ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆ ರಾಮ ಮಂದಿರಕ್ಕೆ 3 ಲಿಫ್ಟ್‌ ಅಳವಡಿಕೆ

Published : Dec 30, 2024, 06:11 AM ISTUpdated : Dec 30, 2024, 10:41 AM IST
ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆ ರಾಮ ಮಂದಿರಕ್ಕೆ 3 ಲಿಫ್ಟ್‌ ಅಳವಡಿಕೆ

ಸಾರಾಂಶ

ರಾಮ ಮಂದಿರಕ್ಕೆ ಭಕ್ತರ ಅನುಕೂಲಕ್ಕಾಗಿ ಮಂದಿರದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಾಗುವುದು. ಅಂಗವಿಕಲರು ಮತ್ತು ವಿಐಪಿಗಳಿಗೆ ಪ್ರತ್ಯೇಕ ಲಿಫ್ಟ್‌ಗಳ ವ್ಯವಸ್ಥೆ ಇರಲಿದೆ.

ಅಯೋಧ್ಯೆ: ರಾಮ ಮಂದಿರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಂದಿರದ ಟ್ರಸ್ಟ್‌ ದೇವಳದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಿದೆ. ದೇಗುಲ ಮೂರು ಅಂತಸ್ತಿನದ್ದಾಗಿದ್ದು, ನೆಲಮಹಡಿಯಲ್ಲಿ ರಾಮನ ಗರ್ಭಗುಡಿಯಿದೆ. 1ನೇ ಮಹಡಿಯಲ್ಲಿ ರಾಮನ ದರ್ಬಾರ್‌ ಹಾಲ್‌ ಇದ್ದು, ಪ್ರಸ್ತುತ ಜನರು ಮೆಟ್ಟಿಲು ಹತ್ತಿಕೊಂಡು ದರ್ಬಾರ್‌ ಹಾಲ್‌ಗೆ ಹೋಗಬೇಕಾಗಿದೆ. ಇದು ಅಂಗವಿಕಲರಿಗೆ ಕಷ್ಟವಾಗಿರುವ ಕಾರಣ ಲಿಫ್ಟ್‌ ಅಳವಡಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 2 ಲಿಫ್ಟ್‌ಗಳನ್ನು ವಿಕಲ ಚೇತನರಿಗೆ ಮತ್ತೊಂದು ಲಿಫ್ಟ್‌ ಅನ್ನು ವಿಐಪಿಗಳು, ಸಾಧು ಸಂತರಿಗಾಗಿ ಅಳವಡಿಸಲಾಗುತ್ತಿದೆ ಎಂದರು.

ರಾಮ್‌ ಚರಣ್‌ 256 ಅಡಿ ‘ಗೇಮ್‌ಚೇಂಜರ್‌’ ಕಟೌಟ್‌

ವಿಜಯವಾಡ: ಖ್ಯಾತ ನಟ ರಾಮ್‌ ಚರಣ್‌ ಅವರ ಬಹುನಿರೀಕ್ಷಿತ ಗೇಮ್‌ ಚೇಂಜರ್‌ ಚಲನಚಿತ್ರ ಜ.10ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅವರ 256 ಅಡಿ ಎತ್ತರದ ಬೃಹತ್‌ ಕಟೌಟ್‌ ಹಾಕಲಾಗಿದೆ. ಚಿತ್ರನಟನೊಬ್ಬನ ಅಭಿಮಾನದಿಂದ ಹಾಕಲಾಗಿರುವ ಈವರೆಗಿನ ಅತಿದೊಡ್ಡ ಕಟೌಟ್‌ ಇದು ಎಂದು ಹೇಳಲಾಗುತ್ತಿದೆ.ಆರ್‌ಆರ್‌ಆರ್‌ ಸಿನಿಮಾದ ಯಶಸ್ಸಿನ ನಂತರ ರಾಮ್ ಚರಣ್‌ ಅವರ ಬಹುನಿರೀಕ್ಷೆಯ ಚಿತ್ರ ಗೇಮ್‌ ಚೇಂಜರ್‌. ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಶಂಕರ್‌ ನಿರ್ದೇಶಿಸುತ್ತಿದ್ದಾರೆ. ಜ.10ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಕಟೌಟ್‌ನ ಫೋಟೋಗಳು ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗೇಮ್‌ ಚೇಂಜರ್‌ನಲ್ಲಿ ರಾಮ್‌ ಚರಣ್‌ ಅ‍ವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದ ಹಿರೋಯಿನ್‌.

ವಿಮಾನ ದುರಂತಕ್ಕೆ ರಷ್ಯಾ ಕಾರಣ: ಅಜರ್ಬೈಜಾನ್ ಅಧ್ಯಕ್ಷ ಆರೋಪ

ಬಾಕು: 38 ಮಂದಿಯನ್ನು ಬಲಿ ಪಡೆದಿದ್ದ ಅಜರ್ಬೈಜಾನ್‌ ವಿಮಾನ ದುರಂತದ ಹಿಂದೆ ರಷ್ಯಾ ಕೈವಾಡ ಇದೆ ಎಂದು ಅಜರ್ಬೈಜಾನ್‌ ಅಧ್ಯಕ್ಷ ಇಲ್ಹಾಮ್ ಅಲಿಯೆಮ್ ಆರೋಪಿಸಿದ್ದಾರೆ. ‘ರಷ್ಯಾದ ಕ್ಷಿಪಣಿ ದಾಳಿಯಿಂದಲೇ ದುರಂತ ಸಂಭವಿಸಿದೆ. ಇದು ಉದ್ದೇಶಪೂರ್ವಕ ಅಲ್ಲದೇ ಇರಬಹುದು. ಆದರೂ ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ. ಶನಿವಾರವಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ದುರಂತಕ್ಕೆ ಕ್ಷಮೆಯಾಚಿಸಿದ್ದರು. ಈ ಬೆನ್ನಲ್ಲೇ ಅಜರ್ಬೈಜಾನ್ ಅಧ್ಯಕ್ಷ ರಷ್ಯಾ ವಿರುದ್ಧ ಆರೋಪಿಸಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ