
ಲಖನೌ(ಫೆ.19) ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇಂಡಿಯಾ ಮೈತ್ರಿ ಕೂಟದಲ್ಲಿ ಬಾಕಿ ಉಳಿದಿರುವ ಪಕ್ಷಗಳಲ್ಲಿ ಸೀಟು ಹಂಚಿಕೆ ಮಾತುಕತೆ ನಿರಂತರಾಗಿ ನಡೆಯುತ್ತಿದೆ. ಆದರೆ ಯಾವುದೇ ರಾಜ್ಯದಲ್ಲಿ ಸೀಟು ಹಂತಿಕೆ ಅಂತಿಮಗೊಂಡಿಲ್ಲ. ಇದರ ನಡುವೆ ಮೈತ್ರಿ ಒಳಗಿನ ಪಕ್ಷಗಳೇ ಅಸಮಾಧಾನ ಹೊರಹಾಕುತ್ತಿದೆ. ಇದೀಗ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಸೀಟು ಹಂಚಿಕೆ ಫೈನಲ್ ಆಗುವ ಮೊದಲೇ ಲೋಕಸಭಾ ಚುನಾವಣಾ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಘಾಜಿಪುರ ಕ್ಷೇತ್ರದಿಂದ ಅಫ್ಜಲ್ ಅನ್ಸಾರಿಯನ್ನು ಎಸ್‌ಪಿ ಕಣಕ್ಕಿಳಿಸಿದೆ. ಇದಕ್ಕೂ ಮೊದಲು 16 ಅಭ್ಯರ್ಥಿಗಳ ಪಟ್ಟಿಯನ್ನು ಎಸ್‌ಪಿ ಬಿಡುಗಡೆ ಮಾಡಿತ್ತು. ಈ ವೇಳೆ ಸಮಾಜವಾಜಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿಗೆ ಮಣಿಪುರಿ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.
ಇದೀಗ 11 ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಾರ್ಟಿ ಬಿಡುಗಡೆ ಮಾಡಿದೆ. ಮುಝಾಫರ್ ನಗರದಿಂದ ಹರೇಂದ್ರ ಮಲಿಕ್, ಅನೋಲಾ ಕ್ಷೇತ್ರದಿಂದ ನೀರ್ ಮೌರ್ಯ, ಶಹಜನಾಪುರ ಕ್ಷೇತ್ರದಿಂದ ರಾಜೇಶ್ ಕಶ್ಯಪ್, ಹರ್ದೋಯಿ ಕ್ಷೇತ್ರಿಂದ ಉಶಾ ವರ್ಮಾ, ಮಿಶಿರ್ಕಿ ಕ್ಷೇತ್ರದಿಂದ ರಾಂಪಾಲ್ ರಾಜವಂಶಿ, ಮೊಹನಲಾಲ್‌ಗಂಜ್ ಕ್ಷೇತ್ರದಿಂದ ಆರ್‌ಕೆ ಚೌಧರಿ, ಪ್ರತಾಪಗಢ ಕ್ಷೇತ್ರದಿಂದ ಡಾ. ಎಸ್‌ಪಿ ಸಿಂಗ್ ಪಟೇಲ್, ಬರಿಚಾ ಕ್ಷೇತ್ರದಿಂದ ರಮೇಶ್ ಗೌತಮ್, ಗೊಂಡಾ ಕ್ಷೇತ್ರದಿಂದ ಶ್ರೇಯಾ ವರ್ಮಾ, ಗಾಝಿಪುರ ಕ್ಷೇತ್ರದಿಂದ ಅಫ್ಜಲ್ ಅನ್ಸಾರಿ, ಚಂದೌಲಿ ಕ್ಷೇತ್ರದಿಂದ ವೀರೇಂದ್ರ ಸಿಂಗ್‌ಗೆ ಟಿಕೆಟ್ ನೀಡಿದೆ.
ಎಲ್ಲರಿಗಿಂತ ಮೊದಲು ಚುನಾವಣಾ ಅಭ್ಯರ್ಥಿ ಪಟ್ಟಿ ಘೋಷಿಸಿದ ಎಸ್‌ಪಿ, ಅಖಿಲೇಶ್ ಪತ್ನಿ ಡಿಂಪಲ್‌ಗೆ ಸ್ಥಾನ!
ಇದಕ್ಕೂ ಮೊದಲು ಎಸ್‌ಪಿ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎಸ್‌ಪಿ, ಇಂಡಿಯಾ ಕೂಟದ ಪ್ರಮುಖ ಅಂಗಪಕ್ಷವಾಗಿದ್ದು, ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನು ಮಿತ್ರಪಕ್ಷ ಕಾಂಗ್ರೆಸ್‌ಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಅದರ ಬೆನ್ನಲ್ಲೇ ಪಟ್ಟಿ ಬಿಡುಗಡೆ ಮಾಡಿದೆ. ಹಾಲಿ ಸಂಸದರಾದ ಎಸ್ಪಿ ನೇತಾರ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ರವಿದಾಸ್ ಮೆಹ್ರೋತ್ರಾ ಅವರಿಗೂ ಸ್ಥಾನ ನೀಡಲಾಗಿದೆ. ಡಿಂಪಲ್ ಮೈನ್‌ಪುರಿಯಿಂದ, ಶಫೀಕರ್ ರೆಹಮಾನ್ ಬಾರ್ಕ್ ಅವರು ಸಂಣಲ್‌ನಿಂದ, ರವಿದಾಸ್ ಮೆಹ್ರೋತ್ರಾ ಅವರು ಲಖನೌ ಸೆಂಟ್ರಲ್‌ನಿಂದ ಸ್ಪರ್ಧಿಸಲಿದ್ದಾರೆ.
ಅಲ್ಲದೇ ಹಾಲಿ ಶಾಸಕರಾದ ಕಟೇಹರಿ ಅವರಿಗೆ ಅಂಬೇಡ್ಕರ್ ನಗರ ಜಿಲ್ಲಾ ಕ್ಷೇತ್ರದಿಂದ, ಲಾಲ್ಜಿ ವರ್ಮಾ ಅವರಿಗೆ ಅಂಬೇಡ್ಕರ್ ನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಪಕ್ಷದ ಹಿರಿಯ ನಾಯಕ ರಾಮ್‌ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಅವರಿಗೆ ಈ ಬಾರಿ ಫಿರೋಜಾಬಾದ್‌ನಿಂದ ಟಿಕೆಟ್ ನೀಡಲಾಗಿದೆ.
ಹಿಂದೂ ಧರ್ಮವಲ್ಲ ಅದು ದಂಧೆ, ವಂಚನೆ; ಸಮಾಜವಾದಿ ನಾಯಕನ ಮತ್ತೊಂದು ವಿವಾದ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ