ಮುಂಬೈ-ಹೌರಾ ಪ್ರಯಾಣಿಕರ ರೈಲು ಅಪಘಾತ, ಕನಿಷ್ಠ ಇಬ್ಬರು ಬಲಿ, 20 ಮಂದಿಗೆ ಗಾಯ

By Gowthami K  |  First Published Jul 30, 2024, 9:41 AM IST

ಮುಂಬೈ-ಹೌರಾ  ಪ್ರಯಾಣಿಕರ ರೈಲಿನ 18 ಬೋಗಿಗಳು ಜಾರ್ಖಂಡ್‌  ನಲ್ಲಿ  ಹಳಿ ತಪ್ಪಿದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 


ಮುಂಬೈ (ಜು.30): ಮುಂಬೈ-ಹೌರಾ (Howrah-Mumbai passenger train)ಪ್ರಯಾಣಿಕರ ರೈಲಿನ 18 ಬೋಗಿಗಳು ಜಾರ್ಖಂಡ್‌  ಚಕ್ರಧರ್ಪುರ  ಬಳಿ ಹಳಿ ತಪ್ಪಿದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 

ಹೌರಾ-ಸಿಎಸ್‌ಎಂಟಿ ಎಕ್ಸ್ಪ್ರೆಸ್ ಜಾರ್ಖಂಡ್‌ನ ಚಕ್ರಧರ್ಪುರ ವಿಭಾಗದ ರಾಜ್ಖರ್ಸ್ವಾನ್ ಪಶ್ಚಿಮ ಹೊರ ಮತ್ತು ಬಾರಾಬಂಬೂ ನಡುವಿನ ಚಕ್ರಧರ್ಪುರ ಬಳಿ  ರೈಲಿನ 18 ಭೋಗಿಗಳು ಹಳಿ ತಪ್ಪಿದೆ. ಇದರಲ್ಲಿ 16 ಪ್ರಯಾಣಿಕರ ಭೋಗಿಗಳು. ಪಂದು ಪವರ್ ಕಾರ್, ಮತ್ತೊಂದು ಪ್ಯಾಂಟ್ರಿ ಕಾರು ಎಂದು ವರದಿ ತಿಳಿಸಿದೆ. ಗೂಡ್ಸ್ ರೈಲು ಹಳಿತಪ್ಪಿದಾಗ ಅದರ ಬದಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರ ರೈಲಿಗೆ ತಾಗಿ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

Tap to resize

Latest Videos

ಕೇರಳದಲ್ಲಿ ಭೀಕರ ಭೂಕುಸಿತ, 19ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!

ಸಹಾಯವಾಣಿ ತೆರೆಯಲಾಗಿದ್ದು, ಮಹಾರಾಷ್ಟ್ರ - ಮುಂಬೈ ಸಹಾಯವಾಣಿ: 022-22694040; ನಾಗ್ಪುರ ಸಹಾಯವಾಣಿ ಸಂಖ್ಯೆ: 7757912790; ಭೂಸಾವಲ್ ಸಹಾಯವಾಣಿ ಸಂಖ್ಯೆ: 08799982712.

ಘಟನೆಯ ಬಗ್ಗೆ ಮಾತನಾಡಿದ ಭಾರತೀಯ ರೈಲ್ವೆ, ಎಆರ್‌ಎಂಇ ಸಿಬ್ಬಂದಿ ಮತ್ತು ಎಡಿಆರ್‌ಎಂ ಸಿಕೆಪಿ ಸ್ಥಳದಲ್ಲಿದೆ ಮತ್ತು  ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಜಮ್ಶೆಡ್‌ಪುರದ ಟಾಟಾ ಮುಖ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಭೂಕುಸಿತದಿಂದ ಹಳಿ ಮೇಲೆ ಬಿದ್ದ ಮಣ್ಣು, ಇನ್ನು 15 ದಿನ ಮಂಗಳೂರು-ಬೆಂಗಳೂರು ರೈಲು ಸಂಚಾರ ಡೌಟ್!

ಘಟನೆ ಬಳಿಕ ಹೌರಾ-ತಿಟಲ್‌ಗಢ-ಕಾಂತಬಾಂಜಿ ಎಕ್ಸ್‌ಪ್ರೆಸ್, ಖರಗ್‌ಪುರ-ಜಾರ್‌ಗ್ರಾಮ್-ಧನ್‌ಬಾದ್ ಎಕ್ಸ್‌ಪ್ರೆಸ್, ಹೌರಾ-ಬಾರ್ಬಿಲ್-ಹೌರಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್, ಟಾಟಾನಗರ-ಇಟ್ವಾರಿ ಎಕ್ಸ್‌ಪ್ರೆಸ್ ಮತ್ತು ಎಲ್‌ಟಿಟಿ-ಎಕ್ಸ್‌ಪ್ರೆಸ್ ಸೇರಿದಂತೆ ಐದು   ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.

click me!