ಬಂಡೆದ್ದ ಅಜಿತ್‌ ಮನವೊಲಿಸಿದ್ದು ಈ ಪತಿ-ಪತ್ನಿ!

Published : Nov 27, 2019, 08:04 AM ISTUpdated : Nov 27, 2019, 11:49 AM IST
ಬಂಡೆದ್ದ ಅಜಿತ್‌ ಮನವೊಲಿಸಿದ್ದು ಈ ಪತಿ-ಪತ್ನಿ!

ಸಾರಾಂಶ

ಬಂಡೆದ್ದ ಅಜಿತ್‌ ಮನವೊಲಿಸಿದ್ದು ಪತಿ-ಪತ್ನಿ!| ಭಾವನಾತ್ಮಕವಾಗಿಯೇ ಅಜಿತ್‌ ಮನಗೆದ್ದ ಸುಪ್ರಿಯಾ- ಸದಾನಂದ

ಮುಂಬೈ[ನ.27]: ರಾತ್ರೋ-ರಾತ್ರಿ ತಮ್ಮ ರಾಜಕೀಯ ಗುರು ಶರದ್‌ ಪವಾರ್‌ ವಿರುದ್ಧವೇ ಬಂಡೆದ್ದು ಬಿಜೆಪಿಗೆ ಸರ್ಕಾರ ರಚನೆಗೆ ಸಹಕಾರ ನೀಡಿದ್ದ ಅಜಿತ್‌ ಪವಾರ್‌ ವರ್ತನೆ ಸಹಜವಾಗಿಯೇ ಎನ್‌ಸಿಪಿ ವಲಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇಷ್ಟೆಲ್ಲಾ ಅದರೂ ಅಜಿತ್‌ ವಿರುದ್ಧ ಯಾವುದೇ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ ಎನ್‌ಸಿಪಿ, ಭಾವನಾತ್ಮಕವಾಗಿಯೇ ತನ್ನ ದಾಳವನ್ನು ಉರುಳಿಸಿತ್ತು. ಈ ದಾಳಕ್ಕೆ ತಮ್ಮದೂ ಒಂದು ದಾಳ ಸೇರಿಸಿದ್ದು ಎನ್‌ಸಿಪಿ ನಾಯಕ ಶರದ್‌ ಪವಾರ್‌ರ ಪುತ್ರಿ ಸುಪ್ರಿಯಾ ಸುಳೆ ಮತ್ತು ಅವರ ಪತಿ ಸದಾನಂದ ಸುಳೆ.

ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ

ನ.23ರಂದು ಮುಂಜಾನೆ ಫಡ್ನವಿಸ್‌ ಸಿಎಂ ಆಗಿ ಮತ್ತು ಅಜಿತ್‌ ಪವಾರ್‌ ಡಿಸಿಎಂಗೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿ ಹೊರಬೀಳುತ್ತಲೇ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಸುಪ್ರಿಯಾ, ‘ಜೀವನದಲ್ಲಿ ಯಾರನ್ನು ನಂಬಬೇಕು?.. ನನ್ನ ಜೀವನದಲ್ಲಿ ಈ ಪರಿಯಾದ ವಂಚನೆಗೆ ಎಂದಿಗೂ ಒಳಗಾಗಿರಲಿಲ್ಲ... ಅವರನ್ನು ಪ್ರೀತಿಸಿದ್ದೆ... ಹಲವು ಬಾರಿ ಅವರನ್ನು ಸಮರ್ಥಿಸಿಕೊಂಡಿದ್ದೆ... ಇದಕ್ಕೆ ಪ್ರತಿಯಾಗಿ ನನಗೆ ಆತ ನೀಡಿದ ಬಹುಮಾನವಿದು’ ಭಾವನಾತ್ಮಕವಾಗಿಯೇ ಅಜಿತ್‌ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಳಿಕವೂ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದ ಸುಪ್ರಿಯಾ ‘ ಅಧಿಕಾರ ಬರುತ್ತೆ ಮತ್ತು ಹೋಗುತ್ತೆ. ಆದರೆ, ಸಂಬಂಧಗಳೇ ಶಾಶ್ವತ ಎಂದು ನಂಬಿದವಳು ನಾನು’ ಎಂಬ ಅಭಿಪ್ರಾಯದ ಮೂಲಕ ಅಜಿತ್‌ ಪವಾರ್‌ ಅವರು ತಮ್ಮ ಯೋಚನೆಯನ್ನು ಬದಲಾಯಿಸಿ, ಪುನಃ ಮಾತೃಪಕ್ಷಕ್ಕೆ ಹಿಂದಿರುಗುವ ಬಗ್ಗೆ ಕುಟುಂಬ ಎದುರು ನೋಡುತ್ತಿದೆ ಎಂಬ ಸಂದೇಶವನ್ನು ಸುಪ್ರಿಯಾ ರವಾನಿಸಿದ್ದರು. ಇದು ಅಜಿತ್‌ ಅವರ ಮನಸ್ಸನ್ನು ಕರಗಿಸಿತ್ತು.

ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!

ಮತ್ತೊಂದೆಡೆ ಸದಾನಂದ ಅವರು ಮಂಗಳವಾರ ಬೆಳಗ್ಗೆ ದಕ್ಷಿಣ ಮುಂಬೈನ ಹೋಟೆಲೊಂದರಲ್ಲಿ ಅಜಿತ್‌ ಪವಾರ್‌ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿ ಶರದ್‌ ಪವಾರ್‌ರನ್ನು ಅಜಿತ್‌ ಪವಾರ್‌ ಜತೆ ಮಾತನಾಡಿಸಿದರು. ಇದಾದ ತರುವಾಯ ತಮ್ಮ ಮನಸ್ಸು ಬದಲಿಸಿದ ಅಜಿತ್‌ ಪವಾರ್‌ ಅವರು ನೇರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನಿವಾಸಕ್ಕೇ ತೆರಳಿ ರಾಜೀನಾಮೆ ಸಲ್ಲಿಸಿದರು.ಅಜಿತ್‌ ಪವಾರ್‌ ಅವರನ್ನು ಕುಟುಂಬ ಸದಸ್ಯರು, ಬಂಧುಗಳು ಕಳೆದ 4 ದಿನಗಳಿಂದ ಮನವೊಲಿಸುವ ಕೆಲಸ ಮಾಡುತ್ತಲೇ ಬಂದಿದ್ದರು. ಸೋಮವಾರ ಛಗನ್‌ ಭುಜಬಲ್‌ ನೇತೃತ್ವದ ಎನ್‌ಸಿಪಿ ನಾಯಕರ ತಂಡ ಅಜಿತ್‌ ಪವಾರ್‌ ಜತೆ ಸಂಧಾನ ಮಾತುಕತೆ ನಡೆಸಿತ್ತು. ಆಗಲೇ ಅವರು ತಮ್ಮ ಮನಸ್ಸು ಬದಲಿಸುವ ಸಣ್ಣ ಸುಳಿವು ನೀಡಿದ್ದರು. ಸದಾನಂದ ಭೇಟಿಯೊಂದಿಗೆ ಅಜಿತ್‌ ಪವಾರ್‌ ತಮ್ಮ ನಿರ್ಧಾರವನ್ನು ಸಂಪೂರ್ಣ ಬದಲಿಸಿದರು ಎನ್ನಲಾಗಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?