
ಯಾವತ್ಮಲ್(ಮುಂಬೈ) ( ಆ. 12) ಹೆಲಿಕಾಪ್ಟರ್ ಮಾದರಿ ಮಾಡಿ ಅದಕ್ಕೆ ಅಳವಡಿಸಿದ್ದ ಬ್ಲೇಡ್ ಒಂದು ಸಂಶೋಧಕನ ಕುತ್ತಿಗೆಯನ್ನೇ ಕತ್ತರಿಸಿದೆ. ಸ್ಥಳದಲ್ಲಿಯೇ ಪ್ರಾಣ ಹೋಗಿದ್ದು ಸ್ನೇಹಿತರು ಓಡಿ ಹೋಗಿ ನೋಡಿದರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಡಿಯೋ ವೈರಲ್ ಆಗುತ್ತಿದೆ.
ಜಿಲ್ಲೆಯ ಮಹಾಗಾಂವ್ ತಹಸಿಲ್‌ನ ಫುಲ್ಸವಾಂಗಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಸಂಶೋಧನೆಯಲ್ಲಿ ತೊಡಗಿದ್ದ ಶೇಖ್ ಇಸ್ಲಾಂ ಶೇಖ್ ಪ್ರಾಣ ಕಳೆದುಕೊಂಡಿದ್ದಾರೆ. ಎಂಟನೇ ತರಗತಿಗೆ ಶಾಲೆ ಬಿಟ್ಟ ಶೇಖ್ ತನ್ನ ಅಣ್ಣನ ಗ್ಯಾಸ್ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಕಬ್ಬಿಣದ ಉಪಕರಣ ತಯಾರಿಕೆಯಲ್ಲಿ ಪಾರಮ್ಯ ಸಾಧಿಸಿಕೊಂಡಿದ್ದ ಶೇಖ್ ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳನ್ನು ಬಳಸಿಕೊಂಡು ಮಿನಿ ಹೆಲಿಕಾಪ್ಟರ್ ಮಾದರಿ ತಯಾರಿಸಿದ್ದ. ಹೊಸದು ಏನಾದರೂ ಒಂದನ್ನು ಮಾಡಿ ಹೆಸರು ಸಂಪಾದನೆ ಮಾಡಬೇಕು ಎಂದು ಹಂಬಲಿಸಿದ್ದ.
ಈ ಬಾಲಕಿ ಕಂಡುಹಿಡಿದ ಮಾಸ್ಕ್ ಧರಿಸಿದರೆ ಕೊರೋನಾ ಪ್ರವೇಶ ಸಾಧ್ಯವೇ ಇಲ್ಲ!
ತ್ರೀ ಈಡಿಯಟ್ಸ್ ರಾಂಚೋ ಪ್ರೇರಣೆ; ಬಾಲಿವುಡ್ ಸಿನಿಮಾ ತ್ರೀ ಈಡಿಯಟ್ಸ್ ರಾಂಚೋ ಪಾತ್ರದಿಂದ ಪ್ರೇರಣೆ ಹೊಂದಿದ್ದ ಹುಡುಗ ನ ಹೆಲಿಕಾಪ್ಟರ್ ತಯಾರು ಮಾಡಬೇಕು ಎಂದು ಬಯಸಿದ್ದ. ಯೂಟ್ಯೂಬ್ ನಲ್ಲಿ ಮಾಹಿತಿ ಕಲೆ ಹಾಕಿ ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿಕೆ ಆರಂಭಿಸಿದ್ದ. ಮಾರುತಿ 800 ಬಳಸಿಕೊಂಡು ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳ ನೆರವಿನಿಂದ ಮಾದರಿ ಸಿದ್ಧಮಾಡಿದ್ದ.
ಈ ಬಾರಿಯ ಸ್ವಾತಂತ್ರ್ಯ ದಿನದಂದು ತನ್ನ ಹೆಲಿಕಾಪ್ಟರ್ ಪರಿಚಯಿಸಬೇಕು ಎಂಬ ಆಸೆ ಶೇಖ್ ದಾಗಿತ್ತು. ಮಂಗಳವಾರ ರಾತ್ರಿ ಟೆಸ್ಟ್ ಮಾಡಲು ಮುಂದಾಗಿ ಫೈಲಟ್ ಸೀಟ್ ನಲ್ಲಿ ಕುಳಿತುಕೊಂಡು ಎಂಜಿನ್ ಸ್ಟಾರ್ಟ್ ಮಾಡಿದಾಗ ಅಳವಡಿಕೆ ಮಾಡಿದ್ದ ರೆಕ್ಕೆ ಕತ್ತರಿಸಿದೆ. ಕುತ್ತಿಗೆಯನ್ನು ಸೀಳಿದೆ.
ಲೋಕಲ್ ರಾಂಚೋ ಎಂದೇ ಹೆಸರು ಮಾಡಿದ್ದ ಹುಡುಗ ದುರ್ಮರಣಕ್ಕೆ ಗುರಿಯಾಗಿದ್ದಾನೆ. ಸ್ಥಓಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ