ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ, ಸಂಜಯ್ ರಾಯ್ ಮನುಷ್ಯನಲ್ಲ ಪ್ರಾಣಿ: ಅತ್ತೆ

Published : Aug 20, 2024, 10:59 AM ISTUpdated : Aug 20, 2024, 11:02 AM IST
ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ, ಸಂಜಯ್ ರಾಯ್ ಮನುಷ್ಯನಲ್ಲ ಪ್ರಾಣಿ:  ಅತ್ತೆ

ಸಾರಾಂಶ

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ ರಾಯ್ ಅತ್ತೆ ಆತನ ಬಗ್ಗೆ ಬೆಚ್ಚಿಬೀಳಿಸುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗರ್ಭಪಾತದ ನಂತರ ಆರೋಪಿ ತನ್ನ ಹೆಂಡತಿಯನ್ನು ನಿರ್ದಯವಾಗಿ ಥಳಿಸಿದ್ದಾನೆ ಎಂದು ಅವರು ಹೇಳಿದ್ದಾರೆ.  

ಕೋಲ್ಕತ್ತಾ: ಆರ್‌ ಜಿಕಾರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಸಿಬಿಐ ತನಿಖೆ ಮುಂದುವರಿದಿದೆ. ಈ ಮಧ್ಯೆ ಆರೋಪಿ ಸಂಜಯ್ ರಾಯ್ ಬಗ್ಗೆ ಆತನ ಅತ್ತೆಯೂ ಬೆಚ್ಚಿ ಬೀಳಿಸುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ತನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ. 3 ತಿಂಗಳ ಗರ್ಭಿಣಿಯಾದ ಆಕೆಯ ಮೇಲೆ ನಿರ್ದಯವಾಗಿ ಹಲ್ಲೆ ಮಾಡಿದ ಇದಾದ ನಂತರ ಆಕೆಗೆ ಗರ್ಭಪಾತವಾಗಿತ್ತು. ಇದಾದ ನಂತರವೂ ಆತ ಕ್ರೂರವಾಗಿ ಹಲ್ಲೆ ನಡೆಸುವುದನ್ನು ಮುಂದುವರೆಸಿದ್ದ ಇದಕ್ಕೂ ಮೊದಲು ಹಲವು ಬಾರಿ ಆತ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಮದುವೆಯಾದ ಕೆಲವು ದಿನಗಳ ನಂತರ ಆತನ ನಡವಳಿಕೆಯಲ್ಲಿ ಬರೀ ಕ್ರೌರ್ಯವೇ ತುಂಬಿತ್ತು ಎಂದು ಅವರು ಹೇಳಿದ್ದಾರೆ. 

ಆರೋಪಿ ಸಂಜಯ್ ಎರಡನೇ ಮದುವೆ ಆಗಿದ್ದ 
ಮದುವೆಯ ನಂತರ ಸಂಜಯ್ ಜೊತೆ ಅವರ ನಮ್ಮ ಸಂಬಂಧ ಚೆನ್ನಾಗಿರಲಿಲ್ಲ. ಸಂಜಯ್‌ಗೆ ಇದು ಎರಡನೇ ಮದುವೆಯಾಗಿತ್ತು ಕೆಲವು ದಿನಗಳಷ್ಟೇ ಅವನು ಚೆನ್ನಾಗಿದ್ದನು, ನಂತರ ಮಗಳು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಗೆ ಗರ್ಭಪಾತವಾಯಿತು. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಪ್ರಾಣಿಯಂತೆ ಥಳಿಸಿದ್ದ. ಈ ಬಗ್ಗೆ ಆಕೆ ಪೊಲೀಸರಿಗೂ ದೂರು ನೀಡಿದ್ದಳು ಎಂದು ಸಂಜಯ್ 2ನೇ ಪತ್ನಿಯ ತಾಯಿ ಹೇಳಿದ್ದಾರೆ.  

ಮಗಳ ಕೈ ಮುರಿದಿತ್ತು, ರಕ್ತ ಸೋರುತ್ತಿತ್ತು, ಪ್ಯಾಂಟ್‌ ತೆರೆದಿತ್ತು: ಭಯಾನಕ ಸ್ಥಿತಿ ವಿವರಿಸಿದ ಕೋಲ್ಕತ್ತಾ ರೇಪ್ ಸಂತ್ರಸ್ತೆ ತಾಯಿ

ಪತ್ನಿ ಅಸ್ವಸ್ಥಳಾದರೂ ಚಿಕಿತ್ಸೆ ಕೊಡಿಸುತ್ತಿರಲಿಲ್ಲ 
ಗರ್ಭಪಾತದ ನಂತರ ಮಗಳು ತುಂಬಾ ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ಆರೋಪಿಯ ಅತ್ತೆ ಹೇಳಿದ್ದಾರೆ. ಆದರೂ ಸಂಜಯ್ ಆಕೆಗೆ ಚಿಕಿತ್ಸೆ ಕೊಡಿಸಲಿಲ್ಲ. ಬಳಿಕ ಆಕೆಯನ್ನು ನಾನೇ ವೈದ್ಯರ ಬಳಿ ಕರೆದುಕೊಂಡು ಹೋಗಿ ಔಷಧಿ ಮತ್ತು ಆಸ್ಪತ್ರೆಯ ಖರ್ಚನ್ನು ನಾನೇ ಭರಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಓದಿರಿ ಕೋಲ್ಕತ್ತಾ ಹತ್ಯಾಕಾಂಡ: ವೈದ್ಯೆಯ ತಂದೆಯ ಆರೋಪ- ವಶಪಡಿಸಿಕೊಂಡ ಡೈರಿಯ ಒಂದು ಪುಟ ನಾಪತ್ತೆ

ಕೋಲ್ಕತ್ತಾ ಪ್ರಕರಣದ ಬಗ್ಗೆ ಹೇಳಿದ್ದೇನು
ಸಂಜಯ್ ಒಳ್ಳೆಯ ಮನುಷ್ಯನಲ್ಲ. ಅವನಿಗೆ ಗಲ್ಲು ಶಿಕ್ಷೆ ಕೊಡಿ ಅಥವಾ ಏನಾದರೂ ಮಾಡಿ, ನಮಗೆ ಅವನೊಂದಿಗೆ ಯಾವುದೇ ಸಂಬಂಧವಿಲ್ಲ. ಕೋಲ್ಕತ್ತಾ ಪ್ರಕರಣದ ಬಗ್ಗೆ ನಾನು ಏನನ್ನೂ ಹೇಳಲಾರೆ. ಸಂಜಯ್ ಈ ಕೆಲಸವನ್ನು ಒಬ್ಬಂಟಿಯಾಗಿ ಮಾಡಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕೋಲ್ಕತಾ ವೈದ್ಯೆ ಹತ್ಯೆ ಹಿಂದೆ ಔಷಧ ಮಾಫಿಯಾ?: ಆಕೆಗೆ ದಂಧೆ ಗೊತ್ತಾಗಿದ್ದಕ್ಕೆ ಅತ್ಯಾಚಾರ, ಕೊಲೆ

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕೋಲ್ಕತ್ತಾ ಪ್ರಕರಣದ ವಿಚಾರಣೆ
ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ತನಿಖೆ ಕೈಗೆತ್ತಿಕೊಂಡಿದೆ. ಮಂಗಳವಾರ ಅಂದರೆ ಇಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೆಲವು ನಿರ್ದಿಷ್ಟ ನಿರ್ದೇಶನಗಳನ್ನು ನೀಡುವ ಸಾಧ್ಯತೆಯಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ