
ಕೀವ್(ಮಾ.28): ಯುದ್ಧ ಆರಂಭವಾಗಿ 32 ದಿನಗಳಾದ ನಂತರ ರಷ್ಯಾ ವಿರುದ್ಧ ಉಕ್ರೇನ್ ಹೊಸ ರೀತಿಯ ಸಡ್ಡು ಹೊಡೆದಿದೆ. ಶೀಘ್ರವೇ ರಷ್ಯಾ ವಿರುದ್ಧ ಗೆರಿಲ್ಲಾ ಯುದ್ಧ ತಂತ್ರ ಆರಂಭಿಸುವುದಾಗಿ ಉಕ್ರೇನ್ ಗುಪ್ತಚರ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ.
‘ರಷ್ಯಾ ಉಕ್ರೇನನ್ನು ಉತ್ತರ ಹಾಗೂ ದಕ್ಷಿಣ ಕೊರಿಯಾ ರೀತಿ 2 ಭಾಗವಾಗಿ ವಿಭಾಗಿಸಲು ಯತ್ನಿಸುತ್ತಿದೆ. ಒಂದು ಭಾಗದಲ್ಲಿ ತನ್ನ ಪ್ರಾಬಲ್ಯ ಇರುವಂತೆ ನೋಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಪೂರ್ಣ ಉಕ್ರೇನನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಪ್ರಾಬಲ್ಯದ ಉಕ್ರೇನ್ ಭಾಗಗಳಲ್ಲಿ ರಷ್ಯಾ ಸೇನೆ ವಿರುದ್ಧ ನಮ್ಮ ಯೋಧರು ಗೆರಿಲ್ಲಾ ಯುದ್ಧ ತಂತ್ರ ಆರಂಭಿಸಲಿದ್ದಾರೆ’ ಎಂದು ಉಕ್ರೇನ್ ಮಿಲಿಟರಿ ಇಂಟಲಿಜೆನ್ಸ್ ಮುಖ್ಯಸ್ಥ ಕಿರಿಲೋ ಬುಡಾನೋವ್ ಘೋಷಿಸಿದ್ದಾರೆ.
ಉಕ್ರೇನ್‌ಗೆ ಮತ್ತಷ್ಟುಶಸ್ತ್ರಾಸ್ತ್ರ ಒದಗಿಸಿ: ಜೆಲೆನ್‌ಸ್ಕಿ
ರಷ್ಯಾ ಆಕ್ರಮಣದಿಂದ ಉಕ್ರೇನನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಷ್ಯಾವನ್ನು ವಿರೋಧಿಸುವ ಧೈರ್ಯವಿಲ್ಲ ಎಂದು ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಆರೋಪಿಸಿದ್ದಾರೆ. ಜೊತೆಗೆ ರಷ್ಯಾ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಉಕ್ರೇನ್‌ಗೆ ಮತ್ತಷ್ಟುಫೈಟರ್ ಜೆಟ್‌ಗಳು ಮತ್ತು ಟ್ಯಾಂಕರ್‌ಗಳ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ