ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇಂದಿನಿಂದ ಮತ್ತೆ ದರ್ಶನ ಪ್ರಾರಂಭ

Published : Dec 30, 2024, 06:24 AM ISTUpdated : Dec 30, 2024, 10:21 AM IST
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇಂದಿನಿಂದ ಮತ್ತೆ ದರ್ಶನ ಪ್ರಾರಂಭ

ಸಾರಾಂಶ

ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಇಂದು ಮತ್ತೆ ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಇಂದು ಮತ್ತೆ ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ತಂತ್ರಿ ಕಂಡಾರರು ರಾಜೀವರು ಸಮ್ಮುಖದಲ್ಲಿ ಮೇಲುಶಾಂತಿ ಎಸ್‌. ಅರುಣ್ ಕುಮಾರ್‌ ನಂಬೂತಿರಿ ಡಿ.30ರ ಸಂಜೆ ಅಂದರೆ ಇಂದು 4 ಗಂಟೆಗೆ ದೇವಸ್ಥಾನವನ್ನು ತೆರೆಯಲಿದ್ದಾರೆ.  ಗರ್ಭಗುಡಿಯಲ್ಲಿನ ಅಗ್ಗಿಷ್ಟಿಕೆ ಬೆಳಗಿಸಿದ ನಂತರ ಯಾತ್ರಾರ್ಥಿಗಳು ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಏರಬಹುದು. ಡಿ.26ರಂದು ರಾತ್ರಿ 10 ಗಂಟೆಗೆ ಮಂಡಲ ಪೂಜೆಯ ನಂತರ ಹರಿವರಾಸನಂ ಪಠಣದೊಂದಿಗೆ ದೇವಾಲಯವನ್ನು ಮುಚ್ಚಲಾಗಿತ್ತು.

2023-24ರಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ದಾಖಲೆ

ನವದೆಹಲಿ: 2023-24ನೇ ಹಣಕಾಸು ವರ್ಷದಲ್ಲಿ ಭಾರತವು ಕಲ್ಲಿದ್ದಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 997.826 ದಶಲಕ್ಷ ಟನ್‌ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ.

2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.11.71ರಷ್ಟು ಹೆಚ್ಚಿನ ಕಲ್ಲಿದ್ದಲು ಉತ್ಪಾದನೆ ದಾಖಲಿಸಿದಂತಾಗಿದೆ. ಆ ಅವಧಿಯಲ್ಲಿ 893.191 ದಶಲಕ್ಷ ಟನ್‌ ಕಲ್ಲಿದ್ದಲು ಉತ್ಪಾದನೆಯಾಗಿತ್ತು ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.2024ನೇ ಕ್ಯಾಲೆಂಡರ್‌ ವರ್ಷದಲ್ಲಿ (ಡಿ.15ರವರೆಗೆ) 962.11 ದಶಲಕ್ಷ ಟನ್‌ ಕಲ್ಲಿದ್ದಲು ಪೂರೈಸಿದ್ದರೆ, ಹಿಂದಿನ ವರ್ಷ (2023ರಲ್ಲಿ) 904.61 ದಶಲಕ್ಷ ಟನ್‌ ಕಲ್ಲಿದ್ದಲು ಪೂರೈಕೆಯಾಗಿತ್ತು. ಈ ಮೂಲಕ ಇಲ್ಲೂ ಶೇ.6.47 ರಷ್ಟು ಬೆಳವಣಿಗೆ ದಾಖಲಿಸಲಾಗಿದೆ. ಈ ವರ್ಷ ವಿದ್ಯುತ್‌ ಕ್ಷೇತ್ರಕ್ಕೆ 792.958 ದಶಲಕ್ಷ ಟನ್‌ ಕಲ್ಲಿದ್ದಲು ಪೂರೈಕೆಯಾದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 755.029 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಗೊಂಡಿತ್ತು. ಈ ಮೂಲಕ ವಿದ್ಯುತ್‌ ಕ್ಷೇತ್ರಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ಶೇ.5.02ರಷ್ಟು ಹೆಚ್ಚುವರಿ ಬೆಳವಣಿಗೆ ದಾಖಲಿಸಲಾಗಿದೆ.

ಅನಿಯಂತ್ರಿತ ಕ್ಷೇತ್ರಕ್ಕೆ 171.236 ದಶಲಕ್ಷ ಟನ್‌ ಕಲ್ಲಿದ್ದಲು ಈ ವರ್ಷ ಪೂರೈಕೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 149.573 ದಶಲಕ್ಷ ಟನ್‌ ಪೂರೈಕೆಯಾಗಿತ್ತು. ಇಲ್ಲೂ ಶೇ.14.48ರಷ್ಚು ಬೆಳವಣಿಗೆ ದಾಖಲಾಗಿದೆ.ಮಿಷನ್‌ ಕೋಕಿಂಗ್‌ ಕೋಲ್‌:

ವಿದೇಶದಿಂದ ಕೋಕಿಂಗ್‌ ಕೋಲ್‌ ಆಮದು ಇಳಿಸಲು ಕಲ್ಲಿದ್ದಲು ಸಚಿವಾಲಯ "ಮಿಷನ್‌ ಕೋಕಿಂಗ್‌ ಕೋಲ್‌'''''''' ಎಂಬ ಕಾರ್ಯಕ್ರಮ ರೂಪಿಸಿದೆ. ಸ್ಟೀಲ್ ಕ್ಷೇತ್ರದಿಂದ ಹೆಚ್ಚುತ್ತಿರುವ ಕಲ್ಲಿದ್ದಲು ಬೇಡಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕಾರ್ಯಕ್ರಮದಡಿ ದೇಶಿ ಕಚ್ಚಾ ಕೋಕಿಂಗ್‌ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು 2024-25ರಲ್ಲಿ 77 ದಶಲಕ್ಷ ಟನ್‌ಗೆ ನಿಗದಿಪಡಿಸಲಾಗಿದೆ. 2029-30ನೇ ಹಣಕಾಸು ವರ್ಷದಲ್ಲಿ ದೇಶೀಯವಾಗಿ 140 ದಶಲಕ್ಷ ಟನ್‌ ಕಚ್ಚಾ ಕೋಕಿಂಗ್ ಕೋಲ್‌ ಉತ್ಪಾದನೆ ಗುರಿ ಹೊಂದಲಾಗಿದೆ.2029-30ನೇ ಹಣಕಾಸು ವರ್ಷದಲ್ಲಿ ಕೋಲ್‌ ಇಂಡಿಯಾದ ಸಹಸಂಸ್ಥೆಗಳಿಂದಲೇ 105 ದಶಲಕ್ಷ ಟನ್‌ ಕಚ್ಚಾ ಕೋಕಿಂಗ್‌ ಕಲ್ಲಿದ್ದಲು ಉತ್ಪಾದನೆ ಮಾಡುವ ಗುರಿ ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌