Latest Videos

ರಷ್ಯಾದ ಡೆನಿಸ್‌ ಮಂಟುರೊವ್‌ ಭೇಟಿ ಮಾಡಿದ ಜೈಶಂಕರ್

By Suvarna NewsFirst Published Apr 18, 2023, 5:56 PM IST
Highlights

ರಷ್ಯಾದ ಉಪಪ್ರಧಾನಿ ಮಂಟುರೊವ್‌ ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌  

ನವದೆಹಲಿ(ಏಪ್ರಿಲ್ 18): ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ರಷ್ಯಾದ ಉಪಪ್ರಧಾನಿ ಡೆನಿಸ್ ಮಂಟುರೊವ್ ಅವರನ್ನು ಭೇಟಿ ಮಾಡಿದ್ದಾರೆ. ಡೆನಿಸ್‌ ಮಂಟುರೊವ್‌ ಎರಡು ದಿನದ ಪ್ರವಾಸಕ್ಕೆಂದು ಭಾರತಕ್ಕೆ ಸೋಮವಾರ ಬಂದಿದ್ದಾರೆ.

ರಷ್ಯಾದ ಕೈಗಾರಿಕಾ ಮತ್ತು ವ್ಯಾಪಾರ ಸಚಿವರೂ ಆಗಿರುವ ಮಂಟುರೊವ್ ಸೋಮವಾರ ದೆಹಲಿಗೆ ಬಂದಿಳಿದಿದ್ದಾರೆ.ಮಂಟುರೊವ್‌ ಅವರು ಎರಡು ದಿನದ ಭೇಟಿಗೆಂದು ಭಾರತಕ್ಕೆ ಬಂದಿರುವ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್‌ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದಾರೆ.

ದೇಶದ ಸ್ಥಿತಿ ಮೊದಲಿನಂತಿಲ್ಲ, ಎಲ್ಲದಕ್ಕೂ ಈಗ ಉತ್ತರ: ಚೀನಾ, ಪಾಕ್‌ಗೆ ಜೈಶಂಕರ್‌ ಎಚ್ಚರಿಕೆ

ಭಾರತ-ರಷ್ಯಾ ವ್ಯವಹಾರ ಕುರಿತ ಸಂವಾದದಲ್ಲಿ ರಷ್ಯಾ ಮತ್ತು ಭಾರತೀಯ ವ್ಯವಹಾರಗಳ ಪ್ರತಿನಿಧಿಗಳನ್ನು ಜೈಶಂಕರ್‌ ಹಾಗೂ ಮಂಟುರೊವ್‌ ಸೋಮವಾರ ಭೇಟಿಯಾಗಿದ್ದರು.

ರಷ್ಯಾ-ಭಾರತ ವ್ಯವಹಾರ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಮಂಟುರೊವ್, ಯುರೋಷಿಯನ್‌ ಆರ್ಥಿಕ ಒಕ್ಕೂಟದ ಜೊತೆ ಸೇರಿಕೊಂಡು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇವೆ. ಅಷ್ಟೇ ಅಲ್ಲದೇ ಎರಡು ದೇಶಗಳ ನಡುವೆ ವ್ಯಾಪಾರವನ್ನು ಹೆಚ್ಚಿಸುವ ಬಗ್ಗೆಯೂ ನಾವು ಆಸಕ್ತಿ ಹೊಂದಿದ್ದೇವೆ ಎಂದು ಅವರು ಹೇಳಿದರು. 

ಗಮನಾರ್ಹ ವಿಷಯವೆಂದರೇ INSTCಗೆ 2000 ರಲ್ಲಿ ಒಪ್ಪಿಗೆ ನೀಡಲಾಯಿತು. ಇದನ್ನು ಭಾರತ ಇರಾನ್ ಮತ್ತು ರಷ್ಯಾ 2002ರಲ್ಲಿ ಅಂಗೀಕರಿಸಿದವು. ಇನ್ನೂ ಪ್ರಾಯೋಗಿಕವಾಗಿ 2016ರಲ್ಲಿ ಆರಂಭಿಸಲಾಯಿತು.

ಅಲ್ಲದೇ, ನೇರ ವಾಯು ಸಂಪರ್ಕ ವಿಸ್ತರಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ. ಇದರಿಂದ ವ್ಯಾಪಾರ ನಡೆಸಲು ಹೆಚ್ಚು ಸಹಕಾರಿ ಆಗಲಿದೆ. ಅಷ್ಟೇ ಅಲ್ಲದೇ ಪ್ರವಾಸೋದ್ಯಮ ಸಹ ಇದರಿಂದ ಬೆಳೆಯಲಿದೆ. ಕೋವಿಡ್‌ನಿಂದ ರಷ್ಯಾ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು.ಪಾಶ್ಷಿಮಾತ್ಯ ದೇಶಗಳು ರಷ್ಯಾ ವಿರುದ್ಧ ಕೈಗೊಂಡಿರುವ ಹಲವಾರು ನಿರ್ಣಯಗಳು ಜಾಗತಿಕ ಮಾರುಕಟ್ಟೆಯಲ್ಲಿ ತುಂಬಾ ಸಮಸ್ಯೆಯನ್ನು ಉಂಟುಮಾಡಿದೆ ಎಂದು ಮಂಟುರೊವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರತಿಯೊಬ್ಬ ಪ್ರಜೆಯ ಹಿತ ಕಾಯುವದೇ ವಿದೇಶಾಂಗ ನೀತಿ : ಜೈಶಂಕರ

ಜಾಗತಿಕ ಮಾರುಕಟ್ಟೆಯಲ್ಲಿ ಸಮಸ್ಯೆಯುಂಟಾದ ಹಿನ್ನೆಲೆ ಅನೇಕ ದೇಶಗಳು ಹಣದುಬ್ಬರವನ್ನು ಎದುರಿಸಬೇಕಾಯಿತು. ಇದು ಅಂತಾರಾಷ್ಟ್ರೀಯ ಸಾರಿಗೆ ಸಂಚಾರ, ಸರಕುಗಳ ಸಾಗಣಿಕೆ, ಹಣಕಾಸಿನ ವಹಿವಾಟು ನಿರ್ವಹಣೆಯಲ್ಲಿ ತೊಂದರೆಯನ್ನು ಸೃಷ್ಟಿಸಿತು.ಈ ಎಲ್ಲಾ ಸನ್ನಿವೇಶಗಳ ಹೊರತಾಗಿಯೂ ಕಳೆದ ವರ್ಷ ರಷ್ಯಾದ ಜಿಡಿಪಿ ಕೇವಲ ಎರಡು ಪ್ರತಿಶತದಷ್ಟು ಮಾತ್ರ ಕಡಿಮೆಯಾಗಿದೆ. ಹಣದುಬ್ಬರ ಶೇ.12ಕ್ಕಿಂತ ಹೆಚ್ಚಾಗಿಲ್ಲ, ಅದು ಈಗ ಶೇ.3.2ರಷ್ಟು ಇದೆ. ನಿರುದ್ಯೋಗದ ಪ್ರಮಾಣ ಶೇ.3.7ರಷ್ಟು ಮಾತ್ರ ಇದೆ ಎಂದು ರಷ್ಯಾದ ಉಪಪ್ರಧಾನಿ ಡೆನಿಸ್ ಮಂಟುರೊವ್ ಹೇಳಿದರು.

ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ನಮ್ಮ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆ ಹೆಚ್ಚು ಪರಿಣಾಮ ಬೀರಿಲ್ಲ. ಬೇರೆ ದೇಶಗಳೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಇಟ್ಟುಕೊಳ್ಳಬಾರದು ಎಂಬ ಚಿಂತನೆ ರಷ್ಯಾಕ್ಕಿಲ್ಲ.ಇದು ಅವಾಸ್ತವಿಕವಾಗಿದೆ ಮತ್ತು ಇದರಿಂದ ನಾವು ಆರ್ಥಿಕವಾಗಿ ಯಾವ ರೀತಿಯ ಸಾಧನೆಯನ್ನೂ ಮಾಡಲು ಸಾಧ್ಯವಿಲ್ಲ.ನಾವು ಸ್ವಾವಲಂಬನೆಯನ್ನು ಸಾಧಿಸಲು ಇಂತಹ ಗುರಿಯನ್ನು ಹೊಂದಿಲ್ಲ. ಇದರಿಂದ ನಾವು ಬೇರೆ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಮಂಟುರೊವ್‌ ಸಂವಾದದಲ್ಲಿ ಹೇಳಿದ್ದಾರೆ.

ಬಳಿಕ ದೆಹಲಿಯಲ್ಲಿ ನಡೆದ ಭಾರತ-ರಷ್ಯಾ ವ್ಯವಹಾರ ಸಂವಾದವನ್ನು ಉದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮಾತನಾಡಿದರು. ನಾವು 2025ರೊಳಗೆ 30 ಶತಕೋಟಿ ಯುಎಸ್‌ ಡಾಲರ್‌ ವ್ಯಾಪಾರ ಗುರಿಯನ್ನು ದಾಟಲಿದ್ದೇವೆ. ಭಾರತ ಮತ್ತು ರಷ್ಯಾ ಎರಡೂ ದೇಶಗಳು ವ್ಯಾಪರಕ್ಕೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಭಾರತವನ್ನು "ಜಾಗತಿಕ ಉತ್ಪಾದನಾ ಕೇಂದ್ರ" ಮಾಡಬೇಕೆಂದು ನಾವು ನಿರ್ಧರಿಸಿದ್ದೇವೆ ಎಂದು ಜೈಶಂಕರ್‌ ಹೇಳಿದರು.

ಕಳೆದ ತಿಂಗಳು ಕೂಡ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಮಂಟುರೊವ್ ಅವರು ಐಆರ್‌ಐಜಿಸಿ-ಟಿಇಸಿಯ ವರ್ಚುವಲ್ ಸಭೆಯ ಸಹ-ಅಧ್ಯಕ್ಷರಾಗಿದ್ದರು.

click me!