
ಕೊಚ್ಚಿ : ಚಿನ್ನಲೇಪನದ ವೇಳೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿ ಹಾಗೂ ಚೌಕಟ್ಟಿನ ಚಿನ್ನ ಕಳವಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.
‘ದೇಗುಲ ಚೌಕಟ್ಟಿನ ಚಿನ್ನ ದುರುಪಯೋಗ ಆಗಿದೆ ಎಂಬುದು ಇಲ್ಲಿಯವರೆಗೆ ನಡೆಸಿದ ತನಿಖೆಯಿಂದ ತಿಳಿದುಬರುತ್ತದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಪೀಠ ಸೂಚಿಸಿದೆ.
‘ಚಿನ್ನಲೇಪನ ನಡೆಸಿದ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಗೆ ಗಣನೀಯ ಪ್ರಮಾಣದ ಚಿನ್ನವಾದ ಸುಮಾರು 474.9 ಗ್ರಾಂ ಅನ್ನು ಹಸ್ತಾಂತರಿಸಲಾಗಿದೆ ಎಂದು ವಿಚಕ್ಷಕ ವರದಿಯಿಂದ ಗೊತ್ತಾಗಿದೆ. ಆದರೆ ಅವರು ಈ ಚಿನ್ನವನ್ನು ದೇಗುಲಕ್ಕೆ ಮೆಳಿಸಿದರು ಎಂಬ ದಾಖಲೆಗಳಿಲ್ಲ’ ಎಂದು ಪೀಠ ಗಮನಿಸಿದೆ.
ಬೆಂಗಳೂರಿಗೂ ಚಿನ್ನದ ಹೊದಿಕೆ ತಂದಿದ್ದ ಪೊಟ್ಟಿ
ಶಬರಿಮಲೆ ಅಯ್ಯಪ್ಪ ದೇಗುಲದ ದ್ವಾರಪಾಲಕ ಮೂರ್ತಿಗಳ ಹೊದಿಕೆಗಳನ್ನು ಚಿನ್ನ ಲೇಪನಕ್ಕಾಗಿ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಗೆ 2019ರಲ್ಲಿ ನೀಡಲಾಗಿತ್ತು. ಈ ವೇಳೆ ಆತ ಹೊದಿಕೆಗಳನ್ನು ಬೆಂಗಳೂರಿನ ಶ್ರೀರಾಂಪುರಕ್ಕೆ ತಂದು ಭಕ್ತರಿಗಾಗಿ ಪ್ರದರ್ಶನಕ್ಕಿಟ್ಟಿದ್ದ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ