ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್‌: ಎಂಟು ವರ್ಷದ ಸಾಧನೆಯ ಹೈಲೈಟ್ಸ್‌ ಶೇರ್ ಮಾಡಿದ ಮೋದಿ!

Published : Jun 05, 2022, 11:19 AM IST
ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್‌: ಎಂಟು ವರ್ಷದ ಸಾಧನೆಯ ಹೈಲೈಟ್ಸ್‌ ಶೇರ್ ಮಾಡಿದ ಮೋದಿ!

ಸಾರಾಂಶ

* ಎಂಟು ವರ್ಷ ಅಧಿಕಾರ ಪೂರೈಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ * ಎಂಟು ವರ್ಷದ ಸಾಧನೆಯ ಹೈಲೈಟ್ಸ್‌ ಶೇರ್ ಮಾಡಿದ ಮೋದಿ * ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್‌ ಎಂಬ ಮಂತ್ರದಿಂದ ಈ ಸಾಧನೆ ಎಂದ ಮೋದಿ

ನವದೆಹಲಿ(ಜೂ.05): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ವೆಬ್‌ಸೈಟ್ (narendramodi.in) ಮತ್ತು MyGov ನಿಂದ ಕಳೆದ ಎಂಟು ವರ್ಷಗಳಲ್ಲಿ ದೇಶದ ಆಡಳಿತದಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆ ಮತ್ತು ಸುಧಾರಣೆಗಳ ಕುರಿತು ಲೇಖನ ಮತ್ತು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ.

ಈ ಲೇಖನಗಳು ಮತ್ತು ಟ್ವೀಟ್‌ಗಳು ಆತ್ಮನಿರ್ಭರ ಭಾರತ್, ಆಡಳಿತಕ್ಕೆ ಜನ-ಕೇಂದ್ರಿತ ಮತ್ತು ಮಾನವೀಯ ವಿಧಾನ, ರಕ್ಷಣಾ ವಲಯದ ಸುಧಾರಣೆಗಳು ಮತ್ತು ಬಡವರ ಪರವಾದ ಆಡಳಿತವನ್ನು ಉತ್ತೇಜಿಸುವ ಪ್ರಯತ್ನಗಳ ಅಂಶಗಳೊಂದಿಗೆ ವ್ಯವಹರಿಸುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಇನ್ನು ಮೋದಿ ತಮ್ಮೊಂದು ಟ್ವೀಟ್‌ನಲ್ಲಿ, “130 ಕೋಟಿ ಭಾರತೀಯರು ಭಾರತವನ್ನು ಆತ್ಮನಿರ್ಭರ್ ಮಾಡಲು ನಿರ್ಧರಿಸಿದ್ದಾರೆ. ಸ್ವಾವಲಂಬನೆಗಾಗಿ ನಮ್ಮ ಪ್ರಯತ್ನ ಜಾಗತಿಕ ಸಮೃದ್ಧಿಗೆ ಕೊಡುಗೆ ನೀಡುವ ದೃಷ್ಟಿಯಿಂದ ನಡೆಸಲ್ಪಡುತ್ತದೆ' ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ನಮ್ಮದು ಪ್ರತಿಯೊಬ್ಬ ಭಾರತೀಯನ ಬಗ್ಗೆ ಕಾಳಜಿ ವಹಿಸುವ ಸರ್ಕಾರವಾಗಿದೆ. ನಾವು ಜನಕೇಂದ್ರಿತ ಮತ್ತು ಮಾನವೀಯ ವಿಧಾನದಿಂದ ನಡೆಸಲ್ಪಡುತ್ತೇವೆ' ಎಂದಿದ್ದಾರೆ.

ಈ ಬಗ್ಗೆ ಮತ್ತಷ್ಟು ಟ್ವೀಟ್ ಮಾಡಿದ್ದು, “ನಮೋ ಅಪ್ಲಿಕೇಶನ್‌ನಲ್ಲಿನ ಈ ಲೇಖನವು ಸ್ವದೇಶೀಕರಣ, ರಕ್ಷಣಾ ಕಾರಿಡಾರ್‌ಗಳ ತಯಾರಿಕೆ, ರಕ್ಷಣಾ ರಫ್ತುಗಳನ್ನು ಹೆಚ್ಚಿಸುವುದು ಮತ್ತು ಹೆಚ್ಚಿನದನ್ನು ಒಳಗೊಂಡಂತೆ ರಕ್ಷಣಾ ವಲಯದಲ್ಲಿನ ಸುಧಾರಣೆಗಳ ಸರಣಿಯನ್ನು ಎತ್ತಿ ತೋರಿಸುತ್ತದೆ ಎಂದು ಬರೆದಿದ್ದಾರೆ.

"ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್' ಎಂಬ ಮಂತ್ರದಿಂದ ಪ್ರೇರಿತರಾಗಿ, ನಮ್ಮ ಸರ್ಕಾರವು ಬಡವರು, ಯುವಕರು, ರೈತರು, ಮಹಿಳೆಯರು ಮತ್ತು ಹಿಂದುಳಿದವರಿಗೆ ಸಹಾಯ ಮಾಡುವ ಜನಪರ ಆಡಳಿತವನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಮೇ 30, 2022 ರಂದು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ಎಂಟು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿತು. ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 2014 ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತು. ತನ್ನ ಈ ಸಾಧನೆ ಮೂಲಕ ಒಂದು ದಶಕದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಆಡಳಿತವನ್ನು ಉರುಳಿಸಿತು. 2019ರಲ್ಲಿ ಮೋದಿ ಸರ್ಕಾರದ ಗೆಲುವು ಇನ್ನಷ್ಟು ದೊಡ್ಡದಾಯಿತು.

ಇತ್ತೀಚೆಗಷ್ಟೇ ನರೇಂದ್ರ ಮೋದಿ ಅವರು 2001 ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ 21 ವರ್ಷಗಳನ್ನು ಪೂರೈಸಿದರು, 2001 ರಲ್ಲಿ ಅವರು ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?