ಕಳನ್ನು ನೋಡಿದರೆ ಸಾಕು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಂದು ದೆಹಲಿಯಲ್ಲಿ ಅಖಿಲ ಭಾರತ ಶಿಕ್ಷಾ ಸಮಾಗಮ್ ಉದ್ಘಾಟಿಸಿದ ಬಳಿಕ ಮೋದಿ, ಶಾಲೆಗೆ ತೆರಳಿ ಮಕ್ಕಳನ್ನು ಭೇಟಿಯಾಗಿದ್ದಾರೆ.  ಪುಟಾಣಿ ಮಕ್ಕಳ ಶಾಲಾ ಕೊಠಡಿಗೆ ಮೋದಿ ಆಗಮಿಸುತ್ತಿದ್ದಂತೆ ಮಕ್ಕಳು, ನೇರವಾಗಿ ಮೋದಿ ಬಳಿ ಓಡಿ ಹೋಗಿದ್ದಾರೆ. ನಮಸ್ತೆ ಮೋದಿಜಿ ಎಂದು ಸ್ವಾಗತ ಕೋರಿದ್ದಾರೆ. ಇದೇ ವೇಳೆ ಮಕ್ಕಳು ಮೋದಿಯನ್ನು ಅಪ್ಪಿಕೊಂಡು ನಮಸ್ತೆ ಹೇಳಿದ್ದಾರೆ.ಇಷ್ಟೇ ಅಲ್ಲ ಮೋದಿ ಜೊತೆಗಿನ ಮಾತುಕತೆಯೂ ಭಾರಿ ವೈರಲ್ ಆಗಿದೆ.

ಮೋದಿ ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು, ನಮಸ್ತೆ ಮೋದಿಜಿ ಎಂದಿದ್ದಾರೆ. ಎಲ್ಲಾ ಮಕ್ಕಳು ಮೋದಿ ಬಳಿ ಹೋಗಿ ಅಪ್ಪಿಕೊಂಡಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ಪ್ರಧಾನಿ, ನಿಮಗೆ ಮೋದಿ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿ ಮಕ್ಕಳು ಥಟ್ಟನೆ ಉತ್ತರ ಹೇಳಿದ್ದಾರೆ. ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ, ನಾನೂ ನೋಡಿದ್ದೇನೆ ಎಂದು ಪುಟಾಣಿಗಳು ಉತ್ತರಿಸಿದ್ದಾರೆ. 

ಭಾರತ ಸೆಮಿಕಂಡಕ್ಟರ್‌ನ ‘ಕಂಡಕ್ಟರ್‌’; ಚಿಪ್ ಉತ್ಪಾದನಾ ಘಟಕ ಸ್ಥಾಪಿಸಿದರೆ ಶೇ.50 ಸಹಾಯಧನ: ಮೋದಿ ಘೋಷಣೆ

ಮರು ಪ್ರಶ್ನಿಸಿದ ಪ್ರಧಾನಿ, ಟಿವಿಯಲ್ಲಿ ನಾನು ಏನು ಮಾಡುತ್ತಿದ್ದೆ? ಏನು ನೋಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಫೋಟೋ , ವಿಡಿಯೋವನ್ನು ಟೀವಿಯಲ್ಲಿ ನೋಡಿದ್ದೇನೆ ಎಂದು ಮಕ್ಕಳು ಉತ್ತರಿಸಿದ್ದಾರೆ. ಇದೇ ವೇಳೆ ನೀವು ಏನು ಆಟವಾಡುತ್ತಿದ್ದೀರಿ. ನನಗೆ ಸ್ವಲ್ಪ ಹೇಳಿಕೊಡಿ ಎಂದು ಮಕ್ಕಳ ಜೊತೆ ಪ್ರಧಾನಿ ಮೋದಿ ಕೂಡ ಮಗುವಾಗಿದ್ದಾರೆ.

 

 

ಇಷ್ಟಕ್ಕೆ ಪುಟಾಣಿಗಳ ಪ್ರಶ್ನೆ ಹಾಗೂ ಕುತೂಹಲ ಕಡಿಮೆಯಾಗಿಲ್ಲ. ಮಕ್ಕಳ ಬಳಿ ಬಂದ ಮೋದಿ, ಯಾವ ಕಲರ್ ಪೈಟಿಂಗ್ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇತ್ತ ಮಕ್ಕಳು ಜೋಶ್ ತುಂಬಿದ ಮಾತಿನಲ್ಲಿ , ಮೋದಿಜೀ, ನಾವು ಪೈಟಿಂಗ್ ಮಾಡುತ್ತಿದ್ದೇವೆ. ಇದು ರೆಡ್ ಕಲರ್ ಎಂದಿದ್ದಾರೆ. ಇನ್ನು ಮತ್ತೊಬ್ಬ ಪುಟಾಣಿ ಮೋದಿಜಿ ನೀವು ನಮ್ಮ ಜೊತೆ ಫೋಟೋ ಕ್ಲಿಕ್ಕಿಸುತ್ತೀರಾ ಎಂದು ಪುಟಾಣಿಗಳು ಕೇಳಿದ್ದಾರೆ. ಅರೇ ಫೋಟ, ಸರಿ ಎಂದು ಮಕ್ಕಳೊಂದಿಗೆ ಮೋದಿ ಫೋಟೋಗೆ ಫೋಸ್ ನೀಡಿದ್ದಾರೆ.

 

ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಆಗುತ್ತೆ, ಇದು ನನ್ನ ಗ್ಯಾರಂಟಿ: ಪ್ರಧಾನಿ ಮೋದಿ

ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವರ್ಷಾಚರಣೆ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯಲ್ಲಿ ಅಖಿಲ ಭಾರತ ಶಿಕ್ಷಾ ಸಮಗಮ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಇದೇ ವೇಳೆ ಮೋದಿ, ಪ್ರಧಾನಿ ಶ್ರೀ ಯೋಜನೆಯಡಿ 6207 ಶಾಲೆಗಳಿಗೆ 602 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದೇ 12 ಭಾಷೆಗಳಲ್ಲಿರುವ ಶಿಕ್ಷಣ ಹಾಗೂ ಪ್ರತಿಭೆ ಕರಿಕುಲಮ್ ಬಿಡುಗಡೆ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್