ರಾಜ್ಯಸಭೆಗೆ ತಮ್ಮನ್ನು ಪರಿಚಯಿಸುವ ವೇಳೆ, ತಮ್ಮ ಹೆಸರಿನ ಜೊತೆಗೆ ತಮ್ಮ ಪತಿ ಹೆಸರು ಅಮಿತಾಭ್ ಎಂದು ಸೇರಿಸಿದ್ದಕ್ಕೆ ಸಮಾಜ ವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅಸಮಧಾನಗೊಂಡ ಘಟನೆ ನಡೆದಿದೆ.
ನವದೆಹಲಿ (30): ರಾಜ್ಯಸಭೆಗೆ ತಮ್ಮನ್ನು ಪರಿಚಯಿಸುವ ವೇಳೆ, ತಮ್ಮ ಹೆಸರಿನ ಜೊತೆಗೆ ತಮ್ಮ ಪತಿ ಹೆಸರು ಅಮಿತಾಭ್ ಎಂದು ಸೇರಿಸಿದ್ದಕ್ಕೆ ಸಮಾಜ ವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅಸಮಧಾನಗೊಂಡ ಘಟನೆ ಸೋಮವಾರ ನಡೆದಿದೆ. ಮೇಲ್ಮನೆ ಕಲಾಪದಲ್ಲಿ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು 'ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ನಿಮ್ಮ ಸರದಿ' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಾ, 'ಮಹಿಳೆಯರಿಗೂ ಅವರದ್ದೇ ಆದ ಸ್ಥಾನಮಾನಗಳಿದೆ. ಅವರದ್ದೇ ಆದ ಸಾಧನೆ ಇರುತ್ತದೆ. ಪತಿ ಹೆಸರು ಸೇರಿಸಿ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಕೇವಲ 'ಜಯಾ ಬಚ್ಚನ್ ಎಂದರೆ ಸಾಕು' ಎಂದು ಹೇಳಿದರು.
ಕೇರಳದಲ್ಲಿ ಭೀಕರ ಭೂಕುಸಿತ, 21ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!
undefined
ನಟಿ-ರಾಜಕಾರಣಿ ಜಯಾ ಬಚ್ಚನ್ ಅವರು ತಮ್ಮ ಮುಂಗೋಪದ ವರ್ತನೆಗೆ ಆಗಾಗ್ಗೆ ವಿವಾದಗಳಿಗೆ ತುತ್ತಾಗುತ್ತಾರೆ. ಇದೀಗ ನೆಟ್ಟಿಗರು ರಾಜ್ಯಸಭೆಯಲ್ಲಿನ ವರ್ತನೆಗೆ ಟ್ರೋಲ್ ಮಾಡುತ್ತಿದ್ದಾರೆ. ಬಚ್ಚನ್ ಹೆಸರೇಕೆ ಇಟ್ಟುಕೊಂಡಿದ್ದಾರೆ ಅದನ್ನೂ ತೆಗೆದು ಬಿಡಲಿ, ಮನೆಯಲ್ಲಿ ಗಲಾಟೆ ಮಾಡಿಕೊಂಡು ಬಂದಿರಬೇಕು ಎಂದಿದ್ದಾರೆ. ಇನ್ನು ರಾಜ್ಯಸಭೆಯಲ್ಲಿ ಸ್ಪೀಕರ್ ಎದುರು ಈ ರೀತಿಯ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ.
ಮುಂಬೈ-ಹೌರಾ ಪ್ರಯಾಣಿಕರ ರೈಲು ಅಪಘಾತ, ಕನಿಷ್ಠ ಇಬ್ಬರು ಬಲಿ, 20 ಮಂದಿಗೆ ಗಾಯ
ಅಮೆರಿಕದಲ್ಲಿ ಸ್ಥಾಪಿತ ನಟ ಬಚ್ಚನ್ ಪ್ರತಿಮೆ ಸ್ಥಳ ಈಗ ಪ್ರವಾಸಿ ತಾಣದ ಘೋಷಣೆ
ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ಸ್ಥಾಪಿತವಾಗಿರುವ ನಟ ಅಮಿತಾಭ್ ಬಚ್ಚನ್ ಪ್ರತಿಮೆ ಸ್ಥಳವನ್ನು ಗೂಗಲ್ ಮ್ಯಾಪ್ ಇದೀಗ ಪ್ರವಾಸಿ ಆಕರ್ಷಣೆಯ ತಾಣಗಳ ಪಟ್ಟಿಗೆ ಸೇರಿಸಿದೆ. 2022ರಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಗೋಪಿ ಸೇಥ್ ತಮ್ಮ ನಿವಾಸದೆದುರು ಬಚ್ಚನ್ ಪ್ರತಿಮೆಯೊಂದನ್ನು ನಿರ್ಮಿಸಿದ್ದರು. ನಿರ್ಮಾಣವಾಗಿ 2 ವರ್ಷದಲ್ಲಿ ಅಮಿತಾಭ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆ ಜಾಗಕ್ಕೆ ಭೇಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪರಿಣಾಮ, ಅಮಿತಾಭ್ ಪ್ರತಿಮೆ ಇರುವ ಗೋಪಿ ಅವರ ನಿವಾಸ ಒಂದು ರೀತಿಯಲ್ಲಿ ಪ್ರವಾಸಿ ತಾಣವಾಗಿ ಬದಲಾಗಿದೆ. ಗೂಗಲ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆ ಜಾಗವನ್ನು ಹುಡುಕಾಡಿದ ಕಾರಣ ಗೂಗಲ್ ಮ್ಯಾಪ್‌ನ ಪ್ರವಾಸಿ ತಾಣದ ಪಟ್ಟಿಗೆ ಸೇರಿದೆ.