ಸ್ಟಾರ್ ಯುವತಿ ಜೊತೆ ಸಚಿವರಿಗೆ ಸಂಬಂಧ? : ಸಾವಿನ ಕೇಸಲ್ಲಿ ರಾಜೀನಾಮೆ

Kannadaprabha News   | Asianet News
Published : Mar 01, 2021, 09:12 AM ISTUpdated : Mar 01, 2021, 09:54 AM IST
ಸ್ಟಾರ್ ಯುವತಿ ಜೊತೆ ಸಚಿವರಿಗೆ ಸಂಬಂಧ? : ಸಾವಿನ ಕೇಸಲ್ಲಿ ರಾಜೀನಾಮೆ

ಸಾರಾಂಶ

ಯುವತಿಯೋರ್ವಳ ಜೊತೆ  ಸಂಬಂಧ ಇರುವುದಾಗಿ ಆರೋಪ ಕೇಳಿ ಬಂದಿದ್ದು ಆಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಇದೀಗ ಈ ಸಂಬಂಧ ಸಚಿವರೋರ್ವರು ರಾಜೀನಾಮೆ ನೀಡಿದ್ದಾರೆ. 

ಮುಂಬೈ (ಮಾ.01): ಮಹಿಳೆಯೊಬ್ಬಳ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್‌ ರಾಥೋಡ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಸಂಜಯ್‌ ಮತ್ತು ಬೀಡ್‌ ಜಿಲ್ಲೆಯ ನಿವಾಸಿ ಪೂಜಾ ಚವಾಣ್‌ (23) ಎಂಬ ಟಿಕ್‌ಟಾಕ್‌ ಸ್ಟಾರ್‌ ಒಟ್ಟಿಗಿದ್ದ ಕೆಲ ಫೋಟೋಗಳು, ಆಡಿಯೋ ಕ್ಲಿಪ್‌ಗಳು ಬಹಿರಂಗವಾಗಿದ್ದವು.

ಸಂಜಯ್ ದತ್ ಮಗಳು ತಂದೆಯ ಡ್ರಗ್ ಅಡಿಕ್ಷನ್ ಬಗ್ಗೆ ಹೇಳಿದ್ದೇನು ಗೊತ್ತೆ? ..

 ಅದಾದ ಕೆಲ ದಿನಗಳಲ್ಲೇ ಅಂದರೆ ಫೆ.8ರಂದು ಪೂಜಾ ಶವ ಪುಣೆಯಲ್ಲಿ ಪತ್ತೆಯಾಗಿತ್ತು. ಘಟನೆಯ ಬೆನ್ನಲ್ಲೇ ಪೂಜಾಳನ್ನು ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಮತ್ತೊಂದೆಡೆ ಮೃತ ಯುವತಿಯ ಜೊತೆ ರಾಥೋಡ್‌ ಸಂಬಂಧ ಇಟ್ಟುಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಪಕ್ಷಗಳ ಒತ್ತಡಕ್ಕೆ ಮಣಿದು ರಾಥೋಡ್‌ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು